T20 World Cup 2021: ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಸೈನ್ಯಕ್ಕೆ 189 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್!
- ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯ
- ಟೀಂ ಇಂಡಿಯಾಗೆ ಬೃಹತ್ ಟಾರ್ಗೆಟ್ ನೀಡಿದ ಇಂಗ್ಲೆಂಡ್
- ಮೊಹಮ್ಮದ್ ಶಮಿ ಮಿಂಚಿನ ದಾಳಿ, ಮೊಯಿನ್ ಆಲಿ ಸ್ಫೋಟಕ ಬ್ಯಾಟಿಂಗ್
ದುಬೈ(ಅ.18): T20 World Cup 2021 ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಹೋರಾಡುತ್ತಿದೆ. ಮೊಹಮ್ಮದ್ ಶಮಿ ಮಿಂಚಿನ ದಾಳಿ ನಡೆಸಿದರೂ ಇಂಗ್ಲೆಂಡ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಜಾನಿ ಬೈರ್‌ಸ್ಟೋ ಹಾಗೂ ಮೊಯಿನ್ ಆಲಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿದೆ.
ಕೊಹ್ಲಿ ಕ್ವಾರಂಟೈನ್ ಅಂತ್ಯ, ವಮಿಕಾ ಪೋಟೋ ಶೇರ್ ಮಾಡಿ ಸಂತಸ ಹಂಚಿಕೊಂಡ ಅನುಷ್ಕಾ!
ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಆರಂಭಕ್ಕೆ ಮೊಹಮ್ಮದ್ ಶಮಿ ಶಾಕ್ ನೀಡಿದರು. ನಾಯಕ ಜೋಸ್ ಬಟ್ಲರ್ 18 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಜೇಸನ್ ರಾಯ್ 17 ರನ್ ಸಿಡಿಸಿ ಔಟಾದರು.
ಡೇವಿಡ್ ಮಲನ್ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಆದರೆ ಡೇವಿಡ್ ಮಲನ್ 18 ರನ್ ಸಿಡಿಸಿ ಔಟಾದರು. ಬೈರ್‌ಸ್ಟೋ ಹೋರಾಟ ಮುಂದುವರಿಸಿದರು. ಅಬ್ಬರಿಸಿದ ಬೈರ್‌ಸ್ಟೋ 49 ರನ್ ಸಿಡಿಸಿ ಔಟಾದರು. ಲಿಯಾಮ್ ಲಿವಿಂಗ್‌ಸ್ಟೋನ್ 20 ಎಸೆತದಲ್ಲಿ 30 ರನ್ ಸಿಡಿಸಿ ಔಟಾದರು.
ವಿರಾಟ್ ಕೊಹ್ಲಿಗಾಗಿ T20 World Cup ಗೆಲ್ಲಿ: ಸುರೇಶ್ ರೈನಾ ಸಂದೇಶ
ಅಂತಿಮ ಹಂತದಲ್ಲಿ ಮೊಯಿನ್ ಆಲಿ ಅಬ್ಬರಿಸಿದರು. 20 ಎಸೆತದಲ್ಲಿ ಆಲಿ 43 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 188 ರನ್ ಸಿಡಿಸಿತು. ಇದೀಗ ಭಾರತದ ಗೆಲುವಿಗೆ 189 ರನ್ ಸಿಡಿಸಬೇಕಿದಿ.
ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ ಹಾಗೂ ರಾಹುಲ್ ಚಹಾರ್ ತಲಾ 1 ವಿಕೆಟ್ ಕಬಳಿಸಿ ಮಿಂಚಿದರು
ಟೀಂ ಇಂಡಿಯಾ ಅಭ್ಯಾಸ ಪಂದ್ಯ:
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್ ವಿರುದ್ದದ ಇಂದಿನ ಪಂದ್ಯ ಹಾಗೂ ಅಕ್ಟೋಬರ್ 20 ರಂದು ಆಸ್ಟ್ರೇಲಿಯಾ ವಿರುದ್ಧ 2ನೇ ಅಭ್ಯಾಸ ಪಂದ್ಯ ಆಡಲಿದೆ.
ಟಿ20 ವಿಶ್ವಕಪ್ ಲೀಗ್ ಹೋರಾಟ:
ಟೀಂ ಇಂಡಿಯಾ ತನ್ನ ಲೀಗ್ ಹೋರಾಟದಲ್ಲಿ ಮೊದಲ ಪಂದ್ಯವನ್ನು ಬದ್ಧವೈರಿ ಪಾಕಿಸ್ತಾನ ವಿರುದ್ದ ಆಡಲಿದೆ. ಅಕ್ಟೋಬರ್ 24 ರಂದು ದುಬೈ ಕ್ರೀಡಾಂಗಣದಲ್ಲಿ ಅತ್ಯಂತ ರೋಚಕ ಹೋರಾಟ ನಡೆಯಲಿದೆ. ಈ ಪಂದ್ಯಕ್ಕೆ ಈಗಲೇ ಕೌಂಟ್‌ಡೌನ್ ಆರಂಭಗೊಂಡಿದೆ. ಅಭಿಮಾನಿಗಳು ಗೆಲುವಿಗಾಗಿ ಪ್ರಾರ್ಥನೆ ಆರಂಭಿಸಿದ್ದಾರೆ.