* ಶಾರ್ಜಾ ಮೈದಾನದಲ್ಲಿ ಸ್ಕಾಟ್ಲೆಂಡ್‌ಗೆ ಕಠಿಣ ಗುರಿ ನೀಡಿದ ಆಫ್ಘಾನಿಸ್ತಾನ* ಸ್ಕಾಟ್ಲೆಂಡ್ ಗೆಲ್ಲಲು 191 ರನ್‌ಗಳ ಸವಾಲಿನ ಗುರಿ* ಟಾಸ್ ಗೆದ್ದು ಉತ್ತಮ ಬ್ಯಾಟಿಂಗ್ ನಡೆಸಿದ ಆಫ್ಘಾನಿಸ್ತಾನ

ಶಾರ್ಜಾ(ಅ.25): ನಜೀಬುಲ್ಲಾ ಜದ್ರಾನ್‌ ಬಾರಿಸಿದ ಸ್ಪೋಟಕ ಅರ್ಧಶತಕ ಹಾಗೂ ಗುರ್ಬಾಜ್ ಮತ್ತು ಝಝೈ ಬಾರಿಸಿದ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಆಫ್ಘಾನಿಸ್ತಾನ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು 190 ರನ್‌ ಬಾರಿಸಿದ್ದು, ಸ್ಕಾಟ್ಲೆಂಡ್‌ಗೆ ಗೆಲ್ಲಲು ಕಠಿಣ ಗುರಿ ನೀಡಿದೆ.

ಇಲ್ಲಿನ ಶಾರ್ಜಾ ಮೈದಾನದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬೀ ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ಮಾಡಿದ ಆಫ್ಘಾನ್ ಆರಂಭಿಕರಾದ ಹಜರತ್ತುಲ್ಲಾ ಝಝೈ ಹಾಗೂ ಮೊಹಮ್ಮದ್ ಶೆಹಜಾದ್ ಜೋಡಿ 5.5 ಓವರ್‌ಗಳಲ್ಲಿ 54 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಶೆಹಜಾದ್ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 22 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಝಝೈ ಹಾಗೂ ರೆಹಮ್ಮತ್ತುಲ್ಲಾ ಗುರ್ಬಾಜ್‌ ಜೋಡಿ ಉತ್ತಮ ಬ್ಯಾಟಿಂಗ್‌ ನಡೆಸಿತು. ಝಝೈ ಕೇವಲ 30 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್‌ ನೆರವಿನಿಂದ 44 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

Scroll to load tweet…

T20 World Cup: Afg vs SCO ಸ್ಕಾಟ್ಲೆಂಡ್ ಎದುರು ಟಾಸ್ ಗೆದ್ದ ಆಫ್ಘಾನ್ ಬ್ಯಾಟಿಂಗ್ ಆಯ್ಕೆ

Scroll to load tweet…

ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಗುರ್ಬಾಜ್-ಜದ್ರಾನ್‌: ಹೌದು ಝಝೈ ವಿಕೆಟ್ ಪತನದ ಬಳಿಕ ರೆಹಮತ್ತುಲ್ಲಾ ಗುರ್ಬಾಜ್ ಹಾಗೂ ನಜಿಬುಲ್ಲಾ ಜದ್ರಾನ್ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ 3ನೇ ವಿಕೆಟ್‌ಗೆ 87 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಗುರ್ಬಾಜ್‌ 37 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 46 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ನಜಿಬುಲ್ಲಾ ಜದ್ರಾನ್‌ 34 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 59 ರನ್‌ ಬಾರಿಸಿ ಪಂದ್ಯದ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಮೊಹಮ್ಮದ್ ನಬೀ ಕೊನೆಯ 4 ಎಸೆತಗಳಲ್ಲಿ 11 ರನ್‌ ಬಾರಿಸಿ ತಂಡದ ಮೊತ್ತವನ್ನು 190ಕ್ಕೇರಿಸುವಲ್ಲಿ ಯಶಸ್ವಿಯಾದರು.

ಅರ್ಹತಾ ಸುತ್ತಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಸ್ಕಾಟ್ಲೆಂಡ್ ತಂಡವು ಈ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆಲುವಿನ ನಗೆಯನ್ನು ಬೀರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.