* ಟಿ20 ವಿಶ್ವಕಪ್‌ ಟೂರ್ನಿಗೆ ಆಪ್ಘಾನಿಸ್ತಾನ ಕ್ರಿಕೆಟ್ ತಂಡ ಪ್ರಕಟ* ತಂಡ ಪ್ರಕಟಗೊಂಡ ಬೆನ್ನಲ್ಲೇ ನಾಯಕತ್ವದಿಂದ ಕೆಳಗಿಳಿದ ಆಪ್ಘಾನಿಸ್ತಾನ* ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ಆರಂಭ

ಕಾಬೂಲ್‌(ಸೆ.11): ಐಸಿಸಿ ಟಿ20 ವಿಶ್ವಕಪ್‌ಗೆ ತಮ್ಮನ್ನು ಕೇಳದೆ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ ಎನ್ನುವ ಕಾರಣಕ್ಕೆ ಆಫ್ಘಾನಿಸ್ತಾನ ತಂಡದ ನಾಯಕತ್ವದಿಂದ ಲೆಗ್‌ ಸ್ಪಿನ್ನರ್ ರಶೀದ್‌ ಖಾನ್‌ ಕೆಳಗಿಳಿದಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಯುಎಇ ಹಾಗೂ ಓಮನ್‌ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿದೆ. 

ಗುರುವಾರ ರಾತ್ರಿ ಆಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ವಿಶ್ವಕಪ್‌ಗೆ ತಂಡ ಪ್ರಕಟಿಸಿತ್ತು. ರಶೀದ್ ಖಾನ್‌ಗೆ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಇದರ ಬೆನ್ನಲ್ಲೇ ರಶೀದ್‌ ಖಾನ್‌ ಟ್ವಿಟರ್‌ನಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಆಫ್ಘಾನಿಸ್ತಾನ ತಂಡದಿಂದಲೇ ರಶೀದ್‌ ಖಾನ್ ಅವರನ್ನು ಹೊರಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

T20 World Cup ಟೂರ್ನಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ

Scroll to load tweet…

ರಶೀದ್‌ ಖಾನ್‌ ಟಿ20 ಕ್ರಿಕೆಟ್‌ನಲ್ಲಿ ತನ್ನದೇ ಆದ ಪಾತ್ರ ನಿಭಾಯಿಸಿದ್ದಾರೆ. ರಶೀದ್‌ ಖಾನ್‌ ಅಮೋಘ ಪ್ರದರ್ಶನದ ನೆರವಿನಿಂದ ಅಪ್ಘಾನಿಸ್ತಾನ ಕ್ರಿಕೆಟ್ ತಂಡವು 8ನೇ ಶ್ರೇಯಾಂಕಕ್ಕೇರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 12 ಹಂತಕ್ಕೆ ನೇರ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆಫ್ಘಾನಿಸ್ತಾನ ತಂಡದ ಪರ ರಶೀದ್‌ ಖಾನ್‌ 48 ಪಂದ್ಯಗಳನ್ನಾಡಿ 89 ವಿಕೆಟ್ ಕಬಳಿಸಿದ್ದಾರೆ.

ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಿಸಿದ ಆಫ್ಘನ್ ಕ್ರಿಕೆಟ್ ತಂಡ ಹೀಗಿದೆ ನೋಡಿ

Scroll to load tweet…

ರಶೀದ್ ಖಾನ್(ನಾಯಕ), ರೆಹಮ್ಮತುಲ್ಲಾ ಗುರ್ಬಾಜ್‌, ಹರ್ಜರತುಲ್ಲಾ ಝಝೈ, ಉಸ್ಮಾನ್ ಘನಿ, ಅಸ್ಗರ್ ಅಫ್ಘಾನ್‌, ಮೊಹಮ್ಮದ್ ನಬೀ, ನಜಿಬುಲ್ಲಾ ಜದ್ರಾನ್‌, ಹಸ್ಮತುಲ್ಲಾ ಶಾಹಿದಿ, ಮೊಹಮ್ಮದ್ ಶೆಹಜಾದ್, ಮುಜೀಬ್ ಉರ್ ರೆಹಮಾನ್, ಕರೀಮ್‌ ಜನತ್, ಗುಲ್ಬುದ್ದೀನ್ ನೈಬ್, ನವೀನ್ ಉಲ್ ಹಕ್‌, ಹಮೀದ್ ಹಸನ್, ಶರಿಫುದ್ದೀನ್‌ ಅಶ್ರಫ್‌, ಡಾವಲ್ಟ್‌ ಜದ್ರನ್‌, ಶಾಪೋರ್ ಜದ್ರನ್‌, ಖ್ವಾಯಿಸ್ ಅಹಮದ್.