Asianet Suvarna News Asianet Suvarna News

T20 World Cup 2021: ಅಭ್ಯಾಸ ಪಂದ್ಯದಲ್ಲಿ ಶುಭಾರಂಭ, ಇಂಗ್ಲೆಂಡ್ ಮಣಿಸಿದ ಭಾರತ!

  • ಟಿ20 ವಿಶ್ವಕಪ್ ಟೂರ್ನಿ ಅಭ್ಯಾಸ ಪಂದ್ಯ
  • ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್, ಕೆಎಲ್ ರಾಹುಲ್ ಅಬ್ಬರ
  • ಇಂಗ್ಲೆಂಡ್ ವಿರುದ್ಧ ಕೊಹ್ಲಿ ಸೈನ್ಯಕ್ಕೆ 7 ವಿಕೆಟ್ ಗೆಲುವು
T20 World Cup 2021 Ishan Kishan help Team India to beat england by 7 wickets in practice match ckm
Author
Bengaluru, First Published Oct 18, 2021, 11:10 PM IST
  • Facebook
  • Twitter
  • Whatsapp

ದುಬೈ(ಅ.18):  ಇಶಾನ್ ಕಿಶನ್ ಅಬ್ಬರ, ಕೆಎಲ್ ರಾಹುಲ್ ಅತೀ ವೇಗದ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಶುಭಾರಂಭ ಮಾಡಿದೆ. ಇಂಗ್ಲೆಂಡ್ ನೀಡಿದ 189 ರನ್ ಬೃಹತ್ ಗೆಲುವನ್ನು ಟೀಂ ಇಂಡಿಯಾ ಯಾವುದೇ ಆತಂಕವಿಲ್ಲದೆ ಚೇಸ್ ಮಾಡಿ 7 ವಿಕೆಟ್ ಗೆಲುವು ದಾಖಲಿಸಿದೆ. 

T20 World Cup 2021: ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಸೈನ್ಯಕ್ಕೆ 189 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್!

ಮೊಯಿನ್ ಆಲಿ ಸ್ಫೋಟಕ ಬ್ಯಾಟಿಂಗ್, ಜಾನಿ ಬೈರ್‌ಸ್ಟೋ ಅಬ್ಬರಿಂದ ಇಂಗ್ಲೆಂಡ್ ತಂಡ 188 ರನ್  ಸಿಡಿಸಿತು. 189 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಅಬ್ಬರಕ್ಕೆ ಇಂಗ್ಲೆಂಡ್ ಬೆಚ್ಚಿ ಬಿದ್ದಿತ್ತು. 

200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ 23 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಆದರೆ ಅರ್ಧಶತಕ ಬೆನ್ನಲ್ಲೇ ರಾಹುಲ್ ವಿಕೆಟ್ ಪತನಗೊಂಡಿತು. ರಾಹುಲ್ 24 ಎಸೆತದಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 51 ರನ್ ಸಿಡಿಸಿ ಔಟಾದರು. ರಾಹುಲ್‌ಗೆ ಉತ್ತಮ ಸಾಥ್ ನೀಡಿದ ಇಶಾನ್ ಕಿಶನ್ ಹೋರಾಟ ಮುಂದುವರಿಸಿದರು.

ಕೊಹ್ಲಿ ಕ್ವಾರಂಟೈನ್ ಅಂತ್ಯ, ವಮಿಕಾ ಪೋಟೋ ಶೇರ್ ಮಾಡಿ ಸಂತಸ ಹಂಚಿಕೊಂಡ ಅನುಷ್ಕಾ!

ಇಶಾನ್ ಕಿಶನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟ ಇಂಗ್ಲೆಂಡ್ ತಂಡದ ಚಿಂತೆ ಹೆಚ್ಚಿಸಿತು. ಕಿಶನ್ ಆಕರ್ಷಕ ಹಾಫ್ ಸೆಂಚರಿ ಪೂರೈಸಿದರು. ಆದರೆ ಕೊಹ್ಲಿ 11 ರನ್ ಸಿಡಿಸಿ ಔಟಾದರು. ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿಗೆ ಕೊಹ್ಲಿ ಫಾರ್ಮ್ ಅಷ್ಟೇ ಮುಖ್ಯ. ಹೀಗಾಗಿ 11 ರನ್ ಸಿಡಿಸಿ ಕೊಹ್ಲಿ ನಿರ್ಗಮನ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ರಿಷಬ್ ಪಂತ್ ಜೊತೆ ಸೇರಿದ ಇಶಾನ್ ಕಿಶನ್ ಅಬ್ಬರಿಸಿದರು. ಟೀಂ ಇಂಡಿಯಾ ಗೆಲುವಿಗೆ ಅಂತಿಮ 30 ಎಸೆತದಲ್ಲಿ 41 ರನ್ ಅವಶ್ಯಕತೆ ಇತ್ತು. ಕಿಶನ್ ಹಾಗೂ ಪಂತ್ ಜೊತೆಯಾಟ ಇಂಗ್ಲೆಂಡ್ ತಂಡದ ಆತಂಕ ಹೆಚ್ಚಿಸಿತು.  ಕಿಶನ್ 70 ರನ್ ಸಿಡಿಸಿ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿದರು.

ಸೂರ್ಯಕುಮಾರ್ ಯಾದವ್ 8 ರನ್ ಸಿಡಿಸಿ ಔಟಾದರು. 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಗೆಲುವಿಗೆ ಅಂತಿಮ 
15 ಎಸೆತದಲ್ಲಿ 21 ರನ್ ಅವಶ್ಯಕತೆ ಇತ್ತು. ಟೀಂ ಇಂಡಿಯಾ ಬ್ಯಾಟಿಂಗ್ ಜೊತೆ ಇಂಗ್ಲೆಂಡ್ ಬೌಲರ್‌ಗಳ ವೈಡ್ ಹಾಗೂ ನೋ ಬಾಲ್ ಕೂಡ ತಂಡಕ್ಕೆ ನೆರವಾಯಿತು. 

ರಿಷಬ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಇನ್ನು 6 ಎಸೆತ ಬಾಕಿ ಇರುವಂತೆ 7 ವಿಕೆಟ್ ಗೆಲುವು ಕಂಡಿತು. ಪಂತ್ ಅಜೇಯ 29 ರನ್ ಸಿಡಿಸಿದರೆ, ಪಾಂಡ್ಯ ಅಜೇಯ 12 ರನ್ ಸಿಡಿಸಿದರು. 

Follow Us:
Download App:
  • android
  • ios