Asianet Suvarna News Asianet Suvarna News

T20 World Cup: ಪಂದ್ಯ ಗೆದ್ದ ಶಾಹಿದ್ ಅಫ್ರಿದಿಗೆ ಸೆಲ್ಯೂಟ್ ಹೊಡೆದ ಶೋಯೆಬ್ ಮಲಿಕ್..!

* ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪಾಕಿಸ್ತಾನ

* ಅಫ್ರಿದಿಗೆ ಮೈದಾನದಿಂದಲೇ ಸೆಲ್ಯೂಟ್ ಮಾಡಿದ ಶೋಯೆಬ್ ಮಲಿಕ್‌

* ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಸೆಮೀಸ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡ ಪಾಕ್

T20 World Cup All rounder Shoaib Malik salutes Shahid Afridi after Pakistan beat Afghanistan in Dubai kvn
Author
Bengaluru, First Published Oct 30, 2021, 5:03 PM IST

ದುಬೈ(ಅ.30): ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್‌ ತಂಡವು ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವುದರೊಂದಿಗೆ ಈಗಾಗಲೇ ಸೆಮಿಫೈನಲ್‌ನಲ್ಲಿ ಬಹುತೇಕ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅಕ್ಟೋಬರ್ 29ರಂದು ಆಫ್ಘಾನಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು (Pakistan Cricket Team) 5 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.

ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಭಾರತ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಪಾಕಿಸ್ತಾನ ತಂಡವು, ಇದಾದ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೂ (New Zealand Cricket) ಸೋಲಿನ ಶಾಕ್‌ ನೀಡಿತ್ತು. ಸತತ ಗೆಲುವುಗಳಿಂದಾಗಿ ಆತ್ಮವಿಶ್ವಾಸದಿಂದ ಬೀಗುತ್ತಿದೆ ಪಾಕಿಸ್ತಾನ. ಇದೇ ವೇಳೆ ಪಾಕಿಸ್ತಾನದ ಅನುಭವಿ ಬ್ಯಾಟರ್ ಶೋಯೆಬ್ ಮಲಿಕ್ ಕೂಡಾ ಜಾಲಿ ಮೂಡ್‌ನಲ್ಲಿರುವಂತೆ ಕಂಡುಬಂದಿದ್ದಾರೆ.

ಕ್ರಿಕೆಟರ್‌ ಇರ್ಫಾನ್ ಪಠಾಣ್‌ ಅವರ ಪತ್ನಿಯ unseen photos

ಪಾಕಿಸ್ತಾನ ವರ್ಸಸ್‌ ಆಫ್ಘಾನಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಪಾಕ್‌ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ (Shahid Afridi) ಮೈದಾನಕ್ಕೆ ಆಗಮಿಸಿದ್ದರು. ಸ್ಟೇಡಿಯಂನ ವೀಕ್ಷಕರ ಗ್ಯಾಲರಿಯಲ್ಲೇ ಕುಳಿತು ಅಫ್ರಿದಿ, ಪಾಕ್‌ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಮೈದಾನದಿಂದ ಶಾಹಿದ್ ಅಫ್ರಿದಿ ಬಳಿ ಬಂದ ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್ (Shoaib Malik), ಮಾಜಿ ಕ್ರಿಕೆಟಿಗನಿಗೆ ಸೆಲ್ಯೂಟ್ ಮಾಡಿದ್ದಾರೆ. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

T20 World Cup ನಾಯಕನಾಗಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಬಾಬರ್‌ ಅಜಂ..!

ಶಾಹಿದ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ. ಅಫ್ರಿದಿ 2018ರಲ್ಲಿ ಕಡೆಯ ಬಾರಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಕಣಕ್ಕಿಳಿದಿದ್ದರು. ಸದ್ಯ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರೂ ಸಹಾ, ಜಗತ್ತಿನ ಮೂಲೆ ಮೂಲೆಗಳಲ್ಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇನ್ನು ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್‌ ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿ 45ರ ಬ್ಯಾಟಿಂಗ್ ಸರಾಸರಿಯಲ್ಲಿ 45 ರನ್ ಬಾರಿಸಿದ್ದಾರೆ. ಮಲಿಕ್ ತಂಡ ಸೇರ್ಪಡೆ ಪಾಕ್‌ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಮತ್ತಷ್ಟು ಬಲಿಷ್ಠವಾಗಲು ನೆರವಾಗಿದೆ. ಅದರಲ್ಲೂ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಮಲಿಕ್ ಅಜೇಯ 26 ರನ್ ಬಾರಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದರು. ಕಿವೀಸ್‌ ಎದುರು ಅಜಂ ಪಡೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಮಲಿಕ್, ಆಸಿಫ್ ಅಲಿ ಜತೆಗೂಡಿ ತಂಡಕ್ಕೆ ಸ್ಮರಣೀಯ ಗೆಲುವು ತಂದಿಟ್ಟಿದ್ದರು.

T20 World Cup 2021: ಒಂದೇ ಓವರ್‌ಲ್ಲಿ 4 ಸಿಕ್ಸರ್, ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

ಪಾಕಿಸ್ತಾನ ಕ್ರಿಕೆಟ್ ತಂಡವು ಸದ್ಯ ಮೂರು ಪಂದ್ಯಗಳನ್ನಾಡಿ 3 ಗೆಲುವು ದಾಖಲಿಸುವುದರೊಂದಿಗೆ 6 ಅಂಕಗಳ ಸಹಿತ ಗ್ರೂಪ್ 2 ಅಂಕಪಟ್ಟಿ ಅಗ್ರಸ್ಥಾನದಲ್ಲಿದೆ. ಇದೀಗ ಬಾಬರ್ ಅಜಂ ಪಡೆ ನವೆಂಬರ್ 02ರಂದು ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಸೂಪರ್‌ 12 ಹಂತದ ಪಾಕಿಸ್ತಾನ ಪಾಲಿನ ಕೊನೆಯ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ನವೆಂಬರ್ 07ರಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಜರುಗಲಿದೆ.

Follow Us:
Download App:
  • android
  • ios