Asianet Suvarna News Asianet Suvarna News

T20 World Cup 2021: ನಮಿಬಿಯಾ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!

  • ನಮಿಬಿಯಾ ಹಾಗೂ ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯ
  • ನಮಿಬಿಯಾ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ
  • ಅಬು ಧಾಬಿಯಲ್ಲಿ ನಡೆಯುತ್ತಿರುವ ಪಂದ್ಯ
T20 World Cup 2021 Pakistan won toss chose bat first against namibia in Abu Dhabi ckm
Author
Bengaluru, First Published Nov 2, 2021, 7:08 PM IST

ಅಬು ಧಾಬಿ(ನ.02): ಪಾಕಿಸ್ತಾನ ಹಾಗೂ ನಮಿಬಿಯಾ ಹೋರಾಟಕ್ಕೆ ಅಬು ಧಾಬಿ ಕ್ರೀಡಾಂಗಣ ಸಜ್ಜಾಗಿದೆ. ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಮಿಬಿಯಾ ಮಣಿಸಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳಲು ಪಾಕಿಸ್ತಾನ ಸಜ್ಜಾಗಿದೆ.

T20 World Cup: ಬಾಂಗ್ಲಾದೇಶ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ

ನಮಿಬಿಯಾ ಪ್ಲೇಯಿಂಗ್ 11
ಸ್ಟೀಫನ್ ಬಾರ್ಡ್ ಮೈಕೆಲ್ ವಾನ್ ಲಿಂಜೆನ್, ಕ್ರೈಗ್ ವಿಲಿಯಮ್ಸ್, ಗೆಹಾರ್ಡ್ ಎರಾಮ್ಸ್, ಜಾನ್ ನಿಕೋಲ್ ಲೋಫ್ಟಿ ಇಯಟನ್, ಜೇನೆ ಗ್ರೀನ್, ಡೇವಿಡ್ ವೀಸ್, ಜೆಜೆ ಸ್ಮಿತ್, ಜಾನ್ ಫ್ರೈಲಿಂಕ್, ರುಬೆನ್ ಟ್ರುಂಪ್ಲೆಮನ್, ಬೆನ್ ಶಿಕೊಂಗೊ

ಪಾಕಿಸ್ತಾನ ಪ್ಲೇಯಿಂಗ್ 11
ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್, ಫಕರ್ ಜಮಾನ್, ಮೊಹಮ್ಮದ್ ಹಫೀಜ್, ಶೊಯೆಬ್ ಮಲಿಕ್, ಆಸಿಫ್ ಆಲಿ, ಶದಬ್ ಖಾನ್, ಇಮಾದ್ ವಾಸಿಮ್, ಹಸನ್ ಆಲಿ, ಹ್ಯಾರಿಸ್ ರೌಫ್, ಶಾಹೀನ್ ಆಫ್ರಿದಿ

Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

T20 World Cup 2021 ಟೂರ್ನಿಯಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲೂ ದಿನದ ಎರಡನೇ ಪಂದ್ಯಕ್ಕೆ ಇಬ್ಬನಿ ಸಮಸ್ಯೆ ಸೆಕೆಂಡ್ ಬೌಲಿಂಗ್ ಮಾಡುವ ತಂಡಕ್ಕೆ ಹೆಚ್ಚಾಗಿ ಕಾಡಲಿದೆ. ಹೀಗಾಗಿ ಚೇಸಿಂಗ್ ಮಾಡುವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ. ಆದರೆ ನಮಿಬಿಯಾಾ ಸುಲಭ ತುತ್ತಾಗಿರವ ಕಾರಣ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಪಾಕಿಸ್ತಾನ ಬ್ಯಾಟಿಂಗ್ ಸ್ಟ್ರೆಂಥ್ ಪರೀಕ್ಷಿಸಲು ಬಾಬರ್ ಸಜ್ಜಾಗಿದ್ದಾರೆ.

T20 World Cup 2021 ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಪಾಕಿಸ್ತಾನ ಇದೀಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.  ಮೊದಲ ಪಂದ್ಯದಲ್ಲಿ ಪಾಕಿಸ್ತಾನ, ಟೀಂ ಇಂಡಿಯಾ(Team India) ವಿರುದ್ಧ 10 ವಿಕೆಟ್ ಗೆಲುವು ದಾಖಲಿಸಿತ್ತು. ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್(New zealand) ತಂಡವನ್ನು ಮಣಿಸಿತ್ತು. ಮೂರನೇ ಪಂದ್ಯದಲ್ಲಿ ಆಫ್ಘಾನಿಸ್ತಾನ(Afghanistan) ವಿರುದ್ಧ ಅಂತಿಮ ಹಂತದಲ್ಲಿ ಆಸಿಫ್ ಆಲಿ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟಿದ್ದರು. ಈ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.

Ind vs NZ ಕ್ರಿಕೆಟ್ ಸರಣಿ: ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ BCCI..!

ಮೂರು ಪಂದ್ಯದಲ್ಲಿ ಪಾಕಿಸ್ತಾನ 150ರ ಆಸುಪಾಸಿನ ಟಾರ್ಗೆಟ್ ಚೇಸ್ ಮಾಡಿ ಗೆದ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ದಾಳಿಗೆ ನಮಿಬಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವ ಸಾಧ್ಯತೆಗಳು ಕಡಿಮೆ. 

T20 World Cup 2021 ಟೂರ್ನಿಯಲ್ಲಿ ಕೇವಲ ಎರಡು ತಂಡ ಮಾತ್ರ ಸೋಲಿಲ್ಲದ ಸರದಾರ ಎನಿಸಿಕೊಂಡಿದೆ. ಮೊದಲ ಗುಂಪಿನಲ್ಲಿ ಇಂಗ್ಲೆಂಡ್(England) ತಂಡ ಸತತ 3 ಗೆಲುವು ಕಂಡಿದೆ. ಇತ್ತ ಎರಡನೇ ಗುಂಪಿನಲ್ಲಿ ಪಾಕಿಸ್ತಾನ ಸತತ 3 ಗೆಲುವು ಕಂಡಿದೆ.  UAEನಲ್ಲಿ ಪಾಕಿಸ್ತಾನ ಅಜೇಯ ಗೆಲುವಿನ ಓಟದಲ್ಲಿದೆ. ಸತತ 14 ಗೆಲುವು ದಾಖಲಿಸಿದೆ. 

ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂದಿನ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಸ್ಕಾಟ್‌ಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ನಮಿಬಿಯಾ ತಂಡ ಪಾಕ್ ವಿರುದ್ಧ ಉತ್ತಮ ಹೋರಾಟ ನೀಡುವ ವಿಶ್ವಾಸದಲ್ಲಿದೆ. ಅಂಕಪಟ್ಟಿಯಲ್ಲಿ ನಮಿಬಿಯಾ 4ನೇ ಸ್ಥಾನದಲ್ಲಿದೆ.

ಪಾಕಿಸ್ತಾನ ಹಾಗೂ ನಮಿಬಿಯಾ ಇದುವರೆಗೆ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿಲ್ಲ. 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ನಮಿಬಿಯಾ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ 171 ರನ್ ಗೆಲುವು ದಾಖಲಿಸಿದೆ.

ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನಡೆಯತ್ತಿರುವ ಪಾಕಿಸ್ತಾನ ಇಂದು ಗೆಲುವಿನ ಫೇವರಿಟ್ ತಂಡ. ನಮಿಬಿಯಾ ಈಗಷ್ಟೇ ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ನಮಿಬಿಯಾ ವಿರುದ್ಧ ಪಾಕಿಸ್ತಾನ ಸುಲಭ ಗೆಲುವು ದಾಖಲಿಸುವ ಸಾಧ್ಯತೆ ಹೆಚ್ಚು.

Follow Us:
Download App:
  • android
  • ios