ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮೊದಲ ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್‌ಗಿಂತ ಕೊಹ್ಲಿ ಕೇವಲ ಒಂದು ರೇಟಿಂಗ್ ಅಂಕ ಹಿಂದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದುಬೈ(ಅ.15): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮತ್ತೊಮ್ಮೆ ಅಗ್ರಸ್ಥಾನದತ್ತ ದಾಪುಗಾಲಿರಿಸಿದ್ದಾರೆ.
ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌ಗೆ ಬಂಪರ್..!
ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಅಜೇಯ 254 ರನ್ ಗಳಿಸಿದ ಕೊಹ್ಲಿ, ಒಟ್ಟು 936 ರೇಟಿಂಗ್ ಅಂಕ ಹೊಂದಿದ್ದು ಅಗ್ರಸ್ಥಾನದಲ್ಲಿರುವ ಆಸ್ಪ್ರೇಲಿಯಾದ ಸ್ಟೀವ್ ಸ್ಮಿತ್ (937)ಗಿಂತ ಕೇವಲ 1 ಅಂಕ ಹಿಂದಿದ್ದಾರೆ. ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 3ನೇ ಟೆಸ್ಟ್‌ನಲ್ಲಿ ಕೊಹ್ಲಿ, ಸ್ಮಿತ್‌ರನ್ನು ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗುವ ನಿರೀಕ್ಷೆ ಇದೆ. ವೈಜಾಗ್ ಟೆಸ್ಟ್ ಪಂದ್ಯದಲ್ಲಿ 20 ಹಾಗೂ ಅಜೇಯ 31 ರನ್'ಗಳನ್ನಷ್ಟೇ ಬಾರಿಸಿದ್ದ ಕೊಹ್ಲಿ, 2018ರ ಜನವರಿ ಬಳಿಕ ಮೊದಲ ಬಾರಿಗೆ 900 ರೇಟಿಂಗ್ ಅಂಕಪಟ್ಟಿಯಿಂದ ಕುಸಿತ ಕಂಡಿದ್ದರು.
ಸದಾ ಟೀಕಿಸುತ್ತಿದ್ದ ಕೊಹ್ಲಿಯನ್ನು ಹೊಗಳಿದ ಗಂಭೀರ್!
ಸತತ 2 ಪಂದ್ಯಗಳಲ್ಲಿ ಶತಕ ಸಿಡಿಸಿದ ಮಯಾಂಕ್ ಅಗರ್‌ವಾಲ್ 17ನೇ ಸ್ಥಾನಕ್ಕೇರಿದ್ದಾರೆ. ಚೇತೇಶ್ವರ್ ಪೂಜಾರ(04) ಹಾಗೂ ಅಜಿಂಕ್ಯ ರಹಾನೆ (09) ಅಗ್ರ 10ರಲ್ಲಿ ಮುಂದುವರಿದಿದ್ದಾರೆ.
ಬ್ಯಾಟಿಂಗ್ ರ‍್ಯಾಂಕಿಂಗ್ ಟಾಪ್ 10 ಪಟ್ಟಿ ಇಲ್ಲಿದೆ ನೋಡಿ...
1. ಸ್ಟೀವ್ ಸ್ಮಿತ್(Aus)
2. ವಿರಾಟ್ ಕೊಹ್ಲಿ(Ind)
3. ಕೇನ್ ವಿಲಿಯಮ್ಸನ್(NZ)
4. ಚೇತೇಶ್ವರ್ ಪೂಜಾರ(Ind)
5. ಹೆನ್ರಿ ನಿಕೋಲಸ್(NZ)
6. ಜೋ ರೋಟ್(Eng)
7. ಟಾಮ್ ಲಾಥಮ್(NZ)
8. ದೀಮುತ್ ಕರುಣರತ್ನೆ(SL)
9. ಅಜಿಂಕ್ಯ ರಹಾನೆ(Ind)
10. ಕ್ವಿಂಟನ್ ಡಿಕಾಕ್(SA)