Asianet Suvarna News Asianet Suvarna News

India Tour Of South Africa : ಏಕದಿನ ಸರಣಿಗೆ ತಂಡ ಆಯ್ಕೆ ಮುಂದೂಡಿಕೆ?

ಇನ್ನೂ ಬರದ ರೋಹಿತ್ ಶರ್ಮ ಫಿಟ್ ನೆಸ್ ವರದಿ
ಡಿಸೆಂಬರ್ 30 ಅಥವಾ 31ಕ್ಕೆ ತಂಡ ಆಯ್ಕೆ ಸಾಧ್ಯತೆ
ರೋಹಿತ್ ಅಲಭ್ಯರಾದಲ್ಲಿ ಕೆಎಲ್ ರಾಹುಲ್ ಆಗ್ತಾರೆ ಹಂಗಾಮಿ ನಾಯಕ

Team India ODI team selection postponed as selectors wait Captain Rohit Sharmas fitness status san
Author
Bengaluru, First Published Dec 28, 2021, 4:47 PM IST

ಮುಂಬೈ (ಡಿ.28): ಎಲ್ಲೂ ಅಂದುಕೊಂಡಂತೆ ಆಗಿದ್ದಲ್ಲಿ ಈ ವೇಳೆಗಾಗಲೇ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಟೀಮ್ ಇಂಡಿಯಾ (Team India) ಪ್ರಕಟಗೊಳ್ಳಬೇಕಿತ್ತು. ಆದರೆ, ನಾಯಕ (Captain) ರೋಹಿತ್ ಶರ್ಮ (Rohit Sharma)ಅವರ ಫಿಟ್ ನೆಸ್ ವರದಿಯಾಗಿ ಆಯ್ಕೆ ಸಮಿತಿ (Selectors) ಕಾಯುತ್ತಿರುವ ಕಾರಣ ಏಕದಿನ ಸರಣಿ ತಂಡ ಆಯ್ಕೆ ಮುಂದೂಡಿಕೆಯಾಗಿದೆ ಎಂ

ರೋಹಿತ್ ಶರ್ಮ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy)ಪುನಃಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದು, ಅವರ ಫಿಟ್ ನೆಸ್ ಬಗ್ಗೆ ಇನ್ನೂ ಸಂಪೂರ್ಣ ವರದಿ ಸಿಕ್ಕಿಲ್ಲ. ದಕ್ಷಿಣ ಅಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಅಭ್ಯಾಸ ನಡೆಸುವ ವೇಳೆ ರೋಹಿತ್ ಶರ್ಮ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದರು. ಅಂದಿನಿಂದಲೂ ಅವರು ಎನ್ ಸಿಎಯಲ್ಲಿ ಪುನಃಶ್ಚೇತನವನ್ನು ಮುಂದುವರಿಸಿದ್ದಾರೆ. ಆಯ್ಕ ಸಮಿತಿಯ ಸದಸ್ಯರು ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಏಕದಿನ ಟೂರ್ನಿ ಮುಗಿದ ದಿನವೇ ತಂಡದ ಆಯ್ಕೆಯನ್ನು ಮಾಡುವ ಯೋಚನೆಯಲ್ಲಿದ್ದರು. ಆದರೆ, ರೋಹಿತ್ ಶರ್ಮ ತಮ್ಮ ಫಿಟ್ ನೆಸ್ ಅನ್ನು ಮರಳಿ ಪಡೆಯಲು ಇನ್ನೂ ಕೆಲ ದಿನ ಹಿಡಿಯಲಿರುವ ಕಾರಣ ತಂಡದ ಆಯ್ಕೆಯನ್ನು ಮುಂದೂಡಿಕೆ ಮಾಡಲಾಗಿದೆ. ಹಾಗೇನಾದರೂ ರೋಹಿತ್ ಶರ್ಮ ಏಕದಿನ ಸರಣಿಗೆ ಅಲಭ್ಯರಾದಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಏಕದಿನ ಸರಣಿಗೆ ತಂಡದ ಆಯ್ಕೆ ತಡವಾಗಿದೆ ಎಂದು ಬಿಸಿಸಿಐನ (BCCI) ಅಧಿಕಾರಿಯೊಬ್ಬರು ಕೂಡ ಖಚಿತಪಡಿಸಿದ್ದಾರೆ. ಅದರೊಂದಿಗೆ ಆಲ್ರೌಂಡರ್ ಗಳಾದ ರವೀಂದ್ರ ಜಡೇಜಾ (Ravindra Jadeja) ಹಾಗೂ ಅಕ್ಸರ್ ಪಟೇಲ್ (Axar Patel)ಏಕದಿನ ಸರಣಿಗೂ ಲಭ್ಯರಿಲ್ಲ ಎಂದು ತಿಳಿಸಿದ್ದಾರೆ. "ಈಗ ಇರುವ ಮಾಹಿತಿಯ ಪ್ರಕಾರ, ಮೊದಲ ಟೆಸ್ಟ್ ಮುಗಿದ ಬೆನ್ನಲ್ಲಿಯೇ ತಂಡದ ಆಯ್ಕೆ ಆಗಲಿದೆ. ಡಿಸೆಂಬರ್ 30 ಅಥವಾ 31ರಂದು ಇದು ಆಗಬಹುದು. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಬಿಸಿಸಿಐ ಮಾಡಲಿದೆ. ಮರಳಿ ಫಿಟ್ ನೆಸ್ ಪಡೆಯಲು ರೋಹಿತ್ ಬಹಳ ಶ್ರಮಪಡುತ್ತಿದ್ದಾರೆ. ಆದರೆ, ಸ್ನಾಯುಸೆಳೆತದ ಗಾಯ ಬೇರೆರೀತಿಯದ್ದು, ತೀರಾ ಬೇಗ ವಾಸಿಯಾಗುವುದಿಲ್ಲ" ಎಂದಿದ್ದಾರೆ. ರವೀಂದ್ರ ಜಡೇಜಾ ಹಾಗೂ ಅಕ್ಸರ್ ಪಟೇಲ್ ಆಯ್ಕೆಗೆ ಲಭ್ಯರಿಲ್ಲ ಎಂದು ತಿಳಿಸಲಾಗಿದೆ. ಇನ್ನು ರೋಹಿತ್ ಶರ್ಮ ಬಗ್ಗೆ, ಆಯ್ಕೆ ಸಮಿತಿಯ ಸಭೆ ದಿನ ಹತ್ತಿನ ಬಂದಾಗ ನಿರ್ಣಯ ಮಾಡಲಾಗುತ್ತದೆ' ಎಂದು ವಿವರಣೆ ನೀಡಿದ್ದಾರೆ.

SA vs India Boxing Day Test: 55 ರನ್ ಅಂತರದಲ್ಲಿ ಉರುಳಿದ 7 ವಿಕೆಟ್, 327ಕ್ಕೆ ಭಾರತ ಆಲೌಟ್!
ಅವರು ಫಿಟ್ ಇಲ್ಲದೇ ಇದ್ದರೂ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮೊದಲ ಏಕದಿನ ಪಂದ್ಯ ಜನವರಿ 19ಕ್ಕೆ ನಡೆಯಲಿದೆ. ಇನ್ನೂ ಮೂರು ವಾರಗಳ ಅಂತರ ಇರುವ ಕಾರಣ ಅಷ್ಟರಲ್ಲಿ ರೋಹಿತ್ ತಮ್ಮ ಫಿಟ್ ನೆಸ್ ಅನ್ನು ಸಾಬೀತುಪಡಿಸುವ ಅವಾಶ ಹೊಂದಿದ್ಆರೆ. "ಆಯ್ಕೆ ಸಮಿತಿಯ ಕಟ್ ಆಫ್ ದಿನಾಂಕದ ವೇಳೆಗೆ ರೋಹಿತ್ ಫಿಟ್ ಆಗದೇ ಇದ್ದರೂ ತಂಡಕ್ಕೆ ಆಯ್ಕೆಯಾಗಬಹುದು. ಯಾಕೆಂದರೆ, ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ತಂಡದ ಮೊದಲ ಪಂದ್ಯಕ್ಕೆ ಇನ್ನೂ ಮೂರು ವಾರಗಳ ಅಂತರವಿದೆ. ಅಷ್ಟರಲ್ಲಿ ಅವರು ತಮ್ಮ ಫಿಟ್ ನೆಸ್ ಸಾಬೀತು ಮಾಡಬಹುದಾಗಿದೆ ಎಂದು ಹೇಳಿದ್ದಾರೆ. ಫಿಟ್ ನೆಸ್ ನ ಆಧಾರದಲ್ಲಿ ಎನ್ನುವ ನಿಯದಲ್ಲಿ ಅವರು ಆಯ್ಕೆಯಾಗುತ್ತಾರೆ. ಈ ಕುರಿತಂತೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಗಮನ ನೀಡಲಿದ್ದಾರೆ ಎಂದು ತಿಳಿಸಿದರು.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊರೋನಾ ಪಾಸಿಟಿವ್!
ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಳಪೆ ನಿರ್ವಹಣೆ ತೋರಿದ್ದರೂ ಶಿಖರ್ ಧವನ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಇನ್ನು ದೇಶೀಯ ಟೂರ್ನಿಗಳಲ್ಲಿ ಮಿಂಚಿನ ನಿರ್ವಹಣೆ ತೋರಿರುವ ಶಾರುಖ್ ಖಾನ್ ಬಗ್ಗೆಯೂ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಬಹುದು.

Follow Us:
Download App:
  • android
  • ios