Asianet Suvarna News Asianet Suvarna News

ವಿ ಕೌಶಿಕ್ ಮ್ಯಾಜಿಕ್: ಮೊದಲ ದಿನವೇ ಕರ್ನಾಟಕ ಎದುರು ಗುಜರಾತ್ ಆಲೌಟ್

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್‌ ಯೋಜನೆ ಆರಂಭದಲ್ಲೇ ಕೈಹಿಡಿಯಿತು. ರಾಜ್ಯದ ಮೊನಚು ದಾಳಿ ಮುಂದೆ ತತ್ತರಿಸಿದ ಗುಜರಾತ್‌ 45 ರನ್‌ ಗಳಿಸುವಷ್ಟರಲ್ಲೇ ಪ್ರಮುಖ ನಾಲ್ವರನ್ನು ಕಳೆದುಕೊಂಡಿತು. ಪ್ರಿಯಾಂಕ್‌ ಪಾಂಚಲ್‌ 24, ಹೆಟ್‌ ಪಟೇಲ್‌ 4, ಹಿಂಗ್ರಾಜಿಯಾ 4 ರನ್‌ ಗಳಿಸಿದರೆ, ಸನ್‌ಪ್ರೀತ್‌ ಬಗ್ಗ ಶೂನ್ಯ ಸುತ್ತಿದರು. ಆದರೆ ಬಳಿಕ ಗುಜರಾತ್ ಪುಟಿದೆದ್ದಿತು.

Ranji Trophy V Koushik puts Karnataka in the driver seat against Gujarat kvn
Author
First Published Jan 13, 2024, 9:19 AM IST

ಅಹಮದಾಬಾದ್‌(ಜ.13): ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕದ ವೇಗಿಗಳು ಮತ್ತೊಮ್ಮೆ ಅಬ್ಬರದ ಪ್ರದರ್ಶನದೊಂದಿಗೆ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ. ವಾಸುಕಿ ಕೌಶಿಕ್‌, ಪ್ರಸಿದ್ಧ್‌ ಕೃಷ್ಣ ಹಾಗೂ ವೈಶಾಕ್‌ ಅವರನ್ನೊಳಗೊಂಡ ವೇಗದ ಬೌಲಿಂಗ್‌ ಪಡೆಯ ಮಾರಕ ದಾಳಿಯಿಂದಾಗಿ ಕರ್ನಾಟಕ ವಿರುದ್ಧ ಮೊದಲ ದಿನವೇ ಗುಜರಾತ್‌ 264 ರನ್‌ಗೆ ಆಲೌಟಾಗಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್‌ ಯೋಜನೆ ಆರಂಭದಲ್ಲೇ ಕೈಹಿಡಿಯಿತು. ರಾಜ್ಯದ ಮೊನಚು ದಾಳಿ ಮುಂದೆ ತತ್ತರಿಸಿದ ಗುಜರಾತ್‌ 45 ರನ್‌ ಗಳಿಸುವಷ್ಟರಲ್ಲೇ ಪ್ರಮುಖ ನಾಲ್ವರನ್ನು ಕಳೆದುಕೊಂಡಿತು. ಪ್ರಿಯಾಂಕ್‌ ಪಾಂಚಲ್‌ 24, ಹೆಟ್‌ ಪಟೇಲ್‌ 4, ಹಿಂಗ್ರಾಜಿಯಾ 4 ರನ್‌ ಗಳಿಸಿದರೆ, ಸನ್‌ಪ್ರೀತ್‌ ಬಗ್ಗ ಶೂನ್ಯ ಸುತ್ತಿದರು. ಆದರೆ ಬಳಿಕ ಗುಜರಾತ್ ಪುಟಿದೆದ್ದಿತು.

Breaking: ಇಂಗ್ಲೆಂಡ್‌ ವಿರುದ್ಧ ಮೊದಲ ಎರಡು ಟೆಸ್ಟ್‌ಗೆ ಭಾರತ ತಂಡ ಪ್ರಕಟ

5ನೇ ವಿಕೆಟ್‌ಗೆ ಜೊತೆಯಾದ ಕ್ಷಿತಿಜ್‌ ಪಟೇಲ್‌ ಹಾಗೂ ಉಮಾಂಗ್‌ ಹೋರಾಟದ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 276 ಎಸೆತಗಳಲ್ಲಿ 157 ರನ್‌ ಸೇರಿಸಿ ಚೇತರಿಕೆ ನೀಡಿದರು. ಆದರೆ 95 ರನ್‌ ಗಳಿಸಿದ್ದ ಕ್ಷಿತಿಜ್‌ರನ್ನು ವೈಶಾಕ್‌ ಪೆವಿಲಿಯನ್‌ಗೆ ಅಟ್ಟುವ ಮೂಲಕ ಮತ್ತೆ ಪಂದ್ಯದ ಮೇಲೆ ರಾಜ್ಯ ತಂಡ ಹಿಡಿತ ಸಾಧಿಸಿತು.

ದಿಢೀರ್‌ ಕುಸಿತ: 4 ವಿಕೆಟ್‌ಗೆ 202 ಗಳಿಸಿದ್ದ ಗುಜರಾತ್‌ ಬಳಿಕ ದಿಢೀರ್‌ ಕುಸಿತಕ್ಕೊಳಗಾಯಿತು. ಸ್ಪಿನ್ನರ್‌ ರೋಹಿತ್‌ ಕುಮಾರ್‌ ಉಮಾಂಗ್‌(72)ರನ್ನು ಔಟ್‌ ಮಾಡಿದರು. ನಾಯಕ ಚಿಂತನ್ ಗಾಜ ಔಟಾಗದೆ 45 ರನ್‌ ಗಳಿಸಿದರು.

ವಾಸುಕಿ ಕೌಶಿಕ್‌ 49ಕ್ಕೆ 4 ವಿಕೆಟ್‌ ಕಿತ್ತರೆ, ಪ್ರಸಿದ್ಧ್‌ ಕೃಷ್ಣ, ವಿಜಯ್‌ಕುಮಾರ್ ವೈಶಾಕ್‌ ಹಾಗೂ ಸ್ಪಿನ್ನರ್‌ ರೋಹಿತ್‌ ಕುಮಾರ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಗುಜರಾತ್‌ ಮೊದಲ ಇನ್ನಿಂಗ್ಸ್‌ 88 ಓವರಲ್ಲಿ 264/10 (ಕ್ಷಿತಿಜ್‌ 95, ಉಮಾಂಗ್‌ 72, ಕೌಶಿಕ್‌ 4-49)

ಶಿವಂ ದುಬೆ ಮಿಂಚಿನ ಇನ್ನಿಂಗ್ಸ್‌, ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದ ಭಾರತ!

ಸುಜಯ್‌ ಪಾದಾರ್ಪಣೆ: ಗುಜರಾತ್‌ ವಿರುದ್ಧ ಪಂದ್ಯದಲ್ಲಿ ಸುಜಯ್‌ ಸತೇರಿ ಅವರು ರಾಜ್ಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರು ಕರ್ನಾಟಕದ ಪರ ರಣಜಿ ಆಡುತ್ತಿರುವ 304ನೇ ಆಟಗಾರ ಹಾಗೂ 34ನೇ ವಿಕೆಟ್‌ ಕೀಪರ್‌. ಕಳೆದ ಪಂದ್ಯದಲ್ಲಿ ಆಡಿದ್ದ ಶ್ರೀನಿವಾಸ್‌ ಶರತ್‌ ಈ ಪಂದ್ಯದಿಂದ ಹೊರಬಿದ್ದರು. ಅವರ ಜಾಗಕ್ಕೆ ಸುಜಯ್‌ ಆಯ್ಕೆಯಾದರು.

ನೇಪಾಳದ ಸಂದೀಪ್‌ ಕ್ರಿಕೆಟ್‌ನಿಂದ ಅಮಾನತು

ಕಾಠ್ಮಂಡು: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ 8 ವರ್ಷ ಜೈಲು ಶಿಕ್ಷೆಗೊಳಗಾಗಿರುವ ನೇಪಾಳ ಕ್ರಿಕೆಟಿಗ ಸಂದೀಪ್‌ ಲಾಮಿಚ್ಚಾನೆಗೆ ಕ್ರಿಕೆಟ್‌ನಿಂದ ನಿಷೇಧ ಹೇರಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ನೇಪಾಳ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್‌ರನ್ನು ಕಳೆದ ವರ್ಷ ನಾಯಕತ್ವದಿಂದ ಕೆಳಗಿಳಸಲಾಗಿತ್ತು.
 

Follow Us:
Download App:
  • android
  • ios