Asianet Suvarna News Asianet Suvarna News

T20 World Cup: ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಬಗ್ಗೆ ಗುಡ್‌ ನ್ಯೂಸ್‌ ಕೊಟ್ಟ ರೋಹಿತ್ ಶರ್ಮಾ

* ಅಭ್ಯಾಸ ಪಂದ್ಯದಲ್ಲಿ ಒಂದು ಓವರ್‌ ಬೌಲಿಂಗ್ ಮಾಡದ ಹಾರ್ದಿಕ್‌ ಪಾಂಡ್ಯ

* ಹಾರ್ದಿಕ್ ಪಾಂಡ್ಯ ಬೌಲಿಂಗ್‌ ಬಗ್ಗೆ ಅಪ್‌ಡೇಟ್‌ ಕೊಟ್ಟ ರೋಹಿತ್ ಶರ್ಮಾ

* 6ನೇ ಬೌಲರ್‌ ಬಗ್ಗೆ ಮಾಹಿತಿ ನೀಡಿದ ರೋಹಿತ್ ಶರ್ಮಾ

Team Cricketer Rohit Sharma explains all rounder role in Indian T20 World Cup squad kvn
Author
Bengaluru, First Published Oct 21, 2021, 11:22 AM IST

ದುಬೈ(ಅ.21): ಟಿ20 ವಿಶ್ವಕಪ್‌ನ (ICC T20 World Cup) ಸೂಪರ್‌-12ರ ಸುತ್ತಿನಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ಬೌಲಿಂಗ್‌ ಮಾಡಲಿದ್ದಾರೆ ಎಂದು ಟೀಂ ಇಂಡಿಯಾ ಉಪನಾಯಕ ರೋಹಿತ್‌ ಶರ್ಮಾ (Rohit Sharma) ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

‘ಹಾರ್ದಿಕ್‌ ಉತ್ತಮವಾಗಿ ಆಡುತ್ತಿದ್ದಾರೆ. ಬೌಲಿಂಗ್‌ ಆರಂಭಿಸಲು ಕೆಲ ಸಮಯ ಹಿಡಿಯಲಿದೆ. ಆದರೆ ಟೂರ್ನಿಯ ಪ್ರಧಾನ ಸುತ್ತಿನ ಆರಂಭದಲ್ಲಿ ಬೌಲಿಂಗ್‌ಗೆ ಸಿದ್ಧವಿರಲಿದ್ದಾರೆ. ನಮ್ಮಲ್ಲಿ ಗುಣಮಟ್ಟದ ಪ್ರಮುಖ ಬೌಲರ್‌ಗಳಿದ್ದರೂ ತಂಡಕ್ಕೆ 6ನೇ ಬೌಲರ್‌ ಅಗತ್ಯವಿರುತ್ತದೆ. ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲೂ 6ನೇ ಆಯ್ಕೆ ಇದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು’ ಎಂದಿದ್ದಾರೆ. ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ (IPL) ನಲ್ಲಿ ಒಂದೂ ಎಸೆತ ಬೌಲ್‌ ಮಾಡದ ಪಾಂಡ್ಯ, ವಿಶ್ವಕಪ್‌ನ 2 ಅಭ್ಯಾಸ ಪಂದ್ಯಗಳಲ್ಲೂ ಬೌಲಿಂಗ್‌ ಮಾಡಿಲ್ಲ. ಹೀಗಾಗಿ ಅವರ ಫಿಟ್ನೆಸ್‌ ಬಗ್ಗೆ ಪ್ರಶ್ನೆಗಳು ಮುಂದುವರಿದಿವೆ.

T20 World Cup 2021 ಅಭ್ಯಾಸ ಪಂದ್ಯ; ರೋಹಿತ್ ಅಬ್ಬರಕ್ಕೆ ಸೋಲೊಪ್ಪಿಕೊಂಡ ಆಸೀಸ್!

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ (Australian Cricket Team) ವಿರುದ್ದದ ಎರಡನೇ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 152 ರನ್‌ ಕಲೆಹಾಕಿತ್ತು. ಅಶ್ವಿನ್‌ ಮಿಂಚಿನ ಬೌಲಿಂಗ್ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ (Team India) ಯಶಸ್ವಿಯಾಯಿತು. ಇಂಗ್ಲೆಂಡ್ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದ ಭುವನೇಶ್ವರ್ ಕುಮಾರ್, ಆಸೀಸ್‌ ವಿರುದ್ದದ ಪಂದ್ಯದಲ್ಲಿ ಲಯಕ್ಕೆ ಮರಳುವಲ್ಲಿ ಯಶಸ್ವಿಯಾದರು. ಇನ್ನು ಈ ಗುರಿ ಬೆನ್ನತ್ತಿದ ಭಾರತ ಕ್ರಿಕೆಟ್ ತಂಡಕ್ಕೆ ಆರಂಭಿಕರಾದ ಕೆ.ಎಲ್. ರಾಹುಲ್ (KL Rahul) ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿಕೊಟ್ಟರು. ರೋಹಿತ್ ಅಜೇಯ 60 ರನ್‌ ಬಾರಿಸಿದರೆ, ರಾಹುಲ್ 39 ರನ್‌ ಸಿಡಿಸಿದರು. ಅಂತಿಮವಾಗಿ ಭಾರತ ಭರ್ಜರಿ ಗೆಲುವು ಸಾಧಿಸಿತು.

ಟೀಂ ಇಂಡಿಯಾಗೆ 6ನೇ ಬೌಲರ್‌ ಆಯ್ಕೆ ತಲೆಬಿಸಿ!

ಟಿ20 ಕ್ರಿಕೆಟ್‌ನಲ್ಲಿ 6ನೇ ಬೌಲರ್‌ ಮಹತ್ವದ ಬಗ್ಗೆ ಭಾರತದ ಉಪನಾಯಕ ರೋಹಿತ್‌ ಶರ್ಮಾ ಬುಧವಾರ ಟಾಸ್‌ ವೇಳೆ ವಿವರಿಸಿದರು. ಹಾರ್ದಿಕ್‌ ಪಾಂಡ್ಯ ಇನ್ನೂ ಬೌಲಿಂಗ್‌ ಆರಂಭಿಸದ ಕಾರಣ, ಟೀಂ ಇಂಡಿಯಾಗೆ 6ನೇ ಬೌಲರ್‌ ಆಯ್ಕೆ ಗೊಂದಲ ಶುರುವಾಗಿದೆ.

‘ಟಿ20ಯಲ್ಲಿ 6ನೇ ಬೌಲರ್‌ ಬಹಳ ಮುಖ್ಯ. ನಮ್ಮಲ್ಲಿ ವಿಶ್ವ ಶ್ರೇಷ್ಠ ಬೌಲರ್‌ಗಳಿದ್ದಾರೆ. ಆದರೂ ಒಬ್ಬ ಆಲ್ರೌಂಡರ್‌ ಬೇಕೇಬೇಕು. ನಾನು, ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್ (Suryakumar Yadav) ಬೌಲ್‌ ಮಾಡಬಹುದು’ ಎಂದು ರೋಹಿತ್‌ ಹೇಳಿದರು. ಬಳಿಕ ಕೊಹ್ಲಿ 2 ಓವರ್‌ ಬೌಲ್‌ ಮಾಡಿ ಕೇವಲ 12 ರನ್‌ ನೀಡಿದರು. ಆದರೆ ಮಹತ್ವದ ಪಂದ್ಯಗಳಲ್ಲಿ ಕೊಹ್ಲಿ ಇಲ್ಲವೇ ರೋಹಿತ್‌ರ ಬೌಲಿಂಗ್‌ ಅನ್ನು ತಂಡ ಎಷ್ಟರ ಮಟ್ಟಿಗೆ ನೆಚ್ಚಿಕೊಳ್ಳಬಹುದು ಎನ್ನುವ ಪ್ರಶ್ನೆ ಎದ್ದಿದೆ.

ಕ್ಯಾಪ್ಟನ್‌ ಕೂಲ್‌ಗೂ ಬಂದಿತ್ತು ಸಿಟ್ಟು: ಭಾರತ-ಪಾಕಿಸ್ತಾನ ನಡುವಿನ ಈ ಫೈಟ್‌ಗಳು ನಿಮಗೆ ನೆನಪಿವೆಯಾ..?

ವಿರಾಟ್ ಕೊಹ್ಲಿ (Virat Kohli) ಮೊದಲ ಓವರ್‌ನಲ್ಲಿ ಕೇವಲ 4 ರನ್‌ ನೀಡಿದರು. ಇನ್ನು ತಮ್ಮ ಕೂಟದ ಎರಡನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ 8 ರನ್‌ ನೀಡಿದರು. ಆದರೆ ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆಗಲಿ ಅಥವಾ ರೋಹಿತ್ ಶರ್ಮಾ ಆಗಲಿ ಬೌಲಿಂಗ್‌ ಅಭ್ಯಾಸ ನಡೆಸಲಿಲ್ಲ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿ ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್‌ ಮಾಡುತ್ತಾರೋ ಇಲ್ಲವೋ ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

Follow Us:
Download App:
  • android
  • ios