T20 World Cup 2021 ಟೂರ್ನಿಯಲ್ಲಿ ಸೌತ್ ಆಫ್ರಿಕಾ ಶುಭಾರಂಭ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ ಗೆಲುವು ಸಾಧಿಸಿತ ಸೌತ್ ಆಫ್ರಿಕಾ ಸತತ 2ನೇ ಸೋಲು ಅನುಭವಿಸಿದ ವೆಸ್ಟ್ ಇಂಡೀಸ್
ದುಬೈ(ಅ.26): ಟಿ20 ವಿಶ್ವಕಪ್ ಟೂರ್ನಿಯ(T20 World Cup) ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್(West Indies) ಸತತ 2ನೇ ಸೋಲು ಕಂಡಿದೆ. ಇಂಗ್ಲೆಂಡ್(England) ವಿರುದ್ಧ ವಿರುದ್ಧ ಮುಗ್ಗರಿಸಿದ್ದ ವೆಸ್ಟ್ ಇಂಡೀಸ್ ಇದೀಗ ಸೌತ್ ಆಫ್ರಿಕಾ(South Africa) ವಿರುದ್ಧ ಸೋಲು ಅನುಭವಿಸಿದೆ. ವೆಸ್ಟ್ ಇಂಡೀಸ್ ನೀಡಿದ 144 ರನ್ ಟಾರ್ಗೆಟ್ ಚೇಸ್ ಮಾಡಿದ ಸೌತ್ ಆಫ್ರಿಕಾ 8 ವಿಕೆಟ್ ಭರ್ಜರಿ ಗೆಲುವು ಕಂಡಿದೆ.
ಪಾಕ್ ವಿರುದ್ದ ಭಾರತ ಸೋಲಿಗೆ ಕೊಹ್ಲಿ ಮಾಡಿದ ಒಂದು ತಪ್ಪು ಕಾರಣ ಎಂದ ಇಂಜಮಾಮ್!
ದುಬೈ(Dubai) ಕ್ರೀಡಾಂಗಣದಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ ತಂಡಕ್ಕೆ ಗೆಲುವಿನ ಚಾನ್ಸ್ ಹೆಚ್ಚು ಅನ್ನೋದು ಮತ್ತೊಮ್ಮೆ ಸಾಬೀತಾಯಿತು. ವಿಶ್ವದರ್ಜೆಯ ಟಿ20 ಬ್ಯಾಟ್ಸ್‌ಮನ್ ಹೊಂದಿರುವ ವೆಸ್ಟ್ ಇಂಡೀಸ್ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಇಂಗ್ಲೆಂಡ್ ವಿರುದ್ಧ ಕೇವಲ 55 ರನ್‌ಗೆ ಆಲೌಟ್ ಆಗಿದ್ದ ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ವಿರುದ್ಧ 143 ರನ್ ಸಿಡಿಸಿತು.
ಭಾರತ ವಿರುದ್ಧ ಘೋಷಣೆ, ಪಾಕ್ ಗೆಲುವಿಗೆ ಸಂಭ್ರಮ; ಕಾಶ್ಮೀರ ವಿದ್ಯಾರ್ಥಿ, ರಾಜಸ್ಥಾನ ಶಿಕ್ಷಕಿ ಮೇಲೆ ಕೇಸ್!
ಇವಿನ್ ಲಿವಿಸ್ 56 ರನ್ ಸಿಡಿಸಿ ಮಿಂಚಿದರು. ಆದರೆ ಇತರರಿಂದ ನಿರೀಕ್ಷ ಹೋರಾಟ ಮೂಡಿಬರಲಿಲ್ಲ.ನಾಯಕ ಕೀರನ್ ಪೋಲಾರ್ಡ್ 26 ರನ್ ಸಿಡಿಸಿ ಔಟಾದರು. ಇದರೊಂದಿಗೆ ಸೌತ್ ಆಫ್ರಿಕಾ 144 ರನ್ ಟಾರ್ಗೆಟ್ ನೀಡಿತು.
Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್ ದೇವರು
ಸುಲಭ ಗುರಿಯನ್ನು ಚೇಸ್ ಮಾಡಲು ಕಣಕ್ಕಿಳಿದ ಸೌತ್ ಆಫ್ರಿಕಾ ಆರಂಭದಲ್ಲಿ ತೆಂಬಾ ಬವುಮಾ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆದರೆ ರೀಜಾ ಹೆಂಡ್ರಿಕ್ಸ್ ಹಾಗೂ ರಸಿ ವ್ಯಾಂಡರ್ ಡಸ್ಸೆನ್ ಜೊತೆಯಾಟದಿಂದ ಸೌತ್ ಆಫ್ರಿಕಾ ಚೇತರಿಸಿಕೊಂಡಿತು. ಹೆಂಡ್ರಿಕ್ಸ್ 39 ರನ್ ಸಿಡಿಸಿ ಔಟಾದರು.
ರಸಿ ವ್ಯಾಂಡರ್ ಹಾಗೂ ಆ್ಯಡಿನ್ ಮಕ್ರಾಮ್ ದಿಟ್ಟ ಹೋರಾಟದಿಂದ ಸೌತ್ ಆಫ್ರಿಕಾ ಗೆಲುವಿನ ಹಾದಿಯಲ್ಲಿ ಸಾಗಿತು. ವ್ಯಾಂಡರ್ ಡುಸ್ಸೆನ್ ಅಜೇಯ 43 ರನ್ ಸಿಡಿಸಿದರೆ, ಆ್ಯಡಿನ್ ಮರ್ಕ್ರಾಮ್ ಅಜೇಯ 51 ರನ್ ಸಿಡಿಸಿದರು. ಈ ಮೂಲಕ 18.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
T20 World Cup: ಪಾಕ್ ಗೆದ್ದಿದ್ದಕ್ಕೆ ಭಾರತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸೆಹ್ವಾಗ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ ವಿನ್ನಿಂಗ್ ಟ್ರಾಕ್‌ಗೆ ಮರಳಿದೆ. ಇತ್ತ ವೆಸ್ಟ್ ಇಂಡೀಸ್ ಸತತ 2 ಸೋಲು ಕಂಡು ನಿರಾಸೆ ಅನುಭವಿಸಿದೆ. ಇದೀಗ ವೆಸ್ಟ್ ಇಂಡೀಸ್ ಸೆಮಿಫೈನಲ್ ಹಾದಿ ಕೂಡ ಸಂಕಷ್ಟವಾಗುತ್ತಿದೆ.
