Asianet Suvarna News Asianet Suvarna News

ಬಟ್ಲರ್ ಅಬ್ಬರಕ್ಕೆ ಆಸೀಸ್ ಚೆಲ್ಲಾ ಪಿಲ್ಲಿ... ಭರ್ಜರಿ ಜಯದೊಂದಿಗೆ ಅಜೇಯ ಓಟ

* ಕಡಿಮೆ ಮೊತ್ತಕ್ಕೆ ಆಸ್ಟ್ರೇಲಿಯಾ ಕಟ್ಟಿಹಾಕಿದ ಇಂಗ್ಲೆಂಡ್
* ಕೊನೆ ಹಂತದಲ್ಲಿ ಅಬ್ಬರಿಸಿದರೂ ಸಾಕಾಗಲಿಲ್ಲ
* ಸಲೀಸಾಗಿ ಗುರಿ ಮುಟ್ಟಿದ ಇಂಗ್ಲೆಂಡ್
* ಬಟ್ಲರ್ ಅಬ್ಬರಕ್ಕೆ ಆಸ್ಟ್ರೇಲಿಯಾ ಥಂಡಾ

T20 World Cup England Trash Australia by 8 wickets mah
Author
Bengaluru, First Published Oct 30, 2021, 10:51 PM IST

ದುಬೈ(ಅ.30): ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ (Australia Cricket Team) ಹಾಗೂ ಇಂಗ್ಲೆಂಡ್ ತಂಡಗಳು (England Cricket Team) ಮುಖಾಮುಖಿಯಾಗಿದ್ದವು. ಕಡಿಮೆ ಮೊತ್ತಕ್ಕೆ ಕಾಂಗರೂಗಳನ್ನು ಕಟ್ಟಿಹಾಕಿದ್ದ ಇಂಗ್ಲೆಂಡ್ ಬಹಳ ಸಲೀಸಾಗಿ ಗುರಿ ಮುಟ್ಟಿ ಎಂಟು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿಕೊಂಡಿದೆ.

ಬಿಗಿಯಾದ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು 125 ರನ್ ಗೆ ಕಟ್ಟಿ ಹಾಕಿತ್ತು. ಅರೋನ್ ಫಿಂಚ್ ಮಾತ್ರ  ಒಂದು ಕಡೆ ಇನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಆಸೀಸ್ ನೀಡಿದ್ದ ಗುರಿ ಇಂಗ್ಲೆಂಡ್ ಗೆ ಯಾವ ಹಂತದಲ್ಲಿಯೂ ಆತಂಕ ತರಲೇ ಇಲ್ಲ. ಪಕ್ಕಾ ಒಬ್ ಸೈಡೆಡ್ ಮ್ಯಾಚ್ ತರ ಕಂಡಿತು.

T20 World Cup: ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..

ಆರಂಭದಿಂದಲೂ ಅಬ್ಬರಿಸಿದ ಬಟ್ಲರ್ 32 ಎಸೆತಗಳಲ್ಲಿ 71 ರನ್ ಗಳಿಸಿದರು. ಇನ್ನೊಂದು ಕಡೆ ಬ್ಯಾಟಿಂಗ್ ಮಾಡಬೇಕಾದ ಪ್ರಮೇಯವೇ ಬರಲಿಲ್ಲ. ಇಂಗ್ಲೆಂಡ್ ಗೆ ಎಲ್ಲವೂ ಅಂದುಕೊಂಡಂತೆ ಆಯಿತು. ಅದ್ಭುತ ಬೌಲಿಂಗ್ ಪ್ರದರ್ಶನದ ಜತೆ ಬ್ಯಾಟಿಂಗ್ ನಲ್ಲಿಯೂ ಅಬ್ಬರಿಸಿದ ತಂಡ ಅಜೇಯವಾಗಿ ಉಳಿದಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಪಾಡಿಕೊಂಡಿದೆ. 

ಫಿಂಚ್  44  ರನ್ ಗಳಿಸಿದ್ದು ಬಿಟ್ಟರೆ ಆಸೀಸ್ ನ ಅಗ್ರ ಕ್ರಮಾಂಕ  ಇಂಗ್ಲೆಂಡ್ ಗೆ ತಲೆಬಾಗಿತು. ವಾರ್ನರ್, ಸ್ಮಿತ್, ಮ್ಯಾಕ್ಸ್ ವೆಲ್, ಸ್ಟೋನಿಸ್ ಯಾರೂ ಸಹ ಎರಡು ಅಂಕಿ ದಾಖಲಿಸಲಿಲ್ಲ. ಕೊನೆಯಲ್ಲಿ ರನ್ ಗತಿ ಏರಿಸುವ ಪ್ರಯತ್ನ ಆಸೀಸ್ ನಿಂದ ಆಯಿತು. ಕ್ರಿಸ್ ಜೋರ್ಡಾನ್ ಮೂರು ವಿಕೆಟ್ ಕಿತ್ತರು. ವೋಕ್ಸ್ ಎರಡು ವಿಕೆಟ್ ಪಡೆದುಕೊಂಡರು. 

Follow Us:
Download App:
  • android
  • ios