Asianet Suvarna News Asianet Suvarna News
breaking news image

ಇಂದು ಹಾಲಿ ಚಾಂಪಿಯನ್‌ಗೆ ನಮೀಬಿಯಾ ಸವಾಲು: ಗೆದ್ದರಷ್ಟೇ ಇಂಗ್ಲೆಂಡ್ ಸೂಪರ್‌-8 ಚಾನ್ಸ್‌

ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿದ್ದವು. ಇದಾದ ಬಳಿಕ ಇಂಗ್ಲೆಂಡ್ ತಂಡವು ತನ್ನ ಬದ್ದ ಎದುರಾಳಿ ಆಸ್ಟ್ರೇಲಿಯಾ ಎದುರು 36 ರನ್ ಅಂತರದ ಸೋಲು ಅನುಭವಿಸಿತ್ತು. ಇನ್ನು ಇಂಗ್ಲೆಂಡ್ ತಂಡವು ಓಮನ್ ಎದುರು ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೂಪರ್ 8 ಪ್ರವೇಶಿಸುವ ಕನಸು ಜೀವಂತವಾಗಿರಿಸಿಕೊಂಡಿದೆ.
 

T20 World Cup 2024 England ready to take on Namibia Challenge kvn
Author
First Published Jun 15, 2024, 9:56 AM IST

ಆಂಟಿಗಾ: ಆಸ್ಟ್ರೇಲಿಯಾ ಎದುರು ಆಘಾತಕಾರಿ ಸೋಲು ಕಂಡ ಬಳಿಕ ಎಚ್ಚೆತ್ತುಕೊಂಡಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಇದೀಗ ಸೂಪರ್ 8ನತ್ತ ದಿಟ್ಟ ಹೆಜ್ಜೆ ಹಾಕುತ್ತಿದೆ. ಇಂಗ್ಲೆಂಡ್‌ ತಂಡ ಶನಿವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೆಣಸಲಿದೆ.

ಜೋಸ್ ಟಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಸದ್ಯ 3 ಪಂದ್ಯದಲ್ಲಿ 3 ಅಂಕ ಸಂಪಾದಿಸಿದ್ದು, ನಮೀಬಿಯಾ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಿದೆ. ಆದರೆ ತಂಡದ ಸೂಪರ್‌-8 ಭವಿಷ್ಯ ಭಾನುವಾರದ ಆಸ್ಟ್ರೇಲಿಯಾ-ಸ್ಕಾಟ್ಲೆಂಡ್‌ ಪಂದ್ಯದ ಮೂಲಕ ನಿರ್ಧಾರವಾಗಲಿದೆ. ಆಸ್ಟ್ರೇಲಿಯಾ(6 ಅಂಕ) ಈಗಾಗಲೇ ಸೂಪರ್‌-8ಕ್ಕೇರಿದ್ದು, ಸ್ಕಾಟ್ಲೆಂಡ್‌(5 ಅಂಕ) ಕೂಡಾ ರೇಸ್‌ನಲ್ಲಿದೆ. ಆಸೀಸ್‌ ವಿರುದ್ಧ ಸ್ಕಾಟ್ಲೆಂಡ್‌ ಸೋತು, ನಮೀಬಿಯಾ ವಿರುದ್ಧ ಇಂಗ್ಲೆಂಡ್‌ ಗೆದ್ದರಷ್ಟೇ ತಂಡ ಸೂಪರ್‌-8ಕ್ಕೇರಲಿದೆ.

ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿದ್ದವು. ಇದಾದ ಬಳಿಕ ಇಂಗ್ಲೆಂಡ್ ತಂಡವು ತನ್ನ ಬದ್ದ ಎದುರಾಳಿ ಆಸ್ಟ್ರೇಲಿಯಾ ಎದುರು 36 ರನ್ ಅಂತರದ ಸೋಲು ಅನುಭವಿಸಿತ್ತು. ಇನ್ನು ಇಂಗ್ಲೆಂಡ್ ತಂಡವು ಓಮನ್ ಎದುರು ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೂಪರ್ 8 ಪ್ರವೇಶಿಸುವ ಕನಸು ಜೀವಂತವಾಗಿರಿಸಿಕೊಂಡಿದೆ.

ಇಂಗ್ಲೆಂಡ್‌-ನಮೀಬಿಯಾ ಪಂದ್ಯ: ರಾತ್ರಿ 10.30ಕ್ಕೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

3.1 ಓವರಲ್ಲೇ 48 ರನ್‌ ಚೇಸ್‌: ಇಂಗ್ಲೆಂಡ್‌ ಸೂಪರ್‌-8 ಕನಸು ಜೀವಂತ

ಆ್ಯಂಟಿಗಾ: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದ್ದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ಶುಕ್ರವಾರ ಮುಂಜಾನೆ ನಡೆದ ಒಮಾನ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್‌ ಭರ್ಜರಿ ಜಯಗಳಿಸಿದೆ.

ಇದರೊಂದಿಗೆ ಭರಪೂರ ನೆಟ್‌ ರನ್‌ರೇಟ್‌ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್‌, ‘ಬಿ’ ಗುಂಪಿನಿಂದ 2ನೇ ತಂಡವಾಗಿ ಸೂಪರ್‌-8ಕ್ಕೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಒಮಾನ್‌ ಸತತ 4 ಸೋಲು ಕಂಡಿತು.

ಪಾಕಿಸ್ತಾನ ಸೂಪರ್ 8 ಕನಸು ನುಚ್ಚುನೂರು; ಯುಎಸ್‌ಎ & ಭಾರತ ಮುಂದಿನ ಹಂತಕ್ಕೆ ಲಗ್ಗೆ..!

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಒಮಾನ್‌ 13.2 ಓವರ್‌ಗಳಲ್ಲಿ ಕೇವಲ 47 ರನ್‌ಗೆ ಸರ್ವಪತನ ಕಂಡಿತು. ಶೊಐಬ್‌ ಖಾನ್‌(11) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಸ್ಪಿನ್ನರ್‌ ಆದಿಲ್‌ ರಶೀದ್‌ 4 ಓವರಲ್ಲಿ 11 ರನ್‌ಗೆ 4 ವಿಕೆಟ್‌ ಕಿತ್ತರೆ, ಮಾರ್ಕ್‌ ವುಡ್‌ ಹಾಗೂ ಜೋಫ್ರಾ ಆರ್ಚರ್‌ ತಲಾ 3 ವಿಕೆಟ್‌ ಪಡೆದರು.

ನೆಟ್‌ ರನ್‌ರೇಟ್ ಹೆಚ್ಚಿಸಲು ಸಿಕ್ಕ ಸುವರ್ಣಾವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಇಂಗ್ಲೆಂಡ್‌, ಸುಲಭ ಗುರಿಯನ್ನು 2 ವಿಕೆಟ್‌ ಕಳೆದುಕೊಂಡು ಕೇವಲ 3.1 ಓವರಲ್ಲೇ ಬೆನ್ನತ್ತಿ ಜಯಗಳಿಸಿತು. ಜೋಸ್‌ ಬಟ್ಲರ್‌ 8 ಎಸೆತಗಳಲ್ಲಿ ಔಟಾಗದೆ 24 ರನ್‌ ಗಳಿಸಿದರು.

ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡ ಪ್ರಕಟ..! ಆದ್ರೆ ಮೊದಲ ಸ್ಥಾನದಲ್ಲಿರುವುದು ಆರ್‌ಸಿಬಿ, ಕೆಕೆಆರ್ ಅಲ್ಲವೇ ಅಲ್ಲ

ಸ್ಕೋರ್‌: ಒಮಾನ್‌ 13.2 ಓವರಲ್ಲಿ 47/10 (ಶೊಐಬ್‌ 11, ಆದಿಲ್‌ 4-11, ವುಡ್‌ 3-12, ಆರ್ಚರ್‌ 3-12), ಇಂಗ್ಲೆಂಡ್‌ 3.1 ಓವರಲ್ಲಿ 50/2 (ಬಟ್ಲರ್ 24*, ಕಲೀಮುಲ್ಲಾಹ್‌ 1-10) ಪಂದ್ಯಶ್ರೇಷ್ಠ: ಆದಿಲ್‌ ರಶೀದ್‌

101 ಎಸೆತ: ಇಂಗ್ಲೆಂಡ್‌ 101 ಎಸೆತ ಬಾಕಿಯಿಟ್ಟು ಗೆಲುವು ಸಾಧಿಸಿತು. ಇದು ಟಿ20 ವಿಶ್ವಕಪ್‌ನಲ್ಲೇ ಗರಿಷ್ಠ. 2014ರಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಶ್ರೀಲಂಕಾ 90 ಎಸೆತ ಬಾಕಿ ಉಳಿಸಿ ಗೆದ್ದಿದ್ದು ಈ ವರೆಗಿನ ದಾಖಲೆ.

Latest Videos
Follow Us:
Download App:
  • android
  • ios