Asianet Suvarna News Asianet Suvarna News

T20 World Cup 2024: ಎರಡೂ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೆ ಹೋಗೋರು ಯಾರು..?

ಟಿ20 ವಿಶ್ವಕಪ್ ಕೊನೆಯ ಹಂತಕ್ಕೆ ಬಂದಿದೆ. 20ರಲ್ಲಿ 16 ತಂಡಗಳು ವಿಶ್ವಕಪ್‌ನಿಂದ ಹೊರಬಿದ್ದಿವೆ. ನಾಲ್ಕು ಟೀಮ್ಸ್ ಸೆಮಿಫೈನಲ್ ಪ್ರವೇಶಿಸಿವೆ. ಭಾರತ, ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಮೀಸ್ ಪ್ರವೇಶಿಸಿದ್ದು, ನಾಳೆ ಈ ನಾಕೌಟ್ ಕದನ ನಡೆಯಲಿದೆ. ಆದ್ರೆ ಸೆಮಿಫೈನಲ್ ಪಂದ್ಯಗಳಿಗೆ ಮಳೆಯ ಕಾಟ ಇದೆ. ಈಗ ಇದೇ ಆ ಎರಡು ತಂಡಗಳಲ್ಲಿ ಭಯ ಹುಟ್ಟಿಸಿರೋದು.

T20 World Cup 2024 Who will Qualify Final if Rain spoil semifinal kvn
Author
First Published Jun 26, 2024, 3:54 PM IST

ಬೆಂಗಳೂರು: ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್ ಹಂತಕ್ಕೆ ಬಂದು ನಿಂತಿದೆ. ಆದ್ರೂ ಆ ಎರಡು ಟೀಮ್‌ಗಳಿಗೆ ಭಯ ಇದ್ದೇ ಇದೆ. ಯಾಕಂದ್ರೆ ಸೆಮೀಸ್ ಪ್ರವೇಶಿಸಿದ್ರೂ ಪಂದ್ಯ ಆಡ್ತಿವೋ ಇಲ್ಲವೋ ಅನ್ನೋ ಭಯ. ಆಡದೆಯೇ ಸೆಮಿಫೈನಲ್ನಿಂದ ಕಿಕೌಟ್ ಆಗ್ತಾವಾ ಅನ್ನೋ ಭಯ. ಯಾಕೀ ಭಯ ಅನ್ನೋದಕ್ಕೆ ಇಲ್ಲಿದೆ ನೋಡಿ ಆನ್ಸರ್.

ನಾಳೆ ಬೆಳಗ್ಗೆ 6 ಗಂಟೆಗೆ ಮೊದಲ ಸೆಮಿಫೈನಲ್ ಪಂದ್ಯ

ಟಿ20 ವಿಶ್ವಕಪ್ ಕೊನೆಯ ಹಂತಕ್ಕೆ ಬಂದಿದೆ. 20ರಲ್ಲಿ 16 ತಂಡಗಳು ವಿಶ್ವಕಪ್‌ನಿಂದ ಹೊರಬಿದ್ದಿವೆ. ನಾಲ್ಕು ಟೀಮ್ಸ್ ಸೆಮಿಫೈನಲ್ ಪ್ರವೇಶಿಸಿವೆ. ಭಾರತ, ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಮೀಸ್ ಪ್ರವೇಶಿಸಿದ್ದು, ನಾಳೆ ಈ ನಾಕೌಟ್ ಕದನ ನಡೆಯಲಿದೆ. ಆದ್ರೆ ಸೆಮಿಫೈನಲ್ ಪಂದ್ಯಗಳಿಗೆ ಮಳೆಯ ಕಾಟ ಇದೆ. ಈಗ ಇದೇ ಆ ಎರಡು ತಂಡಗಳಲ್ಲಿ ಭಯ ಹುಟ್ಟಿಸಿರೋದು.

T20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ವೈಫಲ್ಯಕ್ಕೆ ಕಾರಣ ಏನು..?

ಸೌತ್ ಆಫ್ರಿಕಾ-ಅಫ್ಘಾನಿಸ್ತಾನ ತಂಡಗಳ ನಡುವಿನ ಮೊದಲ ಸೆಮಿಫೈನಲ್ ಮ್ಯಾಚ್ ನಾಳೆ ಬೆಳಗ್ಗೆ 6ರಿಂದ ಆರಂಭವಾಗಲಿದೆ. ಆಫ್ರಿಕನ್ನರು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದಾರೆ. ಇದುವರೆಗೂ ಒಂದೂ ವರ್ಲ್ಡ್‌ಕಪ್ ಗೆಲ್ಲದ ಆಫ್ರಿಕಾ, ಈ ಸಲ ಟಿ20 ವಿಶ್ವಕಪ್ ಗೆಲ್ಲಲು ಪಣ ತೊಟ್ಟಿದೆ. ಆದ್ರೆ ಅಫ್ಘನ್, ಟಿ20 ಫಾರ್ಮ್ಯಾಟ್‌ನಲ್ಲಿ ವೆರಿ ವೆರಿ ಡೇಂಜರಸ್. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡಗಳನ್ನೇ ಸೋಲಿಸಿ, ಫಸ್ಟ್ ಟೈಮ್ ಸೆಮೀಸ್ ಪ್ರವೇಶಿಸಿದೆ. ಹಾಗಾಗಿ ಫಸ್ಟ್ ಸೆಮಿಫೈನಲ್ ಜಿದ್ದಾಜಿದ್ದಿಯಿಂದ ಕೂಡಿರಲಿದೆ.

ನಾಳೆ ರಾತ್ರಿ 8ರಿಂದ ಭಾರತ-ಇಂಗ್ಲೆಂಡ್ ತಂಡಗಳು ಸೆಕೆಂಡ್ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 2022ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲೂ ಈ ಎರಡು ತಂಡಗಳೇ ಮುಖಾಮುಖಿಯಾಗಿದ್ದವು. ಅಂದು ಭಾರತ ಸೋಲಿಸಿದ್ದ ಇಂಗ್ಲೆಂಡ್ ಫೈನಲ್ ಪ್ರವೇಶಿಸಿ, ಚಾಂಪಿಯನ್ ಆಗಿತ್ತು. ಈಗ ಆ ಸೇಡು ತೀರಿಸಿಕೊಳ್ಳಲು ಇಂಡಿಯನ್ಸ್ ಎದುರು ನೋಡ್ತಿದ್ದಾರೆ.

ಫಿಫ್ಟಿ, ಸೆಂಚುರಿ ಬಗ್ಗೆ ತಲೆಕೆಡಿಸಿಕೊಳ್ಳೊಲ್ಲ, ನನ್ನದೇನಿದ್ರು....: ಮನಬಿಚ್ಚಿ ಮಾತಾಡಿದ ರೋಹಿತ್ ಶರ್ಮಾ..!

ಆದ್ರೆ ವಿಷ್ಯ ಅದಲ್ಲ. ಎರಡು ಸೆಮಿಫೈನಲ್ ಪಂದ್ಯಗಳಿಗೆ ಮಳೆಯ ಕಾಟ ಶುರುವಾಗಿದೆ. ನಾಳೆ ಟ್ರಿನಿಡಾಡ್ ಮತ್ತು ಗಯಾನದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಸೆಮಿಸ್ ಮ್ಯಾಚ್ಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿಲ್ಲ. ಆಕಸ್ಮಾತ್ ಮಳೆ ಬಂದು ಪಂದ್ಯ ರದ್ದಾದ್ರೆ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ದೊಡ್ಡ ಶಾಕ್ ಆಗಲಿದೆ. ಯಾಕಂದ್ರೆ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಟಿ20 ವಿಶ್ವಕಪ್ನಲ್ಲಿ ಇದುವರೆಗೂ ಒಂದೂ ಪಂದ್ಯವನ್ನ ಸೋತಿಲ್ಲ. ಮಳೆ ಬಂದು ಪಂದ್ಯ ರದ್ದಾದ್ರೆ ಈ ಎರಡು ಟೀಮ್ಸ್ ಫೈನಲ್ ಪ್ರವೇಶಿಸಲಿವೆ. ಆಗ ಇಂಗ್ಲೆಂಡ್ ಹಾಗೂ ಅಫ್ಘನ್ಗೆ ಭಾರಿ ನಿರಾಸೆಯಾಗಲಿದೆ. ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಲಾಗಿದೆ. ಶನಿವಾರ ಮಳೆ ಬಂದರೆ ಭಾನುವಾರ ಫೈನಲ್ ಫೈಟ್ ನಡೆಲಿದೆ. ಒಟ್ನಲ್ಲಿ ಟಿ20 ವಿಶ್ವಕಪ್‌ಗೆ ಈ ಸಲ ಮಳೆ ಕಂಟಕ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios