Asianet Suvarna News Asianet Suvarna News

ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ರೀ ಎಂಟ್ರಿಗೆ ಮುಹೂರ್ತ ಫಿಕ್ಸ್..!

ಪಂತ್​ ಈಗಾಗಲೇ ಶೇಕಡಾ 70 ರಷ್ಟು ಫಿಟ್​ ಆಗಿದ್ದಾರೆ. ಇನ್ನು ಮೂರು ಮೂರ್ನಾಲ್ಕು ತಿಂಗಳೊಳಗೆ ಫುಲ್ ಫಿಟ್ ಆಗಲಿದ್ದಾರೆ. ಮುಂದಿನ ವರ್ಷ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲು ಭಾರತದ ಪ್ರವಾಸ ಕೈಗೊಳಲಿದೆ. ಈ ಸರಣಿ ವೇಳೆಗೆ ಪಂತ್​ ಟೀಂ ಇಂಡಿಯಾಗೆ ರೀಎಂಟ್ರಿ ನೀಡಲಿದ್ದಾರೆ ಅಂತ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.  

Team India Cricketer Rishabh Pant Bats For First Time After Deadly Car Accident kvn
Author
First Published Aug 17, 2023, 5:34 PM IST

ಬೆಂಗಳೂರು(ಆ.17)  ಟೀಂ ಇಂಡಿಯಾಗೆ ಗುಡ್​ ನ್ಯೂಸ್​ ಸಿಕ್ಕಿದೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ತಂಡದಿಂದ ಹೊರಗುಳಿದಿರೋ ರಿಷಭ್ ಪಂತ್,  ಅಚ್ಚರಿ ರೀತಿಯಲ್ಲಿ ರಿಕವರಿಯಾಗ್ತಿದ್ದಾರೆ. ಆ ಮೂಲಕ ಆದಷ್ಟು ಬೇಗ ಮತ್ತೆ ತಂಡಕ್ಕೆ ಕಮ್​ಬ್ಯಾಕ್ ಮಾಡಲು ರೆಡಿಯಾಗ್ತಿದ್ದಾರೆ.  

ಪ್ರಾಕ್ಟೀಸ್​ ಮ್ಯಾಚ್​ನಲ್ಲಿ  ಪಂತ್ ಭರ್ಜರಿ  ಬ್ಯಾಟಿಂಗ್..! 

ಯೆಸ್, ಇಂಜುರಿ ನಂತರ ಫಾರ್ ದಿ ಫಸ್ಟ್ ಟೈಮ್​ ಪಂತ್​ ಮೈದಾನದಕ್ಕಿಳಿದು ಬ್ಯಾಟ್ ಬೀಸಿದ್ದಾರೆ. ಪ್ರಾಕ್ಟೀಸ್ ಮ್ಯಾಚ್​ವೊಂದರಲ್ಲಿ ಆರಾಮಾಗಿ ಈ ಡೆಲ್ಲಿ ಡ್ಯಾಶರ್  ಬ್ಯಾಟಿಂಗ್ ಮಾಡಿದ್ದಾರೆ. ತಮ್ಮ ಟ್ರೇಡ್ ಮಾರ್ಕ್ ಶಾಟ್​ಗಳ ಮೂಲಕ ಮಿಂಚಿದ್ದಾರೆ.  

ಕಾರ್​ ಆ್ಯಕ್ಸಿಡೆಂಟ್​​ ನಂತರ  ಪಂತ್ ​ಕರಿಯರ್ ಮುಗಿದೇ  ಹೋಯ್ತು. ಪಂತ್​ ಮತ್ತೆ ಮೇಲೆದ್ದು ಬರೋದು  ಕಷ್ಟ ಅಂತ ಎಲ್ಲಾ  ಅಂದುಕೊಂಡಿದ್ರು. ಆದ್ರೆ, ಈ ಎಲ್ಲಾ ಮಾತುಗಳನ್ನು ಪಂತ್​ ಸುಳ್ಳಾಗಿಸ್ತಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೀಡುಬಿಟ್ಟಿರೋ ಪಂತ್ ಹಂತ ಹಂತವಾಗಿ ಚೇತರಿಸಿ ಕೊಳ್ತಿದ್ದಾರೆ. ಈಗಾಗಲೇ ವಿಕೆಟ್​ ಕೀಪಿಂಗ್ ಮತ್ತು ನೆಟ್ಸ್​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ. 140 ಕಿಮೀ ವೇಗದ ಬಾಲ್​ಗಳನ್ನ ಎದುರಿಸ್ತಿದ್ದಾರೆ. ಪಂತ್​ ರಿವಕರಿ ಕಂಡು ಎನ್‌ಸಿಎ ಟ್ರೈನರ್ಸೇ  ಶಾಕ್ ಆಗಿದ್ದಾರೆ. 

ಶೇಕಡಾ 70 ರಷ್ಟು ಫಿಟ್​, ಇಂಗ್ಲೆಂಡ್​ ಟೆಸ್ಟ್ ಸರಣಿಗೆ ಕಮ್​ಬ್ಯಾಕ್​..!

ಪಂತ್​ ಈಗಾಗಲೇ ಶೇಕಡಾ 70 ರಷ್ಟು ಫಿಟ್​ ಆಗಿದ್ದಾರೆ. ಇನ್ನು ಮೂರು ಮೂರ್ನಾಲ್ಕು ತಿಂಗಳೊಳಗೆ ಫುಲ್ ಫಿಟ್ ಆಗಲಿದ್ದಾರೆ. ಮುಂದಿನ ವರ್ಷ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲು ಭಾರತದ ಪ್ರವಾಸ ಕೈಗೊಳಲಿದೆ. ಈ ಸರಣಿ ವೇಳೆಗೆ ಪಂತ್​ ಟೀಂ ಇಂಡಿಯಾಗೆ ರೀಎಂಟ್ರಿ ನೀಡಲಿದ್ದಾರೆ ಅಂತ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.  

ಭಾರತ-ಪಾಕಿಸ್ತಾನ ಏಷ್ಯಾಕಪ್ ಟಿಕೆಟ್ ಖರೀದಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಟೀಂ ಇಂಡಿಯಾಗೆ ಕಾಡ್ತಿದೆ ಪಂತ್ ಅಲಭ್ಯತೆ..!

ಯೆಸ್, ಟೀಂ ಇಂಡಿಯಾಗೆ ಪಂತ್ ಅಲಭ್ಯತೆ ಕಾಡ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ನಲ್ಲಿ ಇದು ಸಾಬೀತಾಗಿದೆ. ಈ ಪಂದ್ಯದಲ್ಲಿ ಆಸೀಸ್ ಸ್ಪಿನ್ ದಾಳಿ ವಿರುದ್ಧ ಕೌಂಟರ್ ಅಟ್ಯಾಕ್ ಮಾಡಬಲ್ಲ ಬ್ಯಾಟ್ಸ್​ಮನ್ ಕೊರತೆ ಟೀಂ ಇಂಡಿಯಾಗೆ ಕಾಡಿತ್ತು. ಅದೇನೆ ಇರಲಿ, ಪಂತ್ ಆದಷ್ಟು ಬೇಗ ಗುಣಮುಖರಾಗಿ, ತಂಡಕ್ಕೆ ಕಮ್​ಬ್ಯಾಕ್ ಮಾಡಲಿ ಅನ್ನೋದೆ ಎಲ್ಲರ ಆಶಯವಾಗಿದೆ.

ವಿಶ್ವಕಪ್‌ಗೆ ಪಂತ್ ಅನುಮಾನ: ಗಾಯದಿಂದ ಈಗಷ್ಟೇ ಚೇತರಿಸಿಕೊಂಡಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಮುಂಬರುವ ಅಕ್ಟೋಬರ್ 05ರಿಂದ ಭಾರತದಲ್ಲೇ ಜರುಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನ ಎನಿಸಿದೆ. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಇನ್ನು ಎರಡನೇ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ನಡುವೆ ಪೈಪೋಟಿಯಿದೆ. ಒಂದು ವೇಳೆ ಕೆ ಎಲ್ ರಾಹುಲ್ ಕೂಡಾ ಫಿಟ್ ಆಗದೇ ಹೋದಲ್ಲಿ ಸಂಜು ಹಾಗೂ ಇಶಾನ್ ಕಿಶನ್‌, ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

Follow Us:
Download App:
  • android
  • ios