ಟೀಂ ಇಂಡಿಯಾದಲ್ಲಿ ಮತ್ತೆ ಶುರುವಾಗಿದೆ ಮುಂಬೈ ಲಾಬಿ..?
ರೋಹಿತ್ ಶರ್ಮಾ ನಾಯಕರಾದ ಬಳಿಕ ಟೀಂ ಇಂಡಿಯಾದಲ್ಲಿ ಶುರುವಾಗಿದೆಯಾ ಮುಂಬೈ ಲಾಬಿ
90ರ ದಶಕಕ್ಕೂ ಮೊದಲು ಟೀಂ ಇಂಡಿಯಾದಲ್ಲಿ ಜೋರಾಗಿತ್ತು ಮುಂಬೈ ಲಾಬಿ
ಈಗ ಫಾರ್ಮ್ ಕಳೆದುಕೊಂಡಿದ್ದರೂ ಪದೇ ಪದೇ ಮುಂಬೈ ಆಟಗಾರನಿಗೆ ಸಿಗುತ್ತಿದೆ ಚಾನ್ಸ್
ಬೆಂಗಳೂರು(ಆ.04): 90ರ ದಶಕಕ್ಕೂ ಮುಂಚೆ ಭಾರತೀಯ ಕ್ರಿಕೆಟ್ನಲ್ಲಿ ಮುಂಬೈ ಲಾಬಿ ಜೋರಾಗಿತ್ತು. ಮುಂಬೈ ಆಟಗಾರರು ಫಾರ್ಮ್ನಲ್ಲಿ ಇರಲಿ, ಇಲ್ಲದಿರಲಿ, ಟೀಂ ಇಂಡಿಯಾದಲ್ಲಿ ಅವರ ಸ್ಥಾನ ಭದ್ರವಾಗಿರುತ್ತಿತ್ತು. ಆದರೆ ಭಾರತೀಯ ಕ್ರಿಕೆಟ್ನಲ್ಲಿ ಸೌರವ್ ಗಂಗೂಲಿ ಯುಗ ಆರಂಭವಾದ್ಮೇಲೆ ಮುಂಬೈ ಲಾಬಿಗೆ ಕಡಿವಾಣ ಹಾಕಿದ್ರು. ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಕ್ಯಾಪ್ಟನ್ ಆದ್ಮೆಲೂ ಭಾರತ ತಂಡದಲ್ಲಿ ಮುಂಬೈ ಪ್ರಾಬಲ್ಯ ಕಡಿಮೆಯಾಗಿತ್ತು. ಆದರೆ ಈಗ ರೋಹಿತ್ ಶರ್ಮಾ ನಾಯಕರಾಗುತ್ತಿದ್ದಂತೆ ಮತ್ತೆ ಮುಂಬೈ ಲಾಬಿ ಸ್ಟಾರ್ಟ್ ಆಗಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಔಟ್ ಆಫ್ ಫಾರ್ಮ್ನಲ್ಲಿರುವ ಶ್ರೇಯಸ್ ಅಯ್ಯರ್ಗೆ ಚಾನ್ಸ್ ಮೇಲೆ ಚಾನ್ಸ್ ನೀಡುತ್ತಿರುವುದು.
8 ಟಿ20 ಇನ್ನಿಂಗ್ಸ್ನಿಂದ ಹೊಡೆದಿಲ್ಲ ಒಂದೂ ಅರ್ಧಶತಕ:
ಮೊನ್ನೆಯ ಪಂದ್ಯ ಬಿಟ್ಟು, ಕಳೆದ 8 ಟಿ20 ಇನ್ನಿಂಗ್ಸ್ನಿಂದ ಶ್ರೇಯಸ್ ಅಯ್ಯರ್ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಸೌತ್ ಆಫ್ರಿಕಾ ಸಿರೀಸ್ ಭಾರತದಲ್ಲಿ ನಡೆದ್ರೂ ಐದು ಇನ್ನಿಂಗ್ಸ್ನಲ್ಲೂ ಫೇಲ್ ಆದ್ರು. ಇಂಗ್ಲೆಂಡ್ನಲ್ಲಿ ಸಿಕ್ಕಿದ ಒಂದು ಪಂದ್ಯದಲ್ಲಿ ಹೆಚ್ಚು ರನ್ ಗಳಿಸಲಿಲ್ಲ. ಇಷ್ಟಾದ್ರೂ ವೆಸ್ಟ್ ಇಂಡೀಸ್ ವಿರುದ್ಧ ಆಡಲು ಮತ್ತೆ ಚಾನ್ಸ್ ಕೊಟ್ರು. ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಶ್ರೇಯಸ್, 2ನೇ ಮ್ಯಾಚ್ನಲ್ಲಿ 10 ರನ್ಗೆ ಮುಗ್ಗರಿಸಿದ್ರು.
ಟೆಸ್ಟ್ ಮತ್ತು ಒನ್ಡೇಯಲ್ಲಿ ಉತ್ತಮ ಪ್ರದರ್ಶನ ನೀಡುವ ಶ್ರೇಯಸ್, ಟಿ20ಯಲ್ಲಿ ಮಾತ್ರ ರನ್ ಗಳಿಸಲು ಪರದಾಡುತ್ತಿದ್ದಾರೆ. ಕಳೆದ 8 ಟಿ20 ಇನ್ನಿಂಗ್ಸ್ನಿಂದ ಅವರು ಗಳಿಸಿರೋದು ಕೇವಲ 132 ರನ್. ಇದರಲ್ಲಿ 40 ರನ್ಗಳೇ ಗರಿಷ್ಠ. ಟಿ20 ವಿಶ್ವಕಪ್ ಹತ್ತಿರುವ ಇರುವಾಗ ಔಟ್ ಆಫ್ ಫಾರ್ಮ್ನಲ್ಲಿರುವ ಆಟಗಾರನಿಗೆ ಪದೇ ಪದೇ ಚಾನ್ಸ್ ಕೊಡ್ತಿರೋದ್ಯಾಕೆ..?
ಹೂಡಾ-ಸಂಜುಗೆ ಬೆಂಚ್, ಶ್ರೇಯಸ್ಗೆ ಚಾನ್ಸ್:
ಶ್ರೇಯಸ್ ಅಯ್ಯರ್ ಆಡಿರೋ ಸಲುವಾಗಿ ಇನ್ ಫಾರ್ಮ್ ಆಟಗಾರರಾದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಅವರನ್ನ ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಲಾಗ್ತಿದೆ. ಹೂಡಾ ಕಳೆದ 4 ಟಿ20 ಇನ್ನಿಂಗ್ಸ್ನಲ್ಲಿ ಒಂದು ಸತಕ ಸಹಿತ 205 ರನ್ ಹೊಡೆದು ಭರವಸೆ ಮೂಡಿಸಿದ್ದಾರೆ. ಇನ್ನು ಕೇರಳ ಪ್ಲೇಯರ್ ಸಂಜು ಸ್ಯಾಮ್ಸನ್ ಕಳೆದ ಮೂರು ಟಿ20 ಇನ್ನಿಂಗ್ಸ್ಗಳಿಂದ 134 ರನ್ ಬಾರಿಸಿದ್ದಾರೆ.
ಎಂ ಎಸ್ ಧೋನಿ ಫಾಲೋ ಮಾಡಲು ಹೋಗಿ ಎಡವಿಬಿದ್ದ ರೋಹಿತ್ ಶರ್ಮಾ..!
ಇಂತಹ ಫಾರ್ಮ್ನಲ್ಲಿರುವ ಆಟಗಾರರನ್ನು ಬೆಂಚ್ ಕಾಯಿಸಲು ಬಿಟ್ಟು, ಫಾರ್ಮ್ ಕಳೆದುಕೊಂಡಿರುವ ಶ್ರೇಯಸ್ ಅಯ್ಯರ್ಗೆ ಪದೇ ಪದೇ ಅವಕಾಶ ನೀಡುತ್ತಿರುವುದರ ವಿರುದ್ಧ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ. ಕೋಚ್ ದ್ರಾವಿಡ್ ಇರುವಾಗ ಮುಂಬೈ ಲಾಬಿಗೆ ಅವಕಾಶ ಮಾಡಿಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸ್ಟೋರಿಯ ಲಾಸ್ಟ್ ಪಂಚ್... ಮುಂಬೈನ ರೋಹಿತ್ ಶರ್ಮಾಗೆ ಅಚ್ಚುಮೆಚ್ಚಿನ ಆಟಗಾರ ಮುಂಬೈನ ಶ್ರೇಯಸ್ ಅಯ್ಯರ್.