Asianet Suvarna News Asianet Suvarna News

ಭಾರತದ ಬ್ಯಾಟಿಂಗ್ ವೈಫಲ್ಯ... ನ್ಯೂಜಿಲೆಂಡ್‌ಗೆ ಸಾಧಾರಣ ಗುರಿ!

* ಅಬುಧಾಬಿಯಲ್ಲಿಂದು ಭಾರತ-ನ್ಯೂಜಿಲೆಂಡ್ ಮುಖಾಮುಖಿ

* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಉಭಯ ತಂಡಗಳು

*  ನ್ಯೂಜಿಲೆಂಡ್ ನಿಂದ ಬಿಗಿ ಬೌಲಿಂಗ್ ದಾಳಿ
* ನ್ಯೂಜಿಲೆಂಡ್ ಗೆ ಗೆಲ್ಲಲು 111 ರನ್ ಟಾರ್ಗೆಟ್

t20-world-cup-2021-ind-vs-nz-super-12-new-zealand-restrict-india-at-110 mah
Author
Bengaluru, First Published Oct 31, 2021, 9:22 PM IST
  • Facebook
  • Twitter
  • Whatsapp

ದುಬೈ(ಅ.31): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾರತ ((Team India)  ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬಿಗಿ ಬೌಲಿಂಗ್ ದಾಳಿ ನಡೆಸಿದ್ದು ಭಾರತ 110  ರನ್  ಗಳಿಸಲು ಮಾತ್ರ ಶಕ್ತವಾಗಿದೆ.

ಟ್ರೆಂಟ್ ಬೋಲ್ಟ್ ಮೂರು ವಿಕೆಟ್ ಪಡೆದುಕೊಂಡು ಭಾರತದ ಬ್ಯಾಟಿಂಗ್ ಶಕ್ತಿಗೆ ಆಘಾತ ನೀಡಿದರು. ಯಾವ ಬೌಲರ್ ಗಳು ಹೆಚ್ಚು ರನ್ ಬಿಟ್ಟುಕೊಡಲಿಲ್ಲ.  ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಾ(23)  ಮತ್ತು ರವೀಂದ್ರ ಜಡೇಜಾ( 26)  ರನ್ ಗಳಿಸಿ ಮೊತ್ತ ಹೆಚ್ಚಿಸುವ ಯತ್ನ ಮಾಡಿದರು. ಆದರೆ ನಿರೀಕ್ಷಿತ ಸ್ಕೋರ್ ದಾಖಲಾಗಲಿಲ್ಲ.

ರಾಹುಲ್, ರೋಹಿತ್,  ಕೀಶನ್ ಮತ್ತು ನಾಯಕ ವಿರಾಟ್ ಕೊಹ್ಲಿ ರನ್ ಗಳಿಸಲು ಪರದಾಡಿದರು. ಮಿಡಲ್ ಓವರ್ ಗಳಲ್ಲಿ ರನ್ ಬರಲೇ ಇಲ್ಲ. ಈ ಮೂಲಕ ಸಾಧಾರಣ ಗುರಿಯನ್ನು ನ್ಯೂಜಿಲೆಂಡ್ ಮುಂದೆ ಇಡಲಾಗಿದೆ. ಈಗ ಪಂದ್ಯ  ಸಂಪೂರ್ಣವಾಗಿ ಭಾರತದ ಬೌಲರ್ ಗಳ ಕೈಯಲ್ಲಿದೆ.

 ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡಲಾಗಿದ್ದು, ಇಶಾನ್ ಕಿಶನ್ (Ishan Kishan) ಹಾಗೂ ಶಾರ್ದೂಲ್ ಠಾಕೂರ್ ತಂಡ ಕೂಡಿಕೊಂಡಿದ್ದರು. ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು,ಟಿಮ್ ಸೈಫರ್ಟ್‌ ಬದಲಿಗೆ ಆಡಂ ಮಿಲ್ನೆ ತಂಡ ಕೂಡಿಕೊಂಡಿದ್ದಾರೆ.

T20 World Cup: ಟ್ರೆಂಟ್ ಬೌಲ್ಟ್‌ಗೆ ಎಚ್ಚರಿಕೆ ಕೊಟ್ಟ ವಿರಾಟ್ ಕೊಹ್ಲಿ..!

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India) ತಾನಾಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ 10 ವಿಕೆಟ್‌ಗಳ ಅಂತರದ ರೋಚಕ ಸೋಲು ಕಂಡಿತ್ತು. ಇನ್ನು ನ್ಯೂಜಿಲೆಂಡ್ ವಿರುದ್ದ ಪಾಕಿಸ್ತಾನ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು.

 

 


 

Follow Us:
Download App:
  • android
  • ios