2022ರ ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ಟಫ್​ ಚಾಲೆಂಜ್​ ಸ್ವಲ್ಪ ಯಾಮಾರಿದ್ರೂ ಈ ನಾಲ್ವರು ಪ್ಲೇಯರ್ಸ್​ ಮಿಸ್​​  ಚತುರ್ಥರು ಹೊರಬಿದ್ರೆ ಭಾರತದ ಕಥೆ ಹರೋಹರ..!

ಬೆಂಗಳೂರು (ಜು.25 ): ಮಿನಿ ವಿಶ್ವಕಪ್​ ಎಂದೇ ಕರೆಯಲ್ಪಡೋ ಟಿ20 ವಿಶ್ವಕಪ್​​​ ಸಮೀಪಿಸ್ತಿದೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಯಲಿದ್ದು, ಆರಂಭಕ್ಕೆ ಇನ್ನೂ ಜಸ್ಟ್​​ ಮೂರು ತಿಂಗಳಷ್ಟೇ ಬಾಕಿ ಇದೆ. ಟೀಮ್​ ಇಂಡಿಯಾ ಸೇರಿ ಎಲ್ಲ ತಂಡಗಳು ಈಗಿನಿಂದಲೆ ಸಿದ್ಧತೆ ಆರಂಭಿಸಿವೆ. ದಿ ಬೆಸ್ಟ್​​​ ತಂಡ ಕಟ್ಟಲು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್​​ ದ್ರಾವಿಡ್​ ಪ್ರಯತ್ನಿಸ್ತಿದ್ದಾರೆ. ಆದರೂ ಕೆಲ ಸೂಪರ್​ ಸ್ಟಾರ್​​​ ಆಟಗಾರರ ಗಾಯದ ಭೀತಿ ​​​ ಟೀಮ್​ ಮ್ಯಾನೇಜ್​​ಮೆಂಟ್​​​​​ ಚಿಂತೆ ಹೆಚ್ಚಿಸಿದೆ. ಒಂದು ವೇಳೆ ಈ ನಾಲ್ವರು ಪ್ಲೇಯರ್ಸ್​ ಕೊಂಚ ಯಾಮಾರಿದ್ರೂ ಟಿ20ವಿಶ್ವಕಪ್​​ ಅನ್ನೇ ಮಿಸ್​ ಮಾಡಿಕೊಳ್ಳಲಿದ್ದಾರೆ.

T20 World cup 2022: 13 ಪಂದ್ಯಗಳಲ್ಲಿ ರೆಡಿಯಾಗಬೇಕು ಟೀಮ್ ಇಂಡಿಯಾ

ತಂಡದ ಸಾರಥಿನೇ ಮಿಸ್​​​​​ ಆಗುವ ಆತಂಕ : 
 ರೋಹಿತ್​​ ಶರ್ಮಾ(Rohit sharm) ಟೀಮ್​ ಇಂಡಿಯಾ(Team India)ದ ಬೆನ್ನೆಲುಬು. ನಾಯಕನಾಗಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸ್ತಿದ್ದಾರೆ. ಆದ್ರೆ ಇತ್ತೀಚೆಗೆ ಹಿಟ್​​ಮ್ಯಾನ್​​(Hitman)ಗೆ ಫಿಟ್ನೆಸ್(Fitness)ಸಮಸ್ಯೆ ಹೆಚ್ಚಾಗಿ ಕಾಡ್ತಿದೆ. ಇದು ತಂಡದ ಟೆನ್ಷನ್ ಹೆಚ್ಚಿಸಿದೆ. ವಿಶ್ವಕಪ್​​​​​ಗೂ ಮುನ್ನ ಇನ್ನುಳಿದ 4 ಸರಣಿಗಳಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಇಲ್ಲವಾದ್ರೆ ಸ್ಟಾರ್​ ನಾಯಕನಿಲ್ಲದೇ ಐಸಿಸಿ ಬಿಗ್ ಈವೆಂಟ್​​(ICC Big Event)ನಲ್ಲಿ ಕಣಕ್ಕಿಳಿಯಬೇಕಾಗುತ್ತೆ.

ಇಂಜುರಿ ಸಾಕು, ಫಿಟ್ನೆಸ್​ ಕಾಪಾಡಿಕೊಳ್ಳಬೇಕಿದೆ ರಾಹುಲ್​ :
ಸ್ಟಾರ್ ಓಪನರ್​​​ ಕೆಎಲ್ ರಾಹುಲ್​(K.L.Rahul) ಬಗ್ಗೆ ಟೀಮ್​ ಇಂಡಿಯಾ ತೀವ್ರ ಆತಂಕದಲ್ಲಿದೆ.ಈ ವರ್ಷ ಕನ್ನಡಿಗ ಆಡಿದ್ದಕ್ಕಿಂತ ಹೆಚ್ಚಾಗಿ ಇಂಜುರಿಯಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ರಾಹುಲ್ ಗೆ ​​ ಸದ್ಯ ಕೊವಿಡ್​​​ ದೃಢಪಟ್ಟಿದೆ. ವಿಂಡೀಸ್​ ಟಿ20 ಸರಣಿ ಆಡುವುದು ಅನುಮಾನ ಎನ್ನಲಾಗ್ತಿದೆ. ಪದೇ ಪದೇ ಗಾಯಗೊಳ್ಳುತ್ತಿರುವ ಭಾರತಕ್ಕೆ ರಾಹುಲ್ ಫಿಟ್ನೆಸ್ ದೊಡ್ಡ ತಲೆನೋವಾಗಿದೆ. ಈ ಸ್ಟಾರ್​ ಓಪನರ್​​ ಇನ್ನಾದ್ರು ಫಿಟ್ನೆಸ್​ ಬಗ್ಗೆ ಹೆಚ್ಚು ಗಮನ ಕೊಡದಿದ್ದಲ್ಲಿ ಟಿ20 ವಿಶ್ವಕಪ್(T20 World Cup)​ ರೇಸ್​​​ನಿಂದ ಹೊರಬೀಳಲಿದ್ದಾರೆ.

ಖಲೀಲ್ ಅಹ್ಮದ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ..?

ಹಾರ್ದಿಕ್​​​​(Hardhik) ಮತ್ತೆ ಇಂಜುರಿ ಆದ್ರೆ ವಿಶ್ವಕಪ್​​​​​ ಹಾದಿ ದುರ್ಗಮ: ಬೆನ್ನುನೋವಿನಿಂದಾಗಿ ಸುದೀರ್ಘ ಕಾಲ ಹೊರಗುಳಿದಿದ್ದ ಹಾರ್ದಿಕ್​​ ಪಾಂಡ್ಯ ಸದ್ಯ ತಂಡದಲ್ಲಿ ಹಲ್​​ಚಲ್​ ಎಬ್ಬಿಸಿದ್ದಾರೆ. ಬ್ಯಾಟಿಂಗ್​​​​​​ ಹಾಗೂ ಬೌಲಿಂಗ್​​ನಲ್ಲಿ ತಂಡಕ್ಕೆ ನೆರವಾಗ್ತಿದ್ದಾರೆ. ಇದುವೇ ತಂಡದ ಆತಂಕಕ್ಕೆ ಕಾರಣವಾಗಿದೆ.ಯಾಕಂದ್ರೆ ಹಾರ್ದಿಕ್​​ ಮೇಲೆ ಒತ್ತಡ ಹೆಚ್ಚಿದಂತೆ ಇಂಜುರಿ ಪರಿಸ್ಥಿತಿಯೂ ಹೆಚ್ಚುತ್ತದೆ. ಹಾಗೇನಾದ್ರು ಪಾಂಡ್ಯ ಇಂಜುರಿಯಿಂದ ಬಳಲಿದ್ರೆ ಅವರ ಟಿ20 ವಿಶ್ವಕಪ್​ ಹಾದಿ ಕಠಿಣವೆನಿಸಿದೆ.

ಇದೇ ಫಿಟ್ನೆಸ್​​ ಉಳಿಸಿಕೊಳ್ಳಬೇಕಿದೆ ಭುವಿ : 
ಸದ್ಯ ಇಂಜುರಿಯಿಂದ ಸಂಪೂರ್ಣ ಗುಣಮುಖರಾದ ಭುವನೇಶ್ವರ್​ ಕುಮಾರ್​ ಇಂಪ್ರೆಸ್ಸಿವ್​​ ಆಟದಿಂದ ಗಮನ ಸೆಳೆಯುತ್ತಿದ್ದಾರೆ. ಟೆಸ್ಟ್​​​​ನಲ್ಲಿ ಭುವಿಯನ್ನ ಆಡಿಸ್ತಿಲ್ಲ. ಕೇವಲ ಟಿ20 ಮತ್ತು ಒನ್ಡೆಗೆ ಮಾತ್ರ ಪರಿಗಣಿಸಲಾಗ್ತಿದೆ. ಒತ್ತಡ ಕಮ್ಮಿ ಮಾಡಲು ವಿಶ್ರಾಂತಿ ಕೂಡ ನೀಡಲಾಗ್ತಿದೆ.ಆದ್ರೂ ಭುವಿಗೆ ಇಂಜುರಿ ಭೂತ ಬೆನ್ನು ಬಿಟ್ಟಿಲ್ಲ. ಹೀಗಾಗಿ ಸೀನಿಯರ್ ಬೌಲರ್​​​​​​ ಫಿಟ್ನೆಸ್​​ ಕೂಡ ಟಿ20 ವಿಶ್ವಕಪ್​​​​​​​​ ಮೊದಲು ಭಾರತಕ್ಕೆ ಟೆನ್ಷನ್ ತಂದೊಡ್ಡಿದೆ.

ಎನಿವೇ ಮೇಲಿನ ಈ ಚತುರ್ಥರು ಭಾರತಕ್ಕೆ ಮ್ಯಾಚ್​ ವಿನ್ನರ್ಸ್​. ಟಿ20 ವಿಶ್ವಕಪ್​​ವರೆಗೆ ಫಿಟ್ನೆಸ್​​​​ ಕಡೆ ಹೆಚ್ಚು ಗಮನ ವಹಿಸಲಿ. ಕೊಂಚ ಯಾಮಾರಿದ್ರೂ ಟೀಮ್​ ಇಂಡಿಯಾ ಕಥೆ ಹರೋಹರ.