ಲಕ್ನೋ(ಜು.12):  ಕೊರೋನಾ ವೈರಸ್ ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ನಗರ, ಜಿಲ್ಲೆ, ಗ್ರಾಮ, ಹಳ್ಳಿ ಸೇರಿದಂತೆ ಎಲ್ಲೆಡೆ ವ್ಯಾಪಿಸಿದೆ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಯಾರನ್ನೂ ಕೊರೋನಾ ಬಿಡುತ್ತಿಲ್ಲ. ಬಾಲಿವುಡ್ ಸೆಲೆಬ್ರೆಟಿಗಳಾದ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಪುತ್ರಿ ಆರಾಧ್ಯಗೂ ಕೊರೋನಾ ವೈರಸ್ ದೃಢಪಟ್ಟಿದೆ. ಇದರ ಬೆನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತನ್ ಚವ್ಹಾಣ್‌ಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದೆ.

2021ರ ಜೂನ್‌ವರೆಗೂ ಏಷ್ಯಾ​ಕಪ್‌ ಮುಂದೂ​ಡಿ​ಕೆ..! ಐಪಿಎಲ್ ಆಯೋಜನೆಗೆ ಮರುಜೀವ

ಮಾಜಿ ಕ್ರಿಕೆಟಿಗ, ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವರಾಗಿರುವ 72 ವರ್ಷದ ಚೇತನ್ ಚವ್ಹಾಣ್ ಆಸ್ಪತ್ರೆ ದಾಖಲಾಗಿದ್ದಾರೆ. ಶುಕ್ರವಾರ ಕೊರೋನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡ ಕಾರಣ ಪರೀಕ್ಷೆ ನಡೆಸಿದ್ದರು. ವರದಿಯಲ್ಲಿ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. 

ವಿರಾಟ್ ಕೊಹ್ಲಿ ಮೇಲೆ ಸ್ವಹಿತಾಸಕ್ತಿ ಆರೋಪ; ಬಿಸಿಸಿಐಗೆ ಪತ್ರ!.

ಚೇತನ್ ಚವ್ಹಾಣ್ ಕುಟುಂಬ ಸದಸ್ಯರಿಗೂ ಇದೀಗ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು, ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಚೇತನ್ ಚವ್ಹಾಣ್‍ಗೆ ಕೊರೋನಾ ವೈರಸ್ ಕಾಣಿಸಿಕೊಳ್ಳುವ ಮೂಲಕ ಟೀಂ ಇಂಡಿಯಾ ಕ್ರಿಕೆಟ್‌ಗೆ ಭೀತಿ ತಟ್ಟಿದೆ.

1969ರಿಂದ 1978ರ ವರೆಗೆ ಚೇತನ್ ಚವ್ಹಾಣ್ ಭಾರತದ ಪರ 40 ಟೆಸ್ಟ್ ಪಂದ್ಯ ಆಡಿದ್ದಾರೆ. ಟೆಸ್ಟ್ ಮಾದರಿಯಲ್ಲಿ 2,084 ರನ್ ಸಿಡಿಸಿದ್ದಾರೆ. ಇನ್ನು 7 ಏಕದಿನ ಪಂದ್ಯದಿಂದ 153 ರನ್ ದಾಖಲಿಸಿದ್ದಾರೆ.