ಟೀಮ್ ಇಂಡಿಯಾ, ಕರ್ನಾಟಕ ವೇಗಿ ಪ್ರಸಿದ್ಧ ಕೃಷ್ಣ ವಿವಾಹ, ಕ್ರಿಕೆಟಿಗರ ಉಪಸ್ಥಿತಿ!
ಟೀಮ್ ಇಂಡಿಯಾ ಹಾಗೂ ಕರ್ನಾಟಕ ತಂಡದ ವೇಗಿ ಪ್ರಸಿದ್ಧ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡೆಲ್ ಕಂಪನಿಯಲ್ಲಿ ಅಮೆರಿಕಾದಲ್ಲಿ ಉದ್ಯೋಗದಲ್ಲಿರುವ ರಚನಾರನ್ನು ಪ್ರಸಿದ್ಧ ಕೃಷ್ಣ ಮದುವೆಯಾಗಿದ್ದಾರೆ.
ಬೆಂಗಳೂರು (ಜೂ.8): ಟೀಂ ಇಂಡಿಯಾ ಕ್ರಿಕೆಟಿಗ ಪ್ರಸಿದ್ಧ್ ಕೃಷ್ಣ ಅವರು ಗುರುವಾರ ತಮ್ಮ ನಿಶ್ಚಿತ ವಧು ರಚನಾ ಅವರನ್ನು ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹವಾದರು. ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡದ ಪರವಾಗಿ ಆಡುವ ಪ್ರಸಿದ್ಧ ಕೃಷ್ಣಮ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಇವರ ನಿಶ್ಚಿತಾರ್ಥ ಸಮಾರಂಭ ಮಂಗಳವಾರ ನಡೆದಿತ್ತು. ಸರಳ ಮದುವೆ ಸಮಾರಂಭದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಶ್ರೇಯಸ್ ಅಯ್ಯರ್, ಜಸ್‌ಪ್ರೀತ್ ಬುಮ್ರಾ ಹಾಗೂ ಕರ್ನಾಟಕ ತಂಡದ ಸಹ ಆಟಗಾರ ಕೆ.ಗೌತಮ್ ಹಾಜರಿದ್ದರು. ಇವರ ವಿವಾಹ ಸಮಾರಂಭ ಜೂನ್ 8 ರಂದು ನಡೆಯಿತು. 27 ವರ್ಷದ್ ಪ್ರಸಿದ್ಧ ಕೃಷ್ಣ ಗಾಯದ ಕಾರಣದಿಂದಾಗಿ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಈ ನಡುವೆ ಟೀಮ್ ಇಂಡಿಯಾ ಕ್ರಿಕೆಟಿಗರ ಪ್ರಸಿದ್ಧ ಕೃಷ್ಣ ತಮ್ಮ ನಿಶ್ಚಿತ ವಧು ರಚನಾ ಜೊತೆಗಿನ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆ. ಗೌತಮ್ ತಮ್ಮ ಇನ್ಸ್‌ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಹೊಸ ಜೋಡಿ, ಟೀಮ್ ಇಂಡಿಯಾದ ಆಟಗಾರರಾದ ಶ್ರೇಯಸ್ ಅಯ್ಯರ್ ಜಸ್‌ಪ್ರೀತ್ ಬುಮ್ರಾ ಹಾಗೂ ಕರ್ನಾಟಕ ತಂಡದ ಪ್ರಮುಖ ಆಟಗಾರರೊಂದಿಗೆ ನಿಂತುಕೊಂಡಿದೆ.
'ಕಂಗ್ರಾಟ್ಸ್ ಸ್ಕಿಡ್ಡಿ' ಎಂದು ಶ್ರೇಯಸ್ ಅಯ್ಯರ್ ಇನ್ಸ್‌ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಸ್ಕಿಡ್ಡಿ ಎನ್ನುವುದು ಇನ್ಸ್‌ಟಾಗ್ರಾಮ್‌ನಲ್ಲಿ ಪ್ರಸಿದ್ಧಕೃಷ್ಣ ಅವರ ಹ್ಯಾಂಡಲ್ ನೇಮ್ ಆಗಿದೆ. ಇನ್ನೊಂದೆಡೆ ಕೆ. ಗೌತಮ್ ಕೂಡ ಶುಭಾಶಯ ಕೋರಿದ್ದಾರೆ.
ಪ್ರಸಿದ್ಧ ಕೃಷ್ಣ ಪತ್ನಿ ರಚನಾ ಪರಿಚಯ: ರಚನಾ ಅವರ ಬಗ್ಗೆ ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಅವರ ಇನ್ಸ್‌ಟಾಗ್ರಾಮ್ ಪುಟ ಖಾಸಗಿಯಾಗಿ ಇದೆ. ಆದರೆ, ಹಲವು ವರದಿಗಳ ಪ್ರಕಾರ, ಡೆಲ್ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಆಕೆ ಕೆಲಸ ಮಾಡುತ್ತಿತ್ತು. ಅಮೆರಿಕದ ಟೆಕ್ಸಾಸ್‌ನಲ್ಲಿ ವಾಸವಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದಿರುವ ರಚನಾ, ಆರಂಭದಲ್ಲಿ ಸಿಸ್ಕೋದಲ್ಲಿ ಕೆಲಸ ಮಾಡಿದ್ದರು. ಅದರೊಂದಿಗೆ ಉದ್ಯಮಿಯಾಗಿಯೂ ಕೂಡ ರಚನಾ ಕೆಲವರಿಗೆ ಪರಿಚಿತರಾಗಿದ್ದಾರೆ. ಎಜುಟೆಕ್ ಉದ್ಯಮದಲ್ಲಿರುವ ಆಕೆ, ವಿದ್ಯಾರ್ಥಿಗಳಿಗೆ ಕಾರ್ಪೋರೇಟ್ ಜಗತ್ತಿನ ನಡುವಿನ ಸೇತುವಾಗಿ ಕೆಲಸ ಮಾಡುವ ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ.
ಇನ್ನು ಸ್ಟ್ರೆಸ್ ಫ್ರ್ಯಾಕ್ಚರ್ ಕಾರಣದಿಂದಾಗಿ 2023ರ ಐಪಿಎಲ್‌ಅನ್ನು ಪ್ರಸಿದ್ಧ ಕೃಷ್ಣ ತಪ್ಪಿಸಿಕೊಂಡಿಟ್ಟರು. ಆದರೆ, 2022ರ ಐಪಿಎಲ್‌ನ ಮಿನಿ ಹರಾಜಿನಲ್ಲಿ ಪ್ರಸಿದ್ಧರನ್ನು ರಾಜಸ್ಥಾನ ರಾಯಲ್ಸ್ ತಂಡ 10 ಕೋಟಿಗೆ ಖರೀದಿ ಮಾಡಿತ್ತು. ಅ ವರ್ಷ ಆಡಿದ 17 ಪಂದ್ಯಗಳಿಂದ 19 ವಿಕೆಟ್ ಉರುಳಿಸುವ ಮೂಲಕ ತಂಡ ರನ್ನರ್‌ಅಪ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, 2023ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಪ್ರಸಿದ್ಧ ಕೃಷ್ಣ ಬದಲಿಗೆ ಸಂದೀಪ್ ಶರ್ಮ ಅವರನ್ನು ಆಯ್ಕೆ ಮಾಡಿತ್ತು. ಆದರೆ, ಸಂದೀಪ್ ಶರ್ಮ 12 ಪಂದ್ಯಗಳಿಂದ ಕೇವಲ 10 ವಿಕೆಟ್ ಉರುಳಿಸಿದ್ದರು.
Ind vs WI: ಪ್ರಸಿದ್ಧ ಕೃಷ್ಣ ಸೂಪರ್ ಬೌಲಿಂಗ್, ಟೀಂ ಇಂಡಿಯಾಗೆ ಸರಣಿ ಗೆಲುವು!
ಇನ್ನು ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಆಡುವ ಮೂಲಕ ಪ್ರಸಿದ್ಧ ಕೃಷ್ಣ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಖಾಯಂ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರು. ಈ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್ ಕೂಡ ನಡೆಯಲಿದ್ದು,ತಂಡಕ್ಕೆ ಸೇರ್ಪಡೆಯಾಗುವ ಗುರಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. 14 ಏಕದಿನ ಪಂದ್ಯಗಳನ್ನು ಆಡಿರುವ ಬಲಗೈ ವೇಗಿ 25 ವಿಕೆಟ್ ಪಡೆದಿದ್ದು, ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ.
ಶಿಖರ್ ಧವನ್ ಮಗನನ್ನು ಭಾರತಕ್ಕೆ ಕರೆತರಲು ಆಕ್ಷೇಪಿಸಿದ ಆಯೇಷಾಗೆ ಛೀಮಾರಿ ಹಾಕಿದ ಡೆಲ್ಲಿ ಕೋರ್ಟ್..!