Asianet Suvarna News Asianet Suvarna News

T20 World Cup 2021ರಲ್ಲಿ ನಮಿಬಿಯಾ ಶುಭಾರಂಭ; ಸ್ಕಾಟ್‌ಲೆಂಡ್ ವಿರುದ್ಧ 4 ವಿಕೆಟ್ ಗೆಲುವು!

  • ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮಿಬಿಯಾ ಶುಭಾರಂಭ
  • ಸ್ಕಾಟ್‌ಲೆಂಡ್ ವಿರುದ್ಧ 5 ವಿಕೆಟ್ ಗೆಲುವು
  • ಸ್ಕಾಟ್‌ಲೆಂಡ್ ತಂಡಕ್ಕೆ ಸತತ 2ನನೇ ಸೋಲು
T20 World Cup 2021 Namibia beat Scotland by 5 wickets in Abu Dhabi ckm
Author
Bengaluru, First Published Oct 27, 2021, 10:48 PM IST

ಅಬು ಧಾಬಿ(ಅ.27):  T20 World Cup 2021 ಟೂರ್ನಿಯಲ್ಲಿ ನಮಿಯಾ(Namibia) ಶುಭಾರಂಭ ಮಾಡಿದೆ. ಸ್ಕಾಟ್‌ಲೆಂಡ್(Scotland) ವಿರುದ್ಧದ ಪಂದ್ಯದಲ್ಲಿ ನಮಿಬಿಯಾ 4 ವಿಕೆಟ್ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಮಿಬಿಯಾ ನ್ಯೂಜಿಲೆಂಡ್ ಹಾಗೂ ಭಾರತ ತಂಡವನ್ನು ಹಿಂದಿಕ್ಕಿ 3ನೇ ಸ್ಥಾನ ಅಲಂಕರಿಸಿದೆ.

T20 World Cup: Ban vs Eng ಬಾಂಗ್ಲಾ ಎದುರು ಇಂಗ್ಲೆಂಡ್‌ಗೆ ಭರ್ಜರಿ ಜಯ

ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್‌ಲೆಂಡ್ ತಂಡಕ್ಕೆ ನಮಿಬಿಯಾ ಬೌಲರ್‌ಗಳು ಶಾಕ್ ನೀಡಿದರು. ಸ್ಕಾಟ್‌ಲೆಂಡ್ ರನ್ ಖಾತೆ ತೆರೆಯುವ ಮುನ್ನವೇ ಮೊದ ವಿಕೆಟ್ ಕಳೆದುಕೊಂಡಿತು. ಜಾರ್ಜ್ ಮುನ್ಸೆ ಡಕೌಟ್ ಆದರು. ಮ್ಯಾಥ್ಯೂ ಕ್ರಾಸ್ 19 ರನ್ ಕಾಣಿಕೆ ನೀಡಿದರು. ಇತ್ತ ಮೆಕ್ಲಾಯ್ಡ್ ಹಾಗೂ ನಾಯಕ ರಿಚಿ ಬೆರಿಂಗ್ಟನ್ ಡಕೌಟ್ ಆದರು.

ಕುಸಿತ ತಂಡಕ್ಕೆ ಮಚೆಲಿ ಲಿಸ್ಕ್ ಆಸರೆಯಾದರು. ಲಿಸ್ಕ್ ಹಾಗೂ ಗ್ರಿವಿಯಾಸ್ ಜೊತೆಯಾಟದಿಂದ ದಿಟ್ಟ ಹೋರಾಟ ನೀಡಿತು. ಲಿಸ್ಕ್ 44 ರನ್ ಸಿಡಿಸಿ ಔಟಾದರು.  ಕ್ರೈಗ್ ವ್ಯಾಲೆಸ್, ಮಾರ್ಕ್ ವ್ಯಾಟ್ ಅಬ್ಬರಿಸಿಲ್ಲ. ಇತ್ತ ಕ್ರಿಸ್ 25 ರನ್ ಕಾಣಿಕೆ ನೀಡಿದರು. ಡೇವಿ 5 ಎಸೆತದಲ್ಲಿ ಅಜೇಯ 5 ರನ್ ಸಿಡಿಸಿದರು. ಈ ಮೂಲಕ 8 ವಿಕೆಟ್ ನಷ್ಟಕ್ಕೆ 109 ರನ್ ಸಿಡಿಸಿತು. 

ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ: ವಿವಾದ ಸೃಷ್ಟಿಸಿ, ಕ್ಷಮಿಸಿ ಎಂದ ವಕಾರ್!

110 ರನ್ ಟಾರ್ಗೆಟ್ ಪಡೆದ ನಮಿಬಿಯಾ ಡೀಸೆಂಟ್ ಆರಂಭ ಪಡೆಯಿತು. ಕ್ರೈಗ್ ವಿಲಿಯಮ್ಸ್ ಹಾಗೂ ಮಿಚೆಲ್ ವ್ಯಾನ್ ಲಿಂಜೆನ್ 28 ರನ್ ಜೊತೆಯಾಟ ನೀಡಿದರು. ಮಿಚೆಲ್ 28 ರನ್ ಸಿಡಿಸಿ ಔಟಾದರು. ಝೇನ್ ಗ್ರೀನ್ 9 ರನ್ ಸಿಡಿಸಿ ಔಟಾದರು. ದಿಟ್ಟ ಹೋರಾಟ ನೀಡಿದ ಕ್ರೈಗ್ ವಿಲಿಯಮ್ಸ್ 23 ರನ್  ಸಿಡಿಸಿ ಔಟಾದರು. 

67 ರನ್‌ಗೆ 4 ವಿಕೆಟ್ ಕಳೆದುಕೊಂಡ ನಮಿಬಿಯಾ ಸಂಕಷ್ಟಕ್ಕೆ ಸಿಲುಕಿತು.  ಡಿವೇಡ್ ವೈಸ್ ಹಾಗೂ ಜೆಜೆ ಸ್ಮಿತ್ ಹೋರಾಟದಿಂದ ನಮಿಬಿಯಾ ಮತ್ತೆ ಚೇತರಿಸಿಕೊಂಡಿತು. ನಮಿಬಿಯಾ ಗೆಲುವಿಗೆ ಅಂತಿಮ 18 ಎಸೆತದಲ್ಲಿ 14 ರನ್ ಅವಶ್ಯಕತೆ ಇತ್ತು. ಸಿಕ್ಸರ್ ಸಿಡಿಸಿ  ಅಬ್ಬರಿಸಿದ ವೈಸ್ ಮರು ಎಸೆತದಲ್ಲಿ ಔಟಾದರು. ವೈಸ್ 16 ರನ್ ಸಿಡಿಸಿದರು. ಅಷ್ಟರಲ್ಲಿ ನಮಿಬಿಯಾ ಗೆಲುವಿಗೆ 14 ಎಸೆತದಲ್ಲಿ 8 ರನ್ ಅವಶ್ಯತೆ ಇತ್ತು. ಆದರೆ ವಿಕೆಟ್ ಪತನ ನಮಿಬಿಯಾ ತಂಡದಲ್ಲಿ ಮತ್ತೆ ಆತಂಕದ ಛಾಯೆ ಮೂಡಿಸಿತು.

ಸ್ಮಿತ್ ಅಜೇಯ 32 ರನ್  ಸಿಡಿಸಿದರು. ಈ ಮೂಲಕ ನಮಿಬಿಯಾ 19.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸ್ಕಾಟ್‌ಲೆಂಡ್ ವಿರುದ್ಧ ನಮಿಬಿಯಾ  4 ವಿಕೆಟ್ ಗೆಲುವು ಸಾಧಿಸಿತು. 

ಅಂಕಪಟ್ಟಿ:
2ನೇ ಗುಂಪಿನಲ್ಲಿರುವ ನಮಿಬಿಯಾ ತಂಡ ಸ್ಕಾಟ್‌ಲೆಂಡ್ ವಿರುದ್ಧ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ಆಫ್ಘಾನಿಸ್ತಾನದ ಬಳಿಕ ನಮಿಬಿಯಾ 3ನೇ ಸ್ಥಾನ ಅಲಂಕರಿಸಿದೆ. ತಲಾ ಒಂದೊಂದು ಸೋಲು ಅನುಭವಿಸಿರುವ ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾ 4 ಮತ್ತು 5ನೇ ಸ್ಥಾನದಲ್ಲಿದೆ. ಇನ್ನು ನಮಿಬಿಯಾ ಹಾಗೂ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿದ ಸ್ಕಾಟ್‌ಲೆಂಡ್ 6ನೇ ಸ್ಥಾನದಲ್ಲಿದೆ.

ವೇಳಾಪಟ್ಟಿ:
ಸ್ಕಾಟ್‌ಲೆಂಡ್ ವಿರುದ್ದ ಗೆಲುವು ಸಾಧಿಸಿರುವ ನಮಿಬಿಯಾ ಅಕ್ಟೋಬರ್ 31 ರಂದು ಆಫ್ಘಾನಿಸ್ತಾನ ವಿರುದ್ಧ ಸೆಣಸಾಟ ನಡೆಸಲಿದೆ. ನವೆಂಬರ್ 2 ರಂದು ನಮಿಬಿಯಾ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ.  ನಾಳೆ(ಅ.28) ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿದೆ.

Follow Us:
Download App:
  • android
  • ios