Asianet Suvarna News Asianet Suvarna News

T20 World Cup ಇಂಗ್ಲೆಂಡ್‌ ಎದುರು ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ

ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಇಂಗ್ಲೆಂಡ್-ಲಂಕಾ ಸೆಣಸಾಟ
ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ
ಲಂಕಾ ತಂಡದಲ್ಲಿ ಒಂದು ಮಹತ್ತರ ಬದಲಾವಣೆ

T20 World Cup Sri Lanka win the toss and elected to bat first against England kvn
Author
First Published Nov 5, 2022, 1:11 PM IST

ಸಿಡ್ನಿ(ನ.05): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 39ನೇ ಪಂದ್ಯದಲ್ಲಿಂದು ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಶುನ್ ಶನಕಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಪ್ರಮೋದ್ ಮದುಶನ್ ಬದಲಿಗೆ ಚಮಿಕಾ ಕರುಣರತ್ನೆ ತಂಡ ಕೂಡಿಕೊಂಡಿದ್ದಾರೆ. 

ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಗ್ರೂಪ್ 1 ಹಂತದ ಕೊನೆಯ ಸೂಪರ್ 12 ಹಂತದ ಪಂದ್ಯ ಇದಾಗಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. 

ಸದ್ಯ ಗುಂಪು 1ರಲ್ಲಿ ನ್ಯೂಜಿಲೆಂಡ್‌ 7 ಅಂಕದ ಜೊತೆ ಅತ್ಯುತ್ತಮ ನೆಟ್‌ ರನ್‌ರೇಟ್‌ ಕೂಡಾ ಹೊಂದಿದ್ದು, ಸೆಮೀಸ್‌ ಸ್ಥಾನ ಅಧಿಕೃತಗೊಳಿಸಿದೆ. 2ನೇ ಸ್ಥಾನಕ್ಕಾಗಿ ಸದ್ಯ 7 ಅಂಕ ಹೊಂದಿರುವ ಆಸೀಸ್‌, 5 ಅಂಕ ಹೊಂದಿರುವ ಇಂಗ್ಲೆಂಡ್‌ ನಡುವೆ ಪೈಪೋಟಿ ಇದೆ. ಇಂಗ್ಲೆಂಡ್‌ ತಂಡ ಶ್ರೀಲಂಕಾ ವಿರುದ್ಧ ಗೆದ್ದರೆ 7 ಅಂಕವಾಗಲಿದೆ. ಆದರೆ ನೆಟ್‌ ರನ್‌ರೇಟ್‌ನಲ್ಲಿ ಆಸೀಸ್‌ಗಿಂತ ಮುಂದಿರುವ ಕಾರಣ ಇಂಗ್ಲೆಂಡ್‌ ಸೆಮೀಸ್‌ಗೇರಲಿದೆ.  ಒಂದು ವೇಳೆ ಇಂಗ್ಲೆಂಡ್‌ ಸೋತರೆ ಆಗ ಆಸೀಸ್‌ಗೆ ಸೆಮೀಸ್‌ ಟಿಕೆಟ್‌ ಸಿಗಲಿದೆ. ಪಂದ್ಯ ಮಳೆಯಿಂದಾಗಿ ರದ್ದುಗೊಂಡರೆ ಇಂಗ್ಲೆಂಡ್‌ ಹೊರಬೀಳಲಿದ್ದು, ಆಸೀಸ್‌ ಸೆಮೀಸ್‌ಗೇರಲಿದೆ. ಇನ್ನು, ಶುಕ್ರವಾರ ಆಫ್ಘಾನಿಸ್ತಾನ ವಿರುದ್ಧ ಆಸ್ಪ್ರೇಲಿಯಾ ಗೆಲ್ಲುವ ಮೂಲಕ ಶ್ರೀಲಂಕಾದ ನಾಕೌಟ್‌ ಬಾಗಿಲು ಬಂದಾಗಿದ್ದು, ತಂಡ ಈಗ ಪ್ರತಿಷ್ಠೆಗಾಗಿ ಆಡಬೇಕಿದೆ. ಆದರೆ ಲಂಕಾದ ಗೆಲುವಿಗೆ ಆಸೀಸ್‌ ಆಟಗಾರರು ಪ್ರಾರ್ಥಿಸುತ್ತಿದ್ದಾರೆ.

T20 World Cup: ಇಂಗ್ಲೆಂಡ್, ಆಸ್ಟ್ರೇಲಿಯಾ ಭವಿಷ್ಯ ಶ್ರೀಲಂಕಾ ಕೈಲಿ..!

ಇನ್ನೊಂದೆಡೆ ಈಗಾಗಲೇ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿರುವ ಶ್ರೀಲಂಕಾ ತಂಡವು ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ. ಹೀಗಾಗಿ ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಭನುಕಾ ರಾಜಪಕ್ಸಾ ಹಾಗೂ ದಶುನ್ ಶನಕಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲು ಎದುರು ನೋಡುತ್ತಿದ್ದಾರೆ. ಇನ್ನು ಮಾಂತ್ರಿಕ ಸ್ಪಿನ್ನರ್‌ಗಳಾದ ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷಣ ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಸವಾಲಾಗುವ ಸಾಧ್ಯತೆಯಿದೆ. 

ಉಭಯ ತಂಡಗಳು ಹೀಗಿವೆ ನೋಡಿ

ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಡೇವಿಡ್ ಮಲಾನ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್‌ ವುಡ್.

ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ದಶುನ್ ಶನಕಾ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಚಮಿಕಾ ಕರಣರತ್ನೆ, ಲಹಿರು ಕುಮಾರ, ಕುಸಾನ್ ರಜಿತ.

ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್

Follow Us:
Download App:
  • android
  • ios