Breaking: ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯುವ ನಿರ್ಧಾರ ಮಾಡಿದ ರೋಹಿತ್‌ ಶರ್ಮ

ಭಾರತ ಟೆಸ್ಟ್‌ ತಂಡ ನಾಯಕ ರೋಹಿತ್‌ ಶರ್ಮ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ.

 

Team India Captain Rohit Sharma Opts Out of Sydney Test san

ಸಿಡ್ನಿ (ಜ.2): ಭಾರತ ಟೆಸ್ಟ್‌ ತಂಡ ನಾಯಕ ರೋಹಿತ್‌ ಶರ್ಮ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಸಿಡ್ನಿಯಲ್ಲಿ ಶುಕ್ರವಾರದಿಂದ ಟೆಸ್ಟ್‌ ಆರಂಭವಾಗಬೇಕಿತ್ತು. ಟೆಸ್ಟ್‌ ಪಂದ್ಯಕ್ಕೆ ಒಂದು ದಿನ ಮುನ್ನವೇ ರೋಹಿತ್‌ ಶರ್ಮ ಪಂದ್ಯದಿಂದ ಹೊರಗುಳಿಯುವ ನಿರ್ಧಾರ ಪ್ರಕಟ ಮಾಡಿದ್ದಾರೆ. ಅದರೊಂದಿಗೆ ಅವರು ಸಿಡ್ನಿ ಟೆಸ್ಟ್‌ ಪಂದ್ಯದೊಂದಿಗೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುವ ಆಸೆ ಕೂಡ ಭಗ್ನಗೊಂಡಿದೆ. ಅಂತಿಮ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಟೀಮ್‌ ಇಂಡಿಯಾದ ನೇತೃತ್ವದ ವಹಿಸಿಕೊಳ್ಳುವುದು ಖಚಿತವಾಗಿದೆ. ಇಂದು ಸಿಡ್ನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಮ್‌ ಇಂಡಿಯಾ ಕೋಚ್‌ ಗೌತಮ್‌ ಗಂಭೀರ್‌ ಕೂಡ ರೋಹಿತ್‌ ಶರ್ಮ ಪಂದ್ಯದಲ್ಲಿ ಆಡುವ ಬಗ್ಗೆ ಖಚಿತವಾಗಿ ತಿಳಿಸಿರಲಿಲ್ಲ. ಇದರ ನಡುವೆ ತಂಡದಿಂದ ಕೈಬಿಡುವ ಮುನ್ನವೇ ಸ್ವತಃ ರೋಹಿತ್‌ ಶರ್ಮ ತಾವು ಸಿಡ್ನಿ ಪಂದ್ಯದಿಂದ ಹೊರಗುಳಿಯುವುದಾಗಿ ಟೀಮ್‌ ಮ್ಯಾನೆಜ್‌ಮೆಂಟ್‌ಗೆ ತಿಳಿಸಿದ್ದಾರೆ. ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಶರ್ಮ ಆಡಿದ ಐದು ಇನ್ನಿಂಗ್ಸ್‌ಗಳಿಂದ ಕೇವಲ 31 ರನ್‌ ಬಾರಿಸಿದ್ದಾರೆ.

ಶುಭ್‌ಮನ್‌ ಗಿಲ್‌ ಪ್ಲೇಯಿಂಗ್‌ ಇಲೆವೆನ್‌ಗೆ ವಾಪಾಸಾಗಲಿದ್ದು, ಕೆಎಲ್‌ ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.  ಗಾಯಗೊಂಡಿರುವ ಅಕ್ಷದೀಪ್‌ ಸಿಂಗ್‌ ಬದಲು ಕನ್ನಡಿಗ ಪ್ರಸಿದ್ಧ ಕೃಷ್ಣ ಸ್ಥಾನ ಪಡೆಯಲಿದ್ದಾರೆ.

ಸಿಡ್ನಿ ಟೆಸ್ಟ್‌ನಲ್ಲಿ ಆಡದೇ ಇರುವ ತಮ್ಮ ನಿರ್ಧಾರವನ್ನು ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರ್ಕರ್‌ಗೆ ರೋಹಿತ್‌ ಶರ್ಮ ತಿಳಿಸಿದ್ದು, ಇಬ್ಬರೂ ಕೂಡ ಇದಕ್ಕೆ ಒಪ್ಪಿಕೊಂಡಿದ್ದಾರೆ. ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವುದು ಅನುಮಾನವಾಗಿದೆ. ಇನ್ನೊಂದೆಡೆ, ಮುಂದಿನ ಇಂಗ್ಲೆಂಡ್‌ ವಿರುದ್ಧದ ಸರಣಿಯೊಂದಿಗೆ 4ನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ 2 ವರ್ಷದ ಸೈಕಲ್‌ ಆರಂಭವಾಗಲಿದೆ. ಆದರೆ, ರೋಹಿತ್‌ ಇದರ ಭಾಗವಾಗಿಲ್ಲ. ಈ ಎಲ್ಲದರಿಂದಾಗಿ 2024ರ ಕೊನೆಯಲ್ಲಿ ಆಡಿದ ಬಾಕ್ಸಿಂಗ್‌ ಡೇ ಟೆಸ್ಟ್‌ ರೋಹಿತ್‌ ಶರ್ಮ ಅವರ ವಿದಾಯದ ಟೆಸ್ಟ್‌ ಆಗಿರುವ ಸಾಧ್ಯತೆಯೇ ಹೆಚ್ಚಿದೆ.

ಸಿಡ್ನಿ ಮ್ಯಾಚ್‌ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ರೋಹಿತ್‌ ಶರ್ಮ ವಿದಾಯ?

ಮೆಲ್ಬೋರ್ನ್‌ ಟೆಸ್ಟ್‌ನಿಂದ ಡ್ರಾಪ್‌ ಆಗಿದ್ದ ಶುಭಮನ್‌ ಗಿಲ್‌ ತಂಡಕ್ಕೆ ವಾಪಸಾಗಿದ್ದು, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಮಾಡಲಿದ್ದಾರೆ. ಕೆಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಇನ್ನಿಂಗ್ಸ್ ಆರಂಭಿಸಲಿದ್ದರೆ, ರಿಷಬ್‌ ಪಂತ್‌ ಸ್ಥಾನ ಸದ್ಯಕ್ಕೆ ಸೇಫ್‌ ಆಗಿದೆ.

2025ರಲ್ಲಿ ಟೀಮ್‌ ಇಂಡಿಯಾದ ಆಡಲಿರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ

Latest Videos
Follow Us:
Download App:
  • android
  • ios