ಕ್ರಿಕೆಟಿಗ ಮಯಾಂಕ್ ಅಗರ್ವಾಲ್‌ಗೆ ಪ್ರಮೋಷನ್, ಗಂಡು ಮಗುವಿನ ತಂದೆಯಾದ ಬ್ಯಾಟ್ಸ್‌ಮನ್!
ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮಯಾಂಕ್ ಅಗರ್ವಾಲ್ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಮಯಾಂಕ್ ಪತ್ನಿ ಆಶಿತಾ ಸೂದ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮಗುವಿನ ಹೆಸರನ್ನು ಬಹಿರಂಗ ಪಡಿಸಿದ್ದಾರೆ.
ಬೆಂಗಳೂರು(ಡಿ.11): ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್ವಾಲ್‌ಗೆ ಪ್ರಮೋಷನ್ ಸಿಕ್ಕಿದೆ. ಮಯಾಂಕ್ ಇದೀಗ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಮಯಾಂಕ್ ಅಗರ್ವಾಲ್ ಪತ್ನಿ ಆಶಿತಾ ಸೂದ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಡಿಸೆಂಬರ್ 8 ರಂದು ಮಯಾಂಕ್ ದಂಪತಿಗೆ ಗಂಡು ಮಗುವಿನ ಆಗಮನವಾಗಿದೆ. 2018ರಲ್ಲಿ ಹೊಸ ಬದುಕಿಗೆ ಕಾಲಿಟ್ಟ ಮಯಾಂಕ್ ಅಗರ್ವಾರ್ ಹಾಗೂ ಆಶಿತಾ ಸೂದ್ ಇದೀಗ ಪೋಷಕರಾಗಿದ್ದಾರೆ. ಕರ್ನಾಟಕ ಕ್ರಿಕೆಟರ್ ಮಯಾಂಕ್, ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಗುವಿನ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಮಯಾಂಕ್ ಹಾಗೂ ಆಶಿತಾ ಸೂದ್ ತಮ್ಮ ಮುದ್ದಾದ ಮಗುವಿಗೆ ಅಯಾಂಶ್ ಎಂದು ಹೆಸರಿಟ್ಟಿದ್ದಾರೆ.
ಮಯಾಂಕ್ ಅಗರ್ವಾಲ್ 2018ರಲ್ಲಿ ಅಶಿತಾ ಸೂದ್‌ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಲಂಡನ್‌ನಲ್ಲಿ ರೋಮ್ಯಾಂಟಿಕ್ ಆಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಮಯಾಂಕ್ ಅಗರ್ವಾಲ್‌ಗೆ ಆಶಿತಾ ಸೂದ್ ಯೆಸ್ ಎಂದಿದ್ದರು. ಬಳಿಕ ಜನವರಿಯಲ್ಲಿ ಮಯಾಂಕ್ ಹಾಗೂ ಆಶಿತಾ ಸೂದ್ ನಿಶ್ಚಿತಾರ್ಥ ನಡೆದಿತ್ತು. ಜೂನ್ 4, 2018ರಲ್ಲಿ ಮಯಾಂಕ್ ಅಗರ್ವಾಲ್, ಆಶಿತಾ ಸೂದ್ ಕೈಹಿಡಿದಿದ್ದರು.
IPL Retention: ಪಂಜಾಬ್ ಕಿಂಗ್ಸ್‌ಗೆ ಧವನ್ ಕ್ಯಾಪ್ಟನ್, ಮಯಾಂಕ್ ರಿಲೀಸ್!
ಇತ್ತೀಚೆಗೆ ಮುಕ್ತಾಯಗೊಂಡ ವಿಜಯ್ ಹಜಾರ್ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು. ದಿಟ್ಟ ಹೋರಾಟ ನೀಡಿದ ಕರ್ನಾಟಕ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಮುಗ್ಗರಿಸಿತ್ತು. ಇದೀಗ ಮಯಾಂಕ್ ಅಗರ್ವಾಲ್ ಐಪಿಎಲ್ ಹರಾಜಿನತ್ತ ಚಿತ್ತ ಹರಿಸಿದ್ದಾರೆ. 2022ರ ಐಪಿಎಲ್ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಆದರೆ ಪಂಜಾಬ್ ಕಿಂಗ್ಸ್ ನಿರೀಕ್ಷಿತ ಹೋರಾಟ ನೀಡಲು ವಿಫಲವಾಗಿತ್ತು. ಹೀಗಾಗಿ ಪಂಜಾಬ್ ಕಿಂಗ್ಸ್, ಮಯಾಂಕ್ ಅಗರ್ವಾಲ್ ಸೇರಿದಂತೆ ಕೆಲ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.
ಡಿಸೆಂಬರ್ 23ರಂದು ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಉತ್ತಮ ಮೊತ್ತಕ್ಕೆ ಬಿಡ್ ಆಗು ನಿರೀಕ್ಷೆ ಇದೆ. ಮಯಾಂಕ್ ಅಗರ್ವಾಲ್ ತಮ್ಮ 1 ಕೋಟಿ ರೂಪಾಯಿ ಮೂಲ ಬೆಲೆಯ ಆಟಗಾರರಡಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ.
ಕರ್ನಾಟಕ ರಣಜಿ ತಂಕ್ಕೂ ಮಯಾಂಕ್‌ಗೆ ನಾಯಕತ್ವ?
ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದ ಮಯಾಂಕ್ ಅಗರ್ವಾಲ್‌ಗೆ ಇದೀಗ ರಣಜಿ ತಂಡದ ನಾಯತ್ವ ನೀಡವು ಸಾಧ್ಯತೆ ಹೆಚ್ಚಿದೆ. ಡಿ.13ರಿಂದ ಆರಂಭಗೊಳ್ಳಲಿರುವ 2022-23ನೇ ಸಾಲಿನ ರಣಜಿ ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) 32 ಆಟಗಾರರ ಸಂಭವನೀಯರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಈ ಪಟ್ಟಿಯಲ್ಲೂ ಮಯಾಂಕ್ ಅಗರ್ವಾಲ್ ಪ್ರಮುಖ ಸ್ಥಾನದಲ್ಲಿದ್ದಾರೆ.
ಸಂಭವನೀಯರ ಪಟ್ಟಿ: ಕೆ.ಎಲ್.ರಾಹುಲ್, ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಆರ್.ಸಮಥ್‌ರ್, ನಿಶ್ಚಲ್ ಡಿ., ಅಭಿನವ್ ಮನೋಹರ್, ಕೆ.ವಿ.ಸಿದ್ಧಾಥ್‌ರ್, ಅನೀಶ್ ಕೆ.ವಿ., ನಿಕಿನ್ ಜೋಸ್, ವಿಶಾಲ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಪರಾಸ್ ಆರ್ಯ, ಮೊಹ್ಸಿನ್ ಕಾನ್, ರಿತೇಶ್ ಭಟ್ಕಳ, ಶುಭಾಂಗ್ ಹೆಗ್ಡೆ, ರೋಹಿತ್ ಕುಮಾರ್, ರಿಶಿ ಬೋಪಣ್ಣ, ಶಶಿಕುಮಾರ್, ಶರತ್ ಶ್ರೀನಿವಾಸ್, ಶರತ್ ಬಿ.ಆರ್., ನಿಹಾಲ್, ಪ್ರಸಿದ್‌್ಧ ಕೃಷ್ಣ, ರೋನಿತ್ ಮೋರೆ, ವಿ.ವೈಶಾಖ್, ಎಂ.ವೆಂಕಟೇಶ್, ವಿದ್ಯಾಧರ್ ಪಾಟೀಲ್, ವಿ.ಕೌಶಿಕ್, ವಿದ್ವತ್ ಕಾವೇರಪ್ಪ.