ಎರಡು ಸಲ ದೊಡ್ಡ ಪೆಟ್ಟು ತಿಂದ್ರೂ ಬುದ್ಧಿ ಕಲಿಯದ ಭಾರತ ಲೆಫ್ಟಿ ವೇಗಿಗಳಿಗೆ ಬೆಚ್ಚಿ ಬೀಳ್ತಿದ್ದಾರೆ ಟಾಪ್ ಆರ್ಡರ್ ಬ್ಯಾಟರ್ಸ್ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾ ಭಾರತ?
ಬೆಂಗಳೂರು(ಜು.20): ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದಿದೆ. ಎಂ ಎಸ್ ಧೋನಿ ಬಳಿಕ ರೋಹಿತ್ ಶರ್ಮಾ ಬಳಗಕ್ಕೆ 2-1 ಅಂತರದ ಏಕದಿನ ಟ್ರೋಫಿ ಒಲಿದಿದೆ. ಇಂಡಿಯನ್ ಕಲಿಗಳ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಆದ್ರೆ ಟೀಂ ಇಂಡಿಯಾ ಸರಣಿ ಜಯಿಸಿದ ಮಾತ್ರಕ್ಕೆ ಹೆಚ್ಚು ಸಂಭ್ರಮಿಸಬೇಕಿಲ್ಲ. ಅದಕ್ಕಿಂತ ಹೆಚ್ಚು ಚಿಂತಿಸಬೇಕಾದ ಸಂಗತಿವೊಂದಿದೆ.
ಹೌದು, ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಗೆದ್ದ ಇಂಡಿಯನ್ ಕಲಿಗಳು ಲೆಫ್ಟ್ ಆರ್ಮ್ ಬೌಲರ್ ಅಂದ್ರೆ ಹೇಗೆ ಭಯ ಬೀಳ್ತಿದ್ದಾರೆ ಅನ್ನೋದನ್ನು ನಾವೆಲ್ಲರೂ ನೋಡಿದ್ದೇವೆ. ಅದು ಅಂತಿಂಥ ಆಟಗಾರರಲ್ಲ. ದಿ ಗ್ರೇಟ್ ಪ್ಲೇಯರ್ ಅನ್ನಿಸಿಕೊಂಡ ವಿರಾಟ್ ಕೊಹ್ಲಿ, ಡಬಲ್ ಸೆಂಚುರಿ ಸರದಾರ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್. ಮೂವರು ತಮಗಿರೋ ಅಪಾರ ಅನುಭವಕ್ಕೆ ಟೋಪ್ಲೆಯಂತ ಅನಾನುಭವಿ ವೇಗಿಗೆ ನೀರು ಕುಡಿಸಬಹುದಿತ್ತು. ಆದ್ರೆ ಬದಲಿಗೆ ಟೋಪ್ಲೆ ಅನ್ನೋ ಎಡಗೈ ಬೌಲರ್ ಮುಂದೆ ಸುಲಭವಾಗಿ ಶಸ್ತ್ರತ್ಯಾಗ ಮಾಡಿಬಿಟ್ಟಿದ್ರು. ಟಾಪ್ ಆರ್ಡರ್ ಬ್ಯಾಟರ್ಸ್ ಡಿಸೈಡರ್ ಮ್ಯಾಚ್ನಲ್ಲಿ ವರ್ಸ್ಟ್ ಆಟವಾಡಿ ಟೀಕೆ ಎದುರಿಸಿದ್ರು. ಅಲ್ಲಿಗೆ ಈಗಲೂ ಟೀಂ ಇಂಡಿಯಾ ಬ್ಯಾಟರ್ಗಳು ಎಡಗೈ ವೇಗಿಗಳಿಗೆ ಬೆಚ್ಚಿ ಬೀಳ್ತಾರೆ ಅನ್ನೋ ಪ್ರೂವ್ ಆಗಿತ್ತು. ಇದು ಮೊನ್ನೆ ಮ್ಯಾಚ್ನ ಕಥೆಯಷ್ಟೇ ಅಲ್ಲ. ಕಳೆದ ಆರು ವರ್ಷಗಳಿಂದ ಲೆಪ್ಟ್ ಆರ್ಮ್ ಬೌಲರ್ಸ್ಗೆ ಭಾರತೀಯ ಪ್ಲೇಯರ್ಸ್ ತಿಣುಕಾಡ್ತಿದ್ದಾರೆ. ಇಷ್ಟಾದ್ರು ಈ ಮಿಸ್ಟೇಕ್ಸ್ನಿಂದ ಇನ್ನೂ ಬುದ್ಧಿ ಕಲಿತಿಲ್ಲ.
ಚಾಂಪಿಯನ್ಸ್ ಟ್ರೋಫಿ ಕನಸಿಗೆ ಲೆಫ್ಟಿ ಬೌಲರ್ಸ್ ವಿಲನ್ :
2017ರ ಚಾಂಪಿಯನ್ಸ್ ಟ್ರೋಫಿಯನ್ನ ಭಾರತ ಕೂದಲೆಳೆ ಅಂತರದಲ್ಲಿ ಸೋತಿತ್ತು. ಈ ಆಸೆ ಕಮರಿಸಿದ್ದು ಒಬ್ಬ ಲೆಫ್ಟ್ ಆರ್ಮ್ ಬೌಲರ್. ಫೈನಲ್ ಪಂದ್ಯದಲ್ಲಿ ಪಾಕ್ನ ಮೊಹಮ್ಮದ್ ಅಮೀರ್ ಮಾರಕವಾಗಿದ್ರು. ರೋಹಿತ್, ಕೊಹ್ಲಿ ಹಾಗೂ ಧವನ್ ವಿಕೆಟ್ ಪಡೆದು ಟ್ರೋಫಿ ಕನಸಿಗೆ ಕೊಳ್ಳಿಯಿಟ್ಟಿದ್ರು.
India Tour Of England ಇಂಗ್ಲೆಂಡಲ್ಲಿ ಭಾರತ ವೇಗಿಗಳ ಮಿಂಚು!
2021ರ ಟಿ20 ವಿಶ್ವಕಪ್ನಲ್ಲಿ ಶಾಹೀನ್ ಆಗಿದ್ರೂ ಕಿಲ್ಲರ್ :
ಇನ್ನು 2017ರ ಚಾಂಪಿಯನ್ಸ್ ಟ್ರೋಫಿ ಮಾತ್ರವಲ್ಲ. ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲೂ ಎಡಗೈ ಬೌಲರ್ಸ್ ಭಾರತಕ್ಕೆ ಮಗ್ಗುಲ ಮುಳ್ಳಾಗಿ ಕಾಡಿದ್ರು. ಲೀಗ್ ಪಂದ್ಯದಲ್ಲಿ ಪಾಕ್ನ ಶಾಹೀನ್ ಅಫ್ರಿದಿ ಆರಂಭಿಕ ಮೂವರು ವಿಕೆಟ್ ಪಡೆದು ದೊಡ್ಡ ಆಘಾತ ನೀಡಿದ್ರು. ಈ ಪಂದ್ಯದಲ್ಲಿ ಭಾರತ ಹೀನಾಯ ಸೋಲುಂಡಿತ್ತು.
2022ರ ಟಿ20 ವಿಶ್ವಕಪ್ಗೆ ಇನ್ನೂ 3 ತಿಂಗಳಷ್ಟೇ ಉಳಿದಿದೆ. ಇನ್ನಾದ್ರು ಭಾರತ ಲೆಫ್ಟಿ ಬೌಲರ್ಸ್ ಫೋಬಿಯಾದಿಂದ ಹೊರಬೇಕು. ಇಲ್ಲವಾದ್ರೆ ಈ ವೀಕ್ನೆಸ್ಸೇ ಈ ಸಲ ಟಿ20 ವಿಶ್ವಕಪ್ ಗೆಲ್ಲುವ ಮಹಾದಾಸೆಗೆ ಕೊಳ್ಳಿಯಿಟ್ರು ಅಚ್ಚರಿಯಿಲ್ಲ.
