T20 World Cup ಹರಿಣಗಳು ಸೋಲುಂಡ ಬೆನ್ನಲ್ಲೇ ಪಾಕಿಸ್ತಾನ ತಂಡಕ್ಕೆ ಅಭಿನಂದನೆಗಳ ಮಹಾಪೂರ..!
* ನೆದರ್‌ಲೆಂಡ್ಸ್ ಎದುರು ಹೀನಾಯ ಸೋಲುಂಡ ದಕ್ಷಿಣ ಆಫ್ರಿಕಾ
* ದಕ್ಷಿಣ ಆಫ್ರಿಕಾ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಸೆಮೀಸ್‌ಗೆ ಲಗ್ಗೆ
* ಪಾಕ್ ಗೆಲುವಿನ ಬೆನ್ನಲ್ಲೇ ಅಭಿನಂದನೆಗಳ ಮಹಾಪೂರ
ಅಡಿಲೇಡ್(ನ.06): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ ಸಂಡೇಯ ಮೊದಲ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ದಕ್ಷಿಣ ಆಫ್ರಿಕಾ ವಿರುದ್ದ ನೆದರ್‌ಲೆಂಡ್ಸ್ ತಂಡವು 13 ರನ್‌ಗಳ ರೋಚಕ ಜಯ ಸಾಧಿಸಿದೆ. ನೆದರ್‌ಲೆಂಡ್ಸ್ ವಿರುದ್ದ ದಕ್ಷಿಣ ಆಫ್ರಿಕಾ ತಂಡವು ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಪಾಕಿಸ್ತಾನದ ಸೆಮೀಸ್ ಹಾದಿ ಕೂಡಾ ಸುಗಮವಾಗಿತ್ತು. ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಗ್ರೂಪ್ 2 ಹಂತದಲ್ಲಿ ಎರಡನೇ ತಂಡವಾಗಿ ಬಾಬರ್ ಅಜಂ ಪಡೆ ಸೆಮೀಸ್‌ಗೇರುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತ ವಿರುದ್ದ 4 ವಿಕೆಟ್‌ಗಳ ರೋಚಕ ಸೋಲು ಅನುಭವಿಸಿತ್ತು. ಇದಾದ ಬಳಿಕ ಜಿಂಬಾಬ್ವೆ ವಿರುದ್ದ ಕೂಡಾ 1 ರನ್ ರೋಚಕ ಸೋಲು ಅನುಭವಿಸಿ ಬಹುತೇಕ ಸೆಮೀಸ್ ರೇಸ್‌ನಿಂದ ಹೊರಬಿದ್ದಂತೆ ಆಗಿತ್ತು. ಆದರೆ ಇದಾದ ಬಳಿಕ ಎಚ್ಚೆತ್ತುಕೊಂಡ ಬಾಬರ್ ಅಜಂ ಪಡೆ, ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೆದರ್‌ಲೆಂಡ್ಸ್ ಎದುರು 6 ವಿಕೆಟ್‌ಗಳ ಜಯ ಸಾಧಿಸಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಪಾಕಿಸ್ತಾನ ತಂಡವು 33 ರನ್‌ಗಳ ಜಯ ಸಾಧಿಸಿ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಇದೀಗ 5 ಅಂಕಗಳನ್ನು ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡವು ನೆದರ್‌ಲೆಂಡ್ಸ್ ವಿರುದ್ದ ಗೆಲುವು ಸಾಧಿಸಿದ್ದರೇ ಪಾಕಿಸ್ತಾನ ತಂಡವು ಸೆಮೀಸ್ ರೇಸ್‌ನಿಂದ ಹೊರಬೀಳುತ್ತಿತ್ತು. ಆದರೆ ನೆದರ್‌ಲೆಂಡ್ಸ್ ವಿರುದ್ದ ಹರಿಣಗಳ ಪಡೆ ಮುಗ್ಗರಿಸಿತ್ತು. ಇನ್ನು ಇದೇ ವೇಳೆ ಬಾಂಗ್ಲಾದೇಶ ಎದುರು ಪಾಕಿಸ್ತಾನ ತಂಡವು 5 ವಿಕೆಟ್‌ಗಳ ಜಯ ಸಾಧಿಸಿ 6 ಅಂಕಗಳೊಂದಿಗೆ ಎರಡನೇ ತಂಡವಾಗಿ ಸೆಮೀಸ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.
T20 World Cup: ಬಾಂಗ್ಲಾದೇಶಕ್ಕೆ ಸೋಲುಣಿಸಿ ಸೆಮೀಸ್‌ಗೆ ಲಗ್ಗೆಯಿಟ್ಟ ಪಾಕಿಸ್ತಾನ..!
ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ನೆದರ್‌ಲೆಂಡ್ಸ್ ಗೆಲುವು ಸಾಧಿಸುತ್ತಿದ್ದಂತೆ, ಪಾಕಿಸ್ತಾನ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಈ ಕುರಿತಂತೆ ಟ್ವೀಟ್ ಮಾಡಿದ ಆಕಾಶ್ ಚೋಪ್ರಾ, ಇಂದು ಪಾಕಿಸ್ತಾನ ತಂಡವು ಸೆಮೀಸ್‌ಗೆ ಲಗ್ಗೆಯಿಟ್ಟರೇ, ಅವರು ಖಂಡಿತವಾಗಿಯೂ ಫೈನಲ್ ಪಂದ್ಯವನ್ನಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ, ಮೂರು ದಿನಗಳ ಹಿಂದಷ್ಟೇ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಬಹುತೇಕ ಸೆಮೀಸ್ ರೇಸ್‌ನಿಂದ ಹೊರಬಿದ್ದಂತೆ ಕಾಣುತ್ತಿತ್ತು. ಎಂತಹ ಅದ್ಬುತ ವಿಶ್ವಕಪ್ ಇದು ಎಂದು ಟ್ವೀಟ್ ಮಾಡಿದ್ದಾರೆ.