Asianet Suvarna News Asianet Suvarna News

T20 World Cup 2021: ಗೆಲ್ಲಲೇಬೇಕಾದ ಪಂದ್ಯದಲ್ಲಿ ವಿಂಡೀಸ್‌ಗೆ 190ರನ್ ಟಾರ್ಗೆಟ್!

  • ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯ
  • ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ 190 ರನ್ ಟಾರ್ಗೆಟ್
  • ಅಬು ಧಾಬಿಯಲ್ಲಿ ನಡೆಯುತ್ತಿರುವ ರೋಚಕ ಫೈಟ್
T20 World Cup 2021 WI vs SL Charith Asalanka helps srilanka to set 190 runs target to West Indies ckm
Author
Bengaluru, First Published Nov 4, 2021, 9:22 PM IST
  • Facebook
  • Twitter
  • Whatsapp

ಅಬು ಧಾಬಿ(ನ.04): ವೆಸ್ಟ್ ಇಂಡೀಸ್(West Indies) ತಂಡಕ್ಕೆ ಗೆಲ್ಲಲಬೇಕಾದ ಪಂದ್ಯ, ಇತ್ತ ಶ್ರೀಲಂಕಾ(Srilanka) ತಂಡಕ್ಕೆ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವ ಲೆಕ್ಕಾಚಾರ. ಹೀಗಾಗಿ ಅಬು ಧಾಬಿಯಲ್ಲಿ ಉಭಯ ತಂಡಗಳು ರೋಚಕ ಹೋರಾಟ ಏರ್ಪಟ್ಟಿದೆ. ಮಹತ್ವದ ಪಥುಮ್ ನಿಸಾಂಕ ಹಾಗೂ ಚಾರಿತ್ ಅಸಲಂಕಾ ಹೋರಾಟದಿಂದ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 189  ರನ್ ಸಿಡಿಸಿದೆ.

T20 World Cup: Ind vs Sco ಸ್ಕಾಟ್ಲೆಂಡ್ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ..?

ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಯಾವುದೇ ಹಿಂಜರಿಕೆ ಇಲ್ಲದೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕಾರಣ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಚೇಸಿಂಗ್ ಮಾಡಿದ ತಂಡಕ್ಕೆ ಗೆಲುವಿನ ಚಾನ್ಸ್ ಹೆಚ್ಚಾಗಿದೆ. ಹೀಗಾಗಿ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು.

ಬ್ಯಾಟಿಂಗ್ ಇಳಿದ ಶ್ರೀಲಂಕಾ ತಂಡಕ್ಕೆ ಪಥುಮ್ ನಿಸಾಂಕ(Pathum Nissanka) ಹಾಗೂ ಕುಸಾಲ್ ಪರೇರಾ ಉತ್ತಮ ಆರಂಭ ನೀಡಿದರು. ಆದರೆ ಪರೇರಾ ಹೋರಾಟ 29 ರನ್‌ಗಳಿಗೆ ಅಂತ್ಯವಾಯಿತು. ಈ ಜೋಡಿ ಮೊದಲ ವಿಕೆಟ್‌ಗೆ 41 ರನ್ ಜೊತೆಯಾಟ ನೀಡಿತು. ನಿಸಾಂಕ ಹಾಗೂ ಚಾರಿತ್ ಅಸಲಂಕಾ ಜೊತೆಯಾಟದಿಂದ ಶ್ರೀಲಂಕಾ ಚೇತರಿಸಿಕೊಂಡಿತು.

ಪಥುಮ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಪಥುಮ್ 41 ಎಸೆತದಲ್ಲಿ 5 ಬೌಂಡರಿ ಮೂಲಕ 51 ರನ್ ಸಿಡಿಸಿ ಔಟಾದರು. ಆದರೆ ಚಾರಿತ್ ಅಸಲಂಕ ಹೋರಾಟ ಮುಂದುವರಿಸಿದರು. ಅಬ್ಬರಿಸಿದ ಚಾರಿತ್ ಅಸಲಂಕ(Asalanka) ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ಅಲಲಂಕಾ 41 ಎಸೆತದಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 68 ರನ್ ಸಿಡಿಸಿ ಔಟಾದರು.

T20 World Cup: Aus vs Ban ಆಸೀಸ್‌ ಅಬ್ಬರಕ್ಕೆ ಬಾಂಗ್ಲಾದೇಶ ಧೂಳೀಪಟ..!

ಅಂತಿಮ ಹಂತದಲ್ಲಿ ನಾಯಕ ದಸೂನ್ ಶನಕ ಹಾಗೂ ಚಾಮಿಕಾ ಕರುಣಾರತ್ನೆ ಹೋರಾಟ ಲಂಕಾ ತಂಡಕ್ಕೆ ನೆರವಾಯಿತು. ಈ ಹಿಂದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಶ್ರೀಲಂಕಾ ತಂಡ ಮೈಕೊಡವಿ ನಿಂತುಕೊಂಡಿತು. ಬ್ಯಾಟಿಂಗ್‌ನಲ್ಲಿ ದಿಟ್ಟ ಪ್ರದರ್ಶನ ನೀಡಿತು.

ಶನಕ ಅಜೇಯ 25 ರನ್ ಸಿಡಿಸಿದರೆ, ಕರುಣಾರತ್ನೆ ಅಜೇಯ 3 ರನ್ ಸಿಡಿಸಿದರು. ಈ ಮೂಲಕ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು. ಇದೀಗ ವೆಸ್ಟ್ ಇಂಡೀಸ್ ತಂಡ ಗೆಲುವಿಗೆ 190 ರನ್ ಸಿಡಿಸಿಬೇಕಿದೆ.

ಅಂಕಪಟ್ಟಿ:
ಮೊದಲ ಗುಂಪಿನ ಅಂಕಪಟ್ಟಿಯಲ್ಲಿ(points Table) ಶ್ರೀಲಂಕಾ 4ನೇ ಸ್ಥಾನದಲ್ಲಿದೆ. 4 ಪಂದ್ಯದಲ್ಲಿ 1 ಗೆಲುವು ಹಾಗೂ 3 ಸೋಲು ಅನುಭವಿಸಿರುವ ಶ್ರೀಲಂಕಾ ಕೇವಲ 2 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ 3 ಪಂದ್ಯದಲ್ಲಿ 1 ಗೆಲುವು ಹಾಗೂ 2 ಸೋಲು ಕಂಡಿದೆ. ಈ ಮೂಲಕ 2 ಅಂಕ ಸಂಪಾದಿಸಿದೆ. 

ಮೊದಲ ಗುಂಪಿನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಆಡಿದ 4 ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ 8 ಅಂಕ ಸಂಪಾದಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇನ್ನು ಆಸ್ಟ್ರೇಲಿಯಾ 4ರಲ್ಲಿ 3 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ಕೂಡ 3 ಗೆಲುವು ಸಾಧಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಸೆಮೀಸ್ ಪ್ರವೇಶಕ್ಕೆ ತೀವ್ರ ಪೈಪೋಟಿ ನಡೆಸುತ್ತಿದೆ.

ಎರಡನೇ ಗುಂಪಿನಲ್ಲಿ ಪಾಕಿಸ್ತಾನ 4 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಪಾಕಿಸ್ತಾನ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇನ್ನು ಆಫ್ಘಾನಿಸ್ತಾನ 2ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 3 ಹಾಗೂ ಭಾರತ 4ನೇ ಸ್ಥಾನದಲ್ಲಿದೆ. 

Follow Us:
Download App:
  • android
  • ios