Asianet Suvarna News Asianet Suvarna News

ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕ್ರಿಕೆಟ್ ಕರಿಯರ್ ಇನ್ನೂ ಮುಗಿದಿಲ್ಲ..!

* ಕಳಪೆ ಫಾರ್ಮ್‌ನಿಂದ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಚೇತೇಶ್ವರ್ ಪೂಜಾರ

* ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿರುವ ಸೌರಾಷ್ಟ್ರ ಬ್ಯಾಟರ್

* ಕೌಂಟಿ ಕ್ರಿಕೆಟ್‌ನಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಪೂಜಾರ

Team India Batter Cheteshwar Pujara Test Cricket Career not yet over kvn
Author
Bengaluru, First Published May 9, 2022, 6:09 PM IST

ಬೆಂಗಳೂರು(ಮೇ.09): 2021 ಹಾಗೂ 2022. ಈ ಎರಡು ವರ್ಷಗಳಲ್ಲಿ ಚೇಶೇಶ್ವರ್​ ಪೂಜಾರ ಅನ್ನೋ ಟೆಸ್ಟ್​​ ಸ್ಪೆಶಲಿಸ್ಟ್​ ಸತತ ವೈಫಲ್ಯ ಕಂಡಿದ್ರು. ದೇಶಿ ಹಾಗೂ ವಿದೇಶಿ ಪಿಚ್​​ನಲ್ಲಿ ರನ್​​ ಬರ ಅನುಭವಿಸಿದ್ರು. ಇಂಗ್ಲೆಂಡ್​​, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮುಗ್ಗರಿಸಿ ಮುಖಭಂಗಕ್ಕೆ ತುತ್ತಾದ್ರು. ಏಕಾಂಗಿಯಾಗಿ ನಿಂತು ಪಂದ್ಯ ಗೆಲ್ಲಿಸಿಕೊಡ್ತಿದ್ದ ಸೆಕೆಂಡ್ ವಾಲ್ ಒಂದೊಂದು ರನ್​ಗೂ ಹೆಣಗಾಡಿದ್ರು. ಈ ಎರಡು ವರ್ಷಗಳಲ್ಲಿ ಒಂದೂ ಶತಕ ಗಳಿಸಲಿಲ್ಲ. ಯಾವಾಗ ಪೂಜಾರ ಹಳೇ ಚಾರ್ಮ್​ ಕಳೆದುಕೊಂಡ್ರೋ ಸೆಲೆಕ್ಟರ್ಸ್​ ಹಿಂದೆ ಮುಂದೆ ನೋಡದೇ ಜೂನಿಯರ್ ವಾಲ್​ರನ್ನ ಟೀಂ​ ಇಂಡಿಯಾದಿಂದ ಕೈಬಿಟ್ಟು ಶಾಕ್​ ನೀಡಿದ್ರು. 

ಮತ್ತೆ ತಂಡಕ್ಕೆ ಮರಳಬೇಕಾದ್ರೆ ಡೊಮೆಸ್ಟಿಕ್​ ಆಡಬೇಕು. ಅಲ್ಲಿ ಅದ್ಭುತ ಪ್ರದರ್ಶನ ನೀಡಿದರಷ್ಟೇ ಟೀಂ​ ಇಂಡಿಯಾ ಬಾಗಿಲು ತೆರೆಯಲಿದೆ ಎಂದು ಖಡಕ್ ಸೂಚನೆ ಕೊಟ್ಟಿದ್ರು. ಎಷ್ಟೇ ಆದ್ರೂ ಪೂಜಾರ ಛಲದಂಕ ಮಲ್ಲ ನೋಡಿ. ಡ್ರಾಪ್​ ಆದ ದಿನವೇ ಮತ್ತೆ ಟೀಂ​ ಇಂಡಿಯಾಗೆ ಎಂಟ್ರಿ ಕೊಡುವ ಶತಪಗೈದ್ರು. ಅಂದಿನಿಂದಲೇ ಸಿದ್ಧತೆ ಆರಂಭಿಸಿದ್ರು. ಪರಿಣಾಮ ಕಳೆದ ವರ್ಷಾಂತ್ಯದಲ್ಲಿ ತಂಡದಿಂದ ಹೊರಬಿದ್ದ  ಪೂಜಾರ ಕೌಂಟಿ ಚಾಂಪಿಯನ್​ಶಿಪ್​​ನಲ್ಲಿ ರನ್​ ಹೊಳೆ ಹರಿಸಿದ್ದಾರೆ. ಆ ಮೂಲಕ ಮೈ ಟೆಸ್ಟ್​  ಕೆರಿಯರ್​ ಇಸ್​ ನಾಟ್ ಓವರ್ ಅನ್ನೋ ಸ್ಟ್ರಾಂಗ್ ಮೆಸೆಜ್ ​​ಅನ್ನ ಆಯ್ಕೆಗಾರರಿಗೆ ರವಾನಿಸಿದ್ದಾರೆ.

ಕೌಂಟಿ ಚಾಂಪಿಯನ್​ಶಿಪ್​​​ನಲ್ಲಿ ಪೂಜಾರ ರನ್​​ ಭರಾಟೆ: 
ಇಂಗ್ಲೀಷ್​ ಕೌಂಟಿ ಚಾಂಪಿಯನ್​​ಶಿಪ್​​ನಲ್ಲಿ ಪೂಜಾರ ಸಸ್ಸೆಕ್ಸ್ ಪರ ಆಡ್ತಿದ್ದು ಧೂಳೆಬ್ಬಿಸಿದ್ದಾರೆ. ಈವರೆಗೆ ಆಡಿದ 4 ಪಂದ್ಯಗಳಲ್ಲಿ ಸತತ 4 ಸೆಂಚುರಿ ಸಹಿತ ಅಮೋಘ 701 ರನ್​ ಗಳಿಸಿದ್ದಾರೆ. ಆ ಮೂಲಕ ವೈಟ್ ರೆಡ್​ ಬಾಲ್​​ನಲ್ಲಿ ಪೂಜಾರರ ಹಳೆ ಖದರ್ ಮತ್ತೆ ಮರುಕಳಿಸಿದೆ.

2 ಡಬಲ್ ಸೆಂಚುರಿ ವೈಭವ:
ಇನ್ನು ನಾಲ್ಕು ಶತಕಗಳ ಪೈಕಿ, ಎರಡೂ ಅತ್ಯಾಮೋಘ ಡಬಲ್​ ಸೆಂಚುರಿ ಗಳಿಸಿದ್ದಾರೆ. ಡಹ್ರಾಮ್​​ ವಿರುದ್ಧ 203 ರನ್​ ಗಳಿಸಿದ್ರೆ, ಡರ್ಬಿಶೈರ್​ ವಿರುದ್ಧ  201 ರನ್​ ಗಳಿಸಿ ಮಿಂಚಿದ್ರು. ಸದ್ಯ ಈ ಎರಡು ದ್ವಿಶತಕಗಳು ಪೂಜಾರರ  ಕಾನ್ಫಿಡೆಂಟ್​ ಹೆಚ್ಚಿಸಿವೆ.

2007ರ ಟಿ20 ವಿಶ್ವಕಪ್‌ಗೆ ನಾನು ಟೀಂ ಇಂಡಿಯಾ ಕ್ಯಾಪ್ಟನ್‌ ಆಗ್ಬೇಕಿತ್ತು: ಯುವಿ ಸ್ಪೋಟಕ ಹೇಳಿಕೆ

ಪೂಜಾರಗೆ ಮತ್ತೆ ತೆರೆಯಲಿದೆ ಟೀಂ​ ಇಂಡಿಯಾ ಬಾಗಿಲು:
ಕೌಂಟಿ ಚಾಂಪಿಯನ್​ಶಿಪ್​​ನಲ್ಲಿ ರನ್​ ಗೋಪುರ ಕಟ್ಟಿರೋ ಪೂಜಾರ, ಮತ್ತೆ ಟೀಂ​ ಇಂಡಿಯಾ ಮೇಲೆ ಕಣ್ಣಿಟ್ಟಿದ್ದಾರೆ. ಐಪಿಎಲ್​ ಮುಗಿಯದ ಬಳಿಕ ಭಾರತ ತಂಡಕ್ಕೆ ಯಾವುದೇ ಟೆಸ್ಟ್ ಸರಣಿಗಳಿಲ್ಲ. ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್​​​​ ಇಂಡೀಸ್​​ ವಿರುದ್ಧ ಸೀಮಿತ ಓವರ್​​​ಗಳ ಸರಣಿ ಆಡಲಿದೆ. ಬಳಿಕ ಆಫ್ರಿಕಾ ಪ್ರವಾಸ ಕೈಗೊಳ್ಳುವ ರೋಹಿತ್ ಪಡೆ ಟೆಸ್ಟ್ ಆಡಲಿದೆ. ಆ ವೇಳೆ ಪೂಜಾರ ಸೆಲೆಕ್ಟ್​ ಆಗೋದು ಬಹುತೇಕ ಫಿಕ್ಸ್​​. ಡ್ರಾಪ್​​ ಅವಮಾನಕ್ಕೆ ತಕ್ಕ ಪ್ರತೀಕಾರ ನೀಡಿದಂತಾಗಲಿದೆ.

Follow Us:
Download App:
  • android
  • ios