T20 World Cup 2024: ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ
ಸೂಪರ್ 8 ಹಂತದ ಮೊದಲ ಪಂದ್ಯವನ್ನು ಭಾರತ ಇಂದು ಬಾರ್ಬಡೋಸ್‌ನ ಕಿಂಗ್ಸ್‌ಟನ್ ಓವಲ್ ಮೈದಾನದಲ್ಲಿ ಆಡಲಿದೆ. ಅಫ್ಘಾನಿಸ್ತಾನದ ಸವಾಲನ್ನು ಟೀಮ್ ಇಂಡಿಯಾ ಎದುರಿಸಲಿದೆ.
ಬಾರ್ಬಡೋಸ್ (ಜೂ.20): ಅತ್ಯಂತ ಮಹತ್ವದ ಸೂಪರ್ 8 ಕದನದಲ್ಲಿ ಟೀಮ್ ಇಂಡಿಯಾ ಇಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಪ್ರಮುಖ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದ್ದು, ಮೊಹಮದ್ ಸಿರಾಜ್ ಬದಲಿಗೆ ಕುಲದೀಪ್ ಯಾದವ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಣಕ್ಕೆ ಇಳಿಸಲಾಗಿದೆ. ಇನ್ನು ಅಫ್ಘಾನಿಸ್ತಾನ ತಂಡದಲ್ಲೂ ಪ್ರಮುಖ ಒಂದು ಬದಲಾವಣೆ ಮಾಡಲಾಗಿದ್ದು, ಕರೀಮ್ ಜನತ್ ಬದಲಿಗೆ ಜಜೈ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಲು ನಿರ್ಧಾರ ಮಾಡಲು ಉತ್ತಮ ಟ್ರ್ಯಾಕ್ ಕಾರಣ, ಪಿಚ್‌ನ ಮೇಲೆ ಹುಲ್ಲುಗಳ ಇದ್ದ ಹಾಗೆ ಕಾಣುತ್ತಿಲ್ಲ. ಪಂದ್ಯ ಸಾಗಿದ ಹಾಗೆ ನಿಧಾನಗತಿಯಾಗಬಹುದು. ನ್ಯೂಯಾರ್ಕ್ ಮೈದಾನಕ್ಕಿಂತ ಉತ್ತಮವಾಗಿದೆ. ಇಲ್ಲಿನ ವಾತಾವರಣಕ್ಕೆ ಆದಷ್ಟು ಬೇಗ ಹೊಂದಿಕೊಳ್ಳಬೇಕಾಗುತ್ತದೆ. ಕೆಲವು ದಿನಗಳ ಹಿಂದೆಯಷ್ಟೇ ಇಲ್ಲಿಗೆ ಬಂದಿದ್ದೇವೆ. ಆದರೆ, ಈ ಮೈದಾನದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ ಅನುಭವ ಇದೆ. ಸಾಮಾನ್ಯವಾಗಿ ಟಿ20 ಪಂದ್ಯ ಸಂಜೆಯ ಮೇಲೆ ಆರಂಭವಾಗುತ್ತದೆ. ಇಲ್ಲಿ ಬೇಗ ಆರಂಭವಾಗುತ್ತಿದೆ. ಇಲ್ಲಿ ಆಟವಾಡುವುದನ್ನು ಇಷ್ಟಪಟ್ಟಿದ್ದೇವೆ ಎಂದು ರೋಹಿತ್ ಶರ್ಮ ಟಾಸ್ ವೇಳೆ ಹೇಳಿದ್ದಾರೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಆರ್ಶ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ
ಭಾರತವೂ ಸೇರಿದಂತೆ ಈ 4 ತಂಡಗಳು ಸೆಮೀಸ್‌ಗೇರಲಿವೆ: ಅಚ್ಚರಿಯ ಭವಿಷ್ಯ ನುಡಿದ ಡೇಲ್ ಸ್ಟೇನ್..!
ಅಫ್ಘಾನಿಸ್ತಾನ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಹಜರತುಲ್ಲಾ ಝಜೈ, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಝೈ, ಮೊಹಮ್ಮದ್ ನಬಿ, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ನವೀನ್-ಉಲ್-ಹಕ್, ಫರೂಲ್ ಹಕ್
ನ್ಯೂಜಿಲೆಂಡ್ ತಂಡಕ್ಕೆ ಡಬಲ್ ಶಾಕ್ ಕೊಟ್ಟ ಕ್ಯಾಪ್ಟನ್ ಕೇನ್ ವಿಲಿಯಮ್ಸನ್..!