ಬರೋಡಾ(ಮಾ.22): ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್, ಬರೋಡಾ ಮಹಿಳಾ ಕ್ರಿಕೆಟ್ ತಂಡದ ಕೋಚ್ ಅತುಲ್ ಬೆಡದೆ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಬರೋಡಾ ಮಹಿಳಾ ಕ್ರಿಕೆಟ್ ಆಟಗಾರ್ತಿ ಅತುಲ್ ವಿರುದ್ಧ ಆರೋಪ ಮಾಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಬರೋಡಾ ರಾಜ್ಯ ಕ್ರಿಕೆಟ್ ಸಂಸ್ಥೆ ಬರೋಡಾ ಮಹಿಳಾ ತಂಡದ ಕೋಚ್ ಹುದ್ದೆಯಿಂದ ಅತುಲ್‌ರನ್ನು ಅಮಾನತು ಮಾಡಿದೆ.

2020 ಐಪಿಎಲ್ ಟೂರ್ನಿ ನಡೆಯುತ್ತಾ? ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ರೆಡಿ

ಹಿಮಾಚಲ ಪ್ರದೇಶದಲ್ಲಿ ನಡೆದ ಟೂರ್ನಿ ವೇಳೆ ಕೋಚ್ ಅತುಲ್ ಬಿಡದೆ ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಲೈಂಗಿಕವಾಗಿ ಬಳಸಿಕೊಳ್ಳುವ ಯತ್ನ ಮಾಡುವುದರ ಜೊತೆಗೆ ಸಾರ್ವಜನಿಕವಾಗಿ ಅಮಾನಿಸಿದ್ದಾರೆ ಎಂದು ಬರೋಡಾ ಕ್ರಿತೆಟ್ ಸಂಸ್ಥೆ ದೂರು ನೀಡಿದ್ದಾರೆ.  ಪ್ರಾಥಮಿಕ ವರದಿ ಆಧರಿಸಿ ಅತುಲ್‌ಗೆ ಅಮಾನತು ಶಿಕ್ಷೆ ನೀಡಲಾಗಿದೆ.

ಕೊರೋನಾ ವೈರಸ್‌ಗೆ ಬಲಿಯಾದ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೊರೆಂಝೋ!

ಪ್ರಕರಣವನ್ನು ಬರೋಡಾ ಕ್ರಿಕೆಟ್ ಸಂಸ್ಥೆಯ ಕಮಿಟಿ ತನಿಖೆ ನಡೆಸುತ್ತಿದೆ. 53 ವರ್ಷದ ಅತುಲ್ ಬಿಡದೆ ಭಾರತದ ಪರ 13 ಏಕದಿನ ಪಂದ್ಯ ಆಡಿದ್ದಾರೆ. 1994ರಲ್ಲಿ ಭಾರತ ತಂಡ ಪ್ರತಿನಿದಿಸಿದ್ದ ಅತುಲ್, ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದರು. ವಿದಾಯದ ಬಳಿಕ ಕೋಚಿಂಗ್ ತರಬೇತಿ ಪಡೆದ ಅತುಲ್, ಬರೋಡಾ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅಮಾನತುಗೊಂಡಿದ್ದಾರೆ.