ಭಾರತ-ಪಾಕ್ ಟಿ20 ವಿಶ್ವಕಪ್ ಪಂದ್ಯಕ್ಕೆ ಡೇಟ್ ಫಿಕ್ಸ್..!

ಇವತ್ತಿಗೆ ಸರಿಯಾಗಿ 5 ತಿಂಗಳಿಗೆ ಟಿ20 ವಿಶ್ವಕಪ್ ಕಿಕ್ ಆಫ್ ಆಗಲಿದೆ. ಹೌದು, ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ನಡೆಯೋ ಮೇಗಾ ಟೂರ್ನಿ ಜೂನ್ 5ರಂದು ಆರಂಭವಾಗಲಿದೆ. ಐದು ತಿಂಗಳ ಮುಂಚೆಯೇ ಟಿ20 ವರ್ಲ್ಡ್‌ಕಪ್ ವೇಳಾಪಟ್ಟಿ ರಿಲೀಸ್ ಆಗಿದೆ. ಜೂನ್ 5ರಿಂದ ಜೂನ್ 29ರವರೆಗೆ ಅಂದ್ರೆ 25 ದಿನ ದಿನಗಳ ಕಾಲ ಟಿ20 ವಿಶ್ವಕಪ್ ನಡೆಯಲಿದೆ. 25ಕ್ಕೆ 25 ದಿನವೂ ಫುಲ್ ಮನರಂಜನೆ ಸಿಗಲಿದೆ.

T20 World Cup 2024 schedule India vs Pakistan set for June 9 in New York kvn

ಬೆಂಗಳೂರು(ಜ.05): ಈ ವರ್ಷ ಟಿ20 ವಿಶ್ವಕಪ್ ನಡೆಯುತ್ತಿದೆ. ಕ್ರಿಕೆಟ್ ಫ್ಯಾನ್ಸ್‌ಗೆ  ವರ್ಲ್ಡ್‌ಕಪ್‌ಗಿಂತ ಭಾರತ-ಪಾಕಿಸ್ತಾನ ಪಂದ್ಯ ನೋಡೋ ಕಾತರ. ಆ ಮ್ಯಾಚ್‌ಗೆ ವೇದಿಕೆ ಸಿದ್ದವಾಗಿದೆ. ಈ ವಿಶ್ವಕಪ್‌ನಲ್ಲೂ ಲೀಗ್‌ನಲ್ಲೇ ಬದ್ಧವೈರಿಗಳು ಮುಖಾಮುಖಿಯಾಗಲಿವೆ. ಡೇಟ್ ಮತ್ತು ಸ್ಥಳ ಸಹ ಫಿಕ್ಸ್ ಆಗಿದೆ.

ಅಮೇರಿಕಾದಲ್ಲಿ ನಡೆಯಲಿದೆ ಬದ್ಧವೈರಿಗಳ ಕಾಳಗ..!

ಇವತ್ತಿಗೆ ಸರಿಯಾಗಿ 5 ತಿಂಗಳಿಗೆ ಟಿ20 ವಿಶ್ವಕಪ್ ಕಿಕ್ ಆಫ್ ಆಗಲಿದೆ. ಹೌದು, ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ನಡೆಯೋ ಮೆಗಾ ಟೂರ್ನಿ ಜೂನ್ 5ರಂದು ಆರಂಭವಾಗಲಿದೆ. ಐದು ತಿಂಗಳ ಮುಂಚೆಯೇ ಟಿ20 ವರ್ಲ್ಡ್‌ಕಪ್ ವೇಳಾಪಟ್ಟಿ ರಿಲೀಸ್ ಆಗಿದೆ. ಜೂನ್ 5ರಿಂದ ಜೂನ್ 29ರವರೆಗೆ ಅಂದ್ರೆ 25 ದಿನ ದಿನಗಳ ಕಾಲ ಟಿ20 ವಿಶ್ವಕಪ್ ನಡೆಯಲಿದೆ. 25ಕ್ಕೆ 25 ದಿನವೂ ಫುಲ್ ಮನರಂಜನೆ ಸಿಗಲಿದೆ.

ಡೀನ್ ಎಲ್ಗರ್‌ಗೆ ಟೀಂ ಇಂಡಿಯಾ ಅವಿಸ್ಮರಣೀಯ ಬೀಳ್ಕೊಡುಗೆ..!

ಅಮೇರಿಕಾದಲ್ಲಿ ಭಾರತದ ಲೀಗ್ ಪಂದ್ಯಗಳು

ಸದ್ಯ ರಿಲೀಸ್ ಆಗಿರೋ ವೇಳಾಪಟ್ಟಿ ಪ್ರಕಾರ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನ ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಜೂನ್ 9ರಂದು ಭಾನುವಾರ ನ್ಯೂಯಾರ್ಕ್‌ನಲ್ಲಿ ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಸೂಪರ್ ಸಂಡೇಯಂದು ಕಡುವೈರಿಗಳ ಕಾಳಗ ವೀಕ್ಷಿಸಲು ಇಡೀ ಜಗತ್ತೇ ಕಾದು ಕುಳಿತಿದೆ. ಹಾಗಾಗಿಯೇ ಐಸಿಸಿ, ಭಾನುವಾರದಂದು ಭಾರತ-ಪಾಕ್ ಪಂದ್ಯ ಆಯೋಜಿಸಿದೆ. 

ಜೂನ್ 12ರಂದು ಭಾರತ-ಅಮೇರಿಕಾ ಮತ್ತು ಜೂನ್ 15ರಂದು ಭಾರತ-ಕೆನಡಾ ತಂಡಗಳು ಮುಖಾಮುಖಿಯಾಗಲಿವೆ. ಟೀಂ ಇಂಡಿಯಾ ತನ್ನೆಲ್ಲಾ ಲೀಗ್ ಪಂದ್ಯಗಳನ್ನ ಅಮೇರಿಕಾದಲ್ಲಿ ಆಡಲಿದೆ. ನ್ಯೂಯಾರ್ಕ್ನಲ್ಲಿ ಮೂರು ಪಂದ್ಯ ಮತ್ತು ಫ್ಲೋರಿಡಾದಲ್ಲಿ ಒಂದು ಪಂದ್ಯ ನಡೆಯಲಿದೆ.

ವೆಸ್ಟ್ ಇಂಡೀಸ್ನಲ್ಲಿ ಭಾರತದ ಸೂಪರ್-8 ಪಂದ್ಯಗಳು

2024ರ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ಆಯೋಜಿಸಲಿದೆ. ಲೀಗ್ ಹಂತದ ಪಂದ್ಯಗಳು ಯುಎಸ್ಎನಲ್ಲಿ ನಡೆಯಲಿವೆ. ಹಾಗೆಯೇ ಸೂಪರ್-8 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯವಹಿಸಲಿದೆ. ಹಾಗಾಗಿ ಭಾರತ ಸಹ ವಿಂಡೀಸ್‌ನಲ್ಲೇ ಸೂಪರ್-8 ಮ್ಯಾಚ್‌ಗಳನ್ನಾಡಲಿದೆ. ಇನ್ನು ಫೈನಲ್ ಪಂದ್ಯಕ್ಕೂ ಕೆರಿಬಿಯನ್ ರಾಷ್ಟ್ರ ಆತಿಥ್ಯ ವಹಿಸಲಿದೆ. ಬಾರ್ಬಡಾಸ್‌ನಲ್ಲಿ ಫೈನಲ್ ಫೈಟ್ ನಡೆಯೋ ಸಾಧ್ಯತೆ ಇದೆ.

ಪಿಚ್ ರೇಟಿಂಗ್‌: ಐಸಿಸಿ, ಕ್ರೀಡಾ ತಜ್ಞರ ದ್ವಿಮುಖ ನೀತಿಗೆ ರೋಹಿತ್‌ ಶರ್ಮಾ ಕೆಂಡಾಮಂಡಲ

ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬರೋಬ್ಬರಿ 20 ತಂಡಗಳು ಕಣಕ್ಕಿಳಿಯಲಿವೆ. ತಲಾ 5 ತಂಡಗಳಿರುವ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪುಗಳಿಂದ 2 ತಂಡಗಳು ಸೂಪರ್-8 ಹಂತಕ್ಕೇರಲಿದೆ. ಈ ಹಂತದಲ್ಲಿ 8 ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು, ಇದರಲ್ಲಿ ಅಗ್ರ ನಾಲ್ಕು ಟೀಮ್ಸ್ ಸೆಮಿಫೈನಲ್‌ಗೆ ಎಂಟ್ರಿಕೊಡಲಿವೆ. ಸೆಮಿಸ್‌ನಲ್ಲಿ ಗೆದ್ದ ಟೀಮ್ಸ್ ಫೈನಲ್ ಪ್ರವೇಶಿಸಲಿವೆ.

ಐಪಿಎಲ್ ಪರ್ಫಾಮೆನ್ಸ್ ನೋಡಿ ಟೀಂ ಇಂಡಿಯಾವನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ. ರೋಹಿತ್, ಕೊಹ್ಲಿ ಮತ್ತು ರಾಹುಲ್ ಸಹ ಟಿ20 ವಿಶ್ವಕಪ್ ಆಡಲಿದ್ದಾರೆ. ಆದ್ರೆ ಈ ಮೂವರು 2022ರ ಟಿ20 ವಿಶ್ವಕಪ್ ಬಳಿಕ ಭಾರತ ಪರ ಒಂದೇ ಒಂದು ಟಿ20 ಮ್ಯಾಚ್ ಆಡಿಲ್ಲ.

- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios