Asianet Suvarna News Asianet Suvarna News

ರೋಹಿತ್ ಪಡೆಗೆ ಇಂಜುರಿಯದ್ದೇ ದೊಡ್ಡ ಸಮಸ್ಯೆ.! ಟೆಸ್ಟ್ ಸರಣಿ ಗೆಲ್ಲೋದೇ ಬಿಗ್ ಚಾಲೆಂಜ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವು ಟೀಂ ಇಂಡಿಯಾಗೆ ಬಿಗ್ ಚಾಲೆಂಜ್ ಆಗಿದೆ. ಯಾಕಂದ್ರೆ, ಒಂದೆಡೆ ತಂಡದ ಮೇನ್ ಪ್ಲೇಯರ್ ವಿರಾಟ್ ಕೊಹ್ಲಿ ಸರಣಿಯಿಂದಲೇ ಔಟಾಗಿದ್ದಾರೆ. ಮತ್ತೊಂದೆಡೆ ರೋಹಿತ್ ಶರ್ಮಾ ಪಡೆಗೆ ಇಂಜುರಿ ಸಮಸ್ಯೆ ಬೆನ್ನತ್ತಿದೆ. ಒಬ್ಬರಲ್ಲ ಒಬ್ಬ ಆಟಗಾರರು, ಇಂಜುರಿಗೆ ತುತ್ತಾಗ್ತಿದ್ದಾರೆ. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. 

Team India Injury concern ahead of remining 3 test match against England kvn
Author
First Published Feb 11, 2024, 11:16 AM IST

ಅದ್ಯಾಕೋ ಟೀಂ ಇಂಡಿಯಾಗೆ ಇಂಜುರಿ ಸಮಸ್ಯೆ ಬಿಟ್ಟು ಬಿಡದೇ ಕಾಡ್ತಿದೆ. ಏಕದಿನ ವಿಶ್ವಕಪ್ ವೇಳೆಯೂ ಈ ಸಮಸ್ಯೆ ಕಾಡಿತ್ತು. ಈಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆಯೂ ಅದೇ ರಿಪೀಟ್ ಆಗಿದೆ. ಇಂಜುರಿಯಿಂದ ರಿಕವರಿ ಆಗಿ ಕಮ್‌ಬ್ಯಾಕ್ ಮಾಡಿದ್ದ ಆಟಗಾರರೇ ಮತ್ತೆ ಇಂಜುರಿ ಗೊಳಗಾಗ್ತಿದ್ದಾರೆ.  ಇದರಿಂದ ತಂಡದ ಬ್ಯಾಲೆನ್ಸ್ ಹಳಿ ತಪ್ಪುತ್ತಿದೆ.. 

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವು ಬಿಗ್ ಚಾಲೆಂಜ್..!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವು ಟೀಂ ಇಂಡಿಯಾಗೆ ಬಿಗ್ ಚಾಲೆಂಜ್ ಆಗಿದೆ. ಯಾಕಂದ್ರೆ, ಒಂದೆಡೆ ತಂಡದ ಮೇನ್ ಪ್ಲೇಯರ್ ವಿರಾಟ್ ಕೊಹ್ಲಿ ಸರಣಿಯಿಂದಲೇ ಔಟಾಗಿದ್ದಾರೆ. ಮತ್ತೊಂದೆಡೆ ರೋಹಿತ್ ಶರ್ಮಾ ಪಡೆಗೆ ಇಂಜುರಿ ಸಮಸ್ಯೆ ಬೆನ್ನತ್ತಿದೆ. ಒಬ್ಬರಲ್ಲ ಒಬ್ಬ ಆಟಗಾರರು, ಇಂಜುರಿಗೆ ತುತ್ತಾಗ್ತಿದ್ದಾರೆ. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. 

ಯೆಸ್, ಟೀಂ ಇಂಡಿಯಾಗೆ ಇಂಜುರಿ ಸಮಸ್ಯೆ ಬಿಟ್ಟು ಬಿಡದೇ ಕಾಡ್ತಿದೆ. ಶ್ರೇಯಸ್ ಅಯ್ಯರ್ ಇಂಜುರಿಯಿಂದಾಗಿ ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್‌ಗಳಿಂದ ಔಟಾಗಿದ್ದಾರೆ. ಕಳೆದೊಂದು ವರ್ಷದಲ್ಲಿ ಶ್ರೇಯಸ್ ಇಂಜುರಿಯಿಂದ ತಂಡದಿಂದ ಹೊರಗುಳಿದಿರೋದು 2ನೇ ಬಾರಿಯಾಗಿದೆ. ಕಳೆದ ವರ್ಷ IPLಗೂ ಮುನ್ನ ಇಂಜುರಿಗೊಳಗಾಗಿದ್ದ ಅಯ್ಯರ್, ಟೀಂ ಇಂಡಿಯಾ ಪರ ಹಲವು ಸರಣಿಗಳನ್ನ ಮಿಸ್ ಮಾಡಿಕೊಂಡಿದ್ರು. 

ಏಷ್ಯಾಕಪ್ ಟೂರ್ನಿಗೂ ಮುನ್ನ ಶ್ರೇಯಸ್ ತಮ್ಮ ಫಿಟ್ನೆಸ್ ಪ್ರೂವ್ ಮಾಡಿದ್ರು. ಆ ಮೂಲಕ ತಂಡಕ್ಕೆ ಮರಳಿದ್ರು. ಆದ್ರೀಗ, ಮುಂಬೈಕರ್ಗೆ ಇಂಜುರಿ ಪ್ರಾಬ್ಲಮ್ ಕಾಣಿಸಿಕೊಂಡಿದೆ. ಶ್ರೇಯಸ್ ಅಷ್ಟೇ ಅಲ್ಲ, ಕೆ.ಎಲ್ ರಾಹುಲ್  ಪದೇ ಪದೇ ಇಂಜುರಿಗೆ ತುತ್ತಾಗುತ್ತಿದ್ದಾರೆ. ಫಿಟ್ನೆಸ್ ಕಾರಣದಿಂದಾಗಿ ರಾಹುಲ್ ಆಂಗ್ಲರ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಕಣಕ್ಕಿಳಿಯಲಿಲ್ಲ. 

ರಾಹುಲ್ ಜೊತೆಗೆ ರವೀಂದ್ರ ಜಡೇಜಾ ಕೂಡ ಇಂಜುರಿಯಿಂದಾಗಿ ವೈಜಾಗ್ ಟೆಸ್ಟ್‌ನಿಂದ ಔಟಾಗಿದ್ರು. ಸದ್ಯ ರಾಹುಲ್ ಮತ್ತು ಜಡೇಜಾ ಇಬ್ಬರೂ ಫುಲ್‌ ಫಿಟ್ ಆಗಿದ್ದು, ಮತ್ತೆ ತಂಡಕ್ಕೆ ವಾಪಸ್ಸಾಗಿದ್ದಾರೆ. ಆದ್ರೆ, BCCIನ ಮೆಡಿಕಲ್ ಟೀಮ್, ಮೆಡಿಕಲ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದ್ಮೇಲೆನೆ, 3ನೇ ಟೆಸ್ಟ್ನಲ್ಲಿ ಇವರಿಬ್ಬರು ಆಡ್ತಾರಾ..? ಇಲ್ವಾ ಅನ್ನೋದು ಕನ್ಫರ್ಮ್ ಆಗಲಿದೆ.

ಇಂಜುರಿಯಿಂದಾಗಿ ತಂಡದಿಂದ ಶಮಿ ಹೊರಗೆ..!

ಇನ್ನು ಇಂಗ್ಲೆಂಡ್ ಟೆಸ್ಟ್ ಸರಣಿ ಅರಂಭಕ್ಕೂ ಮೊದಲೇ, ಮೊಹಮ್ಮದ್ ಶಮಿ ಇಂಜುರಿಂದಾಗಿ ತಂಡಕ್ಕೆ ಆಯ್ಕೆಯಾಗಲಿಲ್ಲ. ಏಕದಿನ ವಿಶ್ವಕಪ್ ಸಮರದಲ್ಲಿ ಶಮಿ ಅತ್ಯದ್ಭುತ ಪ್ರದರ್ಶನ ನೀಡಿದ್ರು. ಕೇವಲ 7 ಪಂದ್ಯಗಳಿಂದ 24 ವಿಕೆಟ್ ಬೇಟೆಯಾಡಿದ್ರು. ಅದ್ಭುತ ಫಾರ್ಮ್ನಲ್ಲಿ ಶಮಿಯ ಅಲಭ್ಯತೆಯೂ ಸದ್ಯ ಟೀಮ್ ಇಂಡಿಯಾಗೆ ಕಾಡ್ತಿದೆ. ಹಾರ್ದಿಕ್ ಪಾಂಡ್ಯ ಸಹ ಇಂಜುರಿ ಲಿಸ್ಟ್ನಲ್ಲಿದ್ದಾರೆ. ಒಟ್ಟಿನಲ್ಲಿ ಇಂಜುರಿ ಅನ್ನೋದು ಟೀಂ ಇಂಡಿಯಾ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಅನ್ನೋದಂತೂ ಸತ್ಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

Latest Videos
Follow Us:
Download App:
  • android
  • ios