ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಬುಮ್ರಾ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ಅನುಮಾನ. ಕುಲ್ದೀಪ್ ಯಾದವ್ ಆಡುವ ಸಾಧ್ಯತೆ ಇದೆ.
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ 5ನೇ ಹಾಗೂ ಕೊನೆ ಟೆಸ್ಟ್ ಪಂದ್ಯ ಗುರುವಾರ ಆರಂಭಗೊಳ್ಳಲಿದ್ದು, ಭಾರತ ತಂಡ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಖಚಿತ. ಆದರೆ ತಂಡದ ಸಂಯೋಜನೆ ಬಗ್ಗೆ ಇನ್ನೂ ಗೊಂದಲವಿದೆ.
ಈ ಸರಣಿಯಲ್ಲಿ ಭಾರತದ ಬೌಲಿಂಗ್ ಪಡೆ ನಿರೀಕ್ಷಿತ ಆಟವಾಡಿಲ್ಲ. ವಿಕೆಟ್ ಕೀಳುವ ಬೌಲರ್‌ಗಳ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ 5ನೇ ಟೆಸ್ಟ್‌ಗೆ ತಾರಾ ಸ್ಪಿನ್ನರ್ ಕುಲ್ದೀಪ್ ಯಾದವ್‌ರನ್ನು ಆಡಿಸಲಾಗುತ್ತದೆ ಎಂದು ವರದಿಯಾಗಿದೆ. ಅವರಿಗೆ ಶಾರ್ದೂಲ್ ಠಾಕೂರ್ ಜಾಗ ಬಿಟ್ಟುಕೊಡಬೇಕಾಗಬಹುದು. ಇನ್ನು, ಆಕಾಶ್‌ದೀಪ್ ಗಾಯದಿಂದ ಚೇತರಿಸಿಕೊಂಡಿದ್ದು, ಪಂದ್ಯಕ್ಕೆ ಲಭ್ಯವಿದ್ದಾರೆ. ಸಿರಾಜ್ ಜೊತೆ ಆಕಾಶ್‌ದೀಪ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಆದರೆ ಈಗ ಕುತೂಹಲ ಇರುವುದು ಬೂಮ್ರಾ ಸ್ಥಾನದ ಬಗ್ಗೆ. ಕಾರ್ಯದೊತ್ತದ ಕಾರಣಕ್ಕೆ ಸರಣಿಯ 5 ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಬುಮ್ರಾ ಆಡಲಿದ್ದಾರೆ ಎಂದು ಈಗಾಗಲೇ ಕೋಚ್ ಗಂಭೀರ್ ಸ್ಪಷ್ಟಪಡಿಸಿದ್ದರು. ಅವರು 3 ಪಂದ್ಯಗಳನ್ನು ಆಡಿದ್ದಾರೆ. ಆದರೆ ಕೊನೆ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕ. ಹೀಗಾಗಿ ಬುಮ್ರಾರನ್ನು ಆಡಿಸುವುದೋ ಅಥವಾ ವಿಶ್ರಾಂತಿ ನೀಡುವುದೋ ಎಂಬ ಗೊಂದಲ ತಂಡದಲ್ಲಿದೆ. ಮತ್ತೊಂದೆಡೆ ರಿಷಭ್ ಪಂತ್ ಬದಲು ಧ್ರುವ್ ಜುರೆಲ್ ಆಡುವುದು ಬಹುತೇಖ ಖಚಿತವಾಗಿದೆ.
ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್‌ಗಿಲ್ಲ ವೇಗಿ ಬುಮ್ರಾ?
ಲಂಡನ್: ಇಂಗ್ಲೆಂಡ್ ವಿರುದ್ಧ 5ನೇ ಹಾಗೂ ಕೊನೆ ಟೆಸ್ಟ್ ಪಂದ್ಯದಿಂದ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಕಾರ್ಯದೊತ್ತದ ತಗ್ಗಿಸುವ ನಿಟ್ಟಿನಲ್ಲಿ ಸರಣಿಯ 5 ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಬುಮ್ರಾ ಆಡಲಿದ್ದಾರೆ ಎಂದು ಈಗಾಗಲೇ ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದರು. ಅವರು ಈಗಾಗಲೇ 3 ಪಂದ್ಯಗಳನ್ನು ಆಡಿದ್ದಾರೆ. ಆದರೆ ಕೊನೆ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕ. ಅಲ್ಲದೆ 4ನೇ ಟೆಸ್ಟ್‌ನ 4ನೇ ದಿನದ ಮೊದಲ ಅವಧಿ ಬಳಿಕ ಬುಮ್ರಾ ಬೌಲಿಂಗ್ ಮಾಡಿಲ್ಲ. ಇದರಿಂದಾಗಿ ಒಟ್ಟು 5 ದಿನ ವಿಶ್ರಾಂತಿ ಸಿಗಲಿದೆ. ಇದೇ ಕಾರಣಕ್ಕೆ ಬುಮ್ರಾರನ್ನು 5ನೇ ಟೆಸ್ಟ್‌ನಲ್ಲಿ ಆಡಿಸುವ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಆದರೆ ಬಿಸಿಸಿಐ ವೈದ್ಯಕೀಯ ತಂಡದ ವರದಿ ಪ್ರಕಾರ, ಬುಮ್ರಾಗೆ ವಿಶ್ರಾಂತಿ ನೀಡಬೇಕಿದೆ. ಹೀಗಾಗಿ ಅವರು ಕೊನೆ ಟೆಸ್ಟ್‌ಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಅವರ ಬದಲು ಆಕಾಶ್‌ದೀಪ್ ತಂಡದಲ್ಲಿ ಸ್ಥಾನ ಪಡೆಯಬಹುದು.
ಇನ್ನು, ಕೊನೆ ಪಂದ್ಯದಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್‌ರನ್ನು ಆಡಿಸಲಾಗುತ್ತದೆ ಎಂದು ವರದಿಯಾಗಿದೆ. ಅವರಿಗೆ ಶಾರ್ದೂಲ್ ಠಾಕೂರ್ ಜಾಗ ಬಿಟ್ಟುಕೊಡಬೇಕಾಗಬಹುದು.
ಬೆನ್ ಸ್ಟೋಕ್ಸ್ ಸೇರಿ ನಾಲ್ವರು ಔಟ್: ಓಲಿ ಪೋಪ್ ನಾಯಕ
ಭಾರತ ಎದುರಿನ ಕೊನೆಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ 4 ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಭುಜದ ಗಾಯಕ್ಕೆ ತುತ್ತಾಗಿರುವ ನಾಯಕ ಬೆನ್ ಸ್ಟೋಕ್ಸ್ ಪಂದ್ಯಕ್ಕೆ ಗೈರಾಗಲಿದ್ದಾರೆ. ವೇಗಿ ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸ್, ಸ್ಪಿನ್ನರ್ ಡಾವ್ಸನ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಓಲಿ ಪೋಪ್ ತಂಡ ಮುನ್ನಡೆಸಲಿದ್ದಾರೆ. ಆಲ್ರೌಂಡರ್ ಜೇಕಬ್ ಬೆಥೆಲ್ ವೇಗಿ ಆಟ್ಕಿನ್ಸನ್, ಜೋಶ್ ಟಂಗ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇಂಗ್ಲೆಂಡ್(ಆಡುವ 11): ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್(ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜೆಕೊಬ್ ಬೆಥೆಲ್, ಜೆಮೀ ಸ್ಮಿತ್, ಕ್ರಿಸ್ ವೋಕ್ಸ್, ಆಟ್ಕಿನ್ಸನ್, ಜೇಮಿ ಓವರ್‌ಟನ್, ಜೋಶ್ ಟಂಗ್.
