Asianet Suvarna News Asianet Suvarna News

T20 World Cup 2021: ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ವೆಸ್ಟ್ ಇಂಡೀಸ್!

  • ವೆಸ್ಟ್ ಇಂಡೀಸ್ ತಂಡಕ್ಕೆ ಡೂ ಆರ್ ಡೈ ಮ್ಯಾಚ್
  • ಶ್ರೀಲಂಕಾಗೆ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವ ತವಕ
  • ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ
T20 World Cup 2021 WI vs SL West Indies won toss and chose bowl first against Srilanka ckm
Author
Bengaluru, First Published Nov 4, 2021, 7:05 PM IST
  • Facebook
  • Twitter
  • Whatsapp

ಅಬು ಧಾಬಿ(ನ.04): ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ನಡುವಿನ ರೋಚಕ ಹೋರಾಟಕ್ಕೆ ಅಬು ಧಾಬಿ ಕ್ರೀಡಾಂಗಣ ಸಜ್ಜಾಗಿದೆ. ಇದು ಶ್ರೀಲಂಕಾ(Srilanka) ಸ್ಪಿನ್ನರ್ಸ್ ಹಾಗೂ ವೆಸ್ಟ್ ಇಂಡೀಸ್(West Indies) ಬ್ಯಾಟ್ಸಮನ್ ನಡುವಿನ ಹೋರಾಟ ಎಂದೇ ಬಿಂಬಿತವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿದೆ.

T20 World Cup: Aus vs Ban ಆಸೀಸ್‌ ಅಬ್ಬರಕ್ಕೆ ಬಾಂಗ್ಲಾದೇಶ ಧೂಳೀಪಟ..

ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಬಿನುರಾ ಫರ್ನಾಂಡೋ ತಂಡ ಸೇರಿಕೊಂಡಿದ್ದಾರೆ. ಆದರೆ ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಶ್ರೀಲಂಕಾ ತಂಡ(Srilanka Squad):
ಪಥುಮಾ ನಿಸಾಂಕ, ಕುಸಾಲ್ ಪರೇರಾ, ಚಾರಿತ್ ಅಸಲಂಕಾ, ಅವಿಷ್ಕಾ ಫರ್ನಾಂಡೋ, ಭಾನುಕಾ ರಾಜಪಕ್ಸ, ದಸೂನ್ ಶನಕ(ನಾಯಕ), ವಾವಿಂಡು ಹಸರಂಗ, ಚಾಮಿಕಾ ಕುರಣಾರತ್ನೆ, ದುಷ್ಮಂತ್ ಚಮೀರಾ, ಮಹೀಶಾ ತೀಕ್ಷನಾ, ಬಿನುರಾ ಫರ್ನಾಂಡೋ

ವೆಸ್ಟ್ ಇಂಡೀಸ್ ತಂಡ(West Indies Squad):
ಕ್ರಿಸ್ ಗೇಲ್, ಇವಿನ್ ಲಿವಿಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್, ಕೀರನ್ ಪೋಲಾರ್ಡ್(ನಾಯಕ), ಶಿಮ್ರೊನ್ ಹೆಟ್ಮೆಯರ್,  ಆ್ಯಂಡ್ರೆ ರಸೆಲ್, ಡ್ವೇನ್ ಬ್ರಾವೋ, ಜೇಸನ್ ಹೋಲ್ಡರ್, ಆಕೆಲ್ ಹೂಸೈನ್ ರವಿ ರಾಂಪಾಲ್

2014ರ ಟಿ20 ಚಾಂಪಿಯನ್ ತಂಡ ಶ್ರೀಲಂಕಾ ಈ ಬಾರಿ ನಿರೀಕ್ಷಿತ ಹೋರಾಟ ನೀಡದೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾ ತಂಡದ 3 ಸೋಲು ಸಿಂಹಳೀಯರಿಗೆ ತೀವ್ರ ಹೊಡೆತ ನೀಡಿದೆ. ಹೀಗಾಗಿ ಲಂಕಾ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಇದೀಗ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವುದೊಂದೇ ಶ್ರೀಲಂಕಾ ಮುಂದಿರುವ ಗುರಿಯಾಗಿದೆ. ಶ್ರೀಲಂಕಾ ಆಡಿದ 4 ಪಂದ್ಯದಲ್ಲಿ ಕೇವಲ 1 ಗೆಲುವು ಸಾಧಿಸಿದೆ. 

ಆದರೆ ವೆಸ್ಟ್ ಇಂಡೀಸ್ ಹಾದಿ ಇನ್ನು ಅಸ್ಪಷ್ಟವಾಗಿದೆ. ಕಾರಣ 3 ಪಂದ್ಯದಲ್ಲಿ 1 ಗೆಲುವು ಸಾಧಿಸಿದೆ. ಇನ್ನುಳಿದ ಎಲ್ಲಾ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಿದೆ. ಇಷ್ಟೇ ಅಲ್ಲ. ಇತರ ತಂಡದ ಫಲಿತಾಂಶವೂ ವಿಂಡೀಸ್ ಸೆಮಿಫೈನಲ್ ಹಾದಿಯಲ್ಲಿ ಸಾಗಲು ಪ್ರಮುಖವಾಗಿದೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡಕ್ಕೆ ಅತೀ ಮುಖ್ಯವಾಗಿದೆ.

ಮೊದಲ ಗುಂಪಿನಲ್ಲಿರುವ ಶ್ರೀಲಂಕ ಹಾಗೂ ವೆಸ್ಟ್ ಇಂಡೀಸ್ ಅಂಕಪಟ್ಟಿಯಲ್ಲಿ 4 ಮತ್ತು 5ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 3 ಪಂದ್ಯದಲ್ಲಿ 1 ಗೆಲುವು ದಾಖಲಿಸಿದ್ದರೆ, ಶ್ರೀಲಂಕಾ 4ರಲ್ಲಿ 1 ಗೆಲುವು ಕಂಡಿದೆ. ಆದರೆ ನೆಟ್‌ರನ್‌ರೇಟ್ ಆಧಾರದಲ್ಲಿ ಲಂಕಾ ತಂಡ 4ನೇ ಸ್ಥಾನದಲ್ಲಿ ಅಲಂಕರಿಸಿದೆ.

ಎಲ್ಲಾ ಪಂದ್ಯಗಳಲ್ಲಿ ಇಬ್ಬನಿ ಸೆಕೆಂಡ್ ಬೌಲಿಂಗ್ ತಂಡಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ನಾವು ಬೌಲಿಂಗ್ ಮಾಡಲು ನಿರ್ಧರಿಸಿದ್ದೇವೆ. ಜೊತೆಗೆ ನಮಗೆ ಇದು ತುಂಬಾ ಮುಖ್ಯವಾದ ಪಂದ್ಯವಾಗಿದೆ. ಈಗ ಆಡಿದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಿರೀಕ್ಷಿತ ಬ್ಯಾಟಿಂಗ್ ನೀಡಲು ವಿಫಲವಾಗಿದೆ. ಇಂದಿನ ಪಂದ್ಯದಲ್ಲಿ ಉತ್ತಮ ಹೋರಾಟ ನೀಡುವ ನಿರೀಕ್ಷೆಯಿದೆ. ಇಂಜುರಿ ತಂಡಕ್ಕೆ ಕೊಂಚ ಹಿನ್ನಡೆ ತಂದಿರುವುದು ನಿಜ. ಆದರೆ ಇಂದು ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ವಿಶ್ವಾಸದವಿದೆ. ಲಂಕಾ ತಂಡವನ್ನು ಕಟ್ಟಿಹಾಕಿ ರನ್ ಚೇಸ್ ಮಾಡಲು ಸಜ್ಜಾಗಿದ್ದೇವೆ ಎಂದು ಟಾಸ್ ಗೆದ್ದ ನಾಯಕ ಕೀರನ್ ಪೋಲಾರ್ಡ್ ಹೇಳಿದ್ದಾರೆ.

ನಾವು ಕೂಡ ಬೌಲಿಂಗ್ ಮಾಡಲು ಇಚ್ಚಿಸಿದ್ದೇವು. ಶ್ರೀಲಂಕಾ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ  ಲಂಕಾ ಬ್ಯಾಟಿಂಗ್ ಸ್ಟ್ರೇಥ್ ಪರೀಕ್ಷೆ ಮಾಡಲಿದೆ. ಉತ್ತಮ ಹೋರಾಟ ನೀಡುವ ನಿರೀಕ್ಷೆ ಇದೆ. ತಪ್ಪುಗಳಿಂದ ಪಾಠ ಕಲಿತಿದ್ದೇವೆ ಎಂದು ಶ್ರೀಲಂಕಾ ನಾಯಕ ದಸೂನ್ ಶನಕ ಹೇಳಿದ್ದಾರೆ.

Follow Us:
Download App:
  • android
  • ios