ಸಂಭ್ರಮಾಚರಣೆಗೆ ಬನ್ನಿ: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಮಾಲ್ಡೀವ್ಸ್ ಆಹ್ವಾನ!
ಟಿ20 ವಿಶ್ವಕಪ್ ಚಾಂಪಿಯನ್ ಆದ ಭಾರತ ತಂಡವು ಗೆಲುವಿನ ವಿಜಯೋತ್ಸವ ಆಚರಿಸಲು ಮಾಲ್ಡೀವ್ಸ್ ಆಫರ್ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮಾಲೆ(ಮಾಲ್ಡೀವ್ಸ್): ಟಿ20 ವಿಶ್ವಕಪ್ ಗೆಲುವಿಗೆ ಸಂಭ್ರಮಾಚರಣೆ ನಡೆಸಲು ಮಾಲ್ಡೀವ್ಸ್‌ಗೆ ಬನ್ನಿ ಎಂದು ಭಾರತ ಕ್ರಿಕೆಟ್ ತಂಡಕ್ಕೆ ಮಾಲ್ಡೀವ್ಸ್ ಪ್ರವಾಸೋದ್ಯಮ ಇಲಾಖೆ, ಮಾರುಕಟ್ಟೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷ ಆಹ್ವಾನ ನೀಡಿದೆ. ಈ ಬಗ್ಗೆ ಎರಡೂ ಇಲಾಖೆಗಳು ಜಂಟಿ ಪ್ರಕಟಣೆ ಹೊರಡಿಸಿದ್ದು, ಟಿ20 ವಿಶ್ವಕಪ್ ಗೆಲುವಿಗೆ ಮಾಲ್ಡೀವ್ಸ್ ನಲ್ಲಿ ಸಂಭ್ರಮಾಚರಣೆ ನಡೆಸಿ ಎಂದು ಭಾರತದ ಆಟಗಾರರಿಗೆ ಆಹ್ವಾನ ನೀಡಿದೆ.
‘ಭಾರತ ತಂಡಕ್ಕೆ ಆತಿಥ್ಯ ವಹಿಸುವುದು ನಮ್ಮ ಗೌರವ ಎಂದು ಭಾವಿಸಿದ್ದೇವೆ. ಇಲ್ಲಿ ನಿಮಗೆ ಸ್ಮರಣೀಯ ಕ್ಷಣಗಳ ಅನುಭವವಾಗಲಿದೆ. ಭಾರತ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಮತ್ತು ಗೆಲುವಿನ ಸಂತೋಷದಲ್ಲಿ ಪಾಲ್ಗೊಳ್ಳುವುದು ಮಾಲ್ಡೀವ್ಸ್ ಪಾಲಿಗೆ ಗೌರವ. ಸಂಭ್ರಮಾಚರಣೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾವು ಮಾಡುತ್ತೇವೆ’ ಎಂದು ತಿಳಿಸಿದೆ.
ಮಾರಿಗುಡಿಯಲ್ಲಿ ಗ್ರೇಟ್ ಕ್ಯಾಚ್ ಹಿಡಿದು ವಿಶ್ವಕಪ್ ಗೆಲ್ಲಿಸಿದ, ತುಳುನಾಡಿನ ಅಳಿಯ ಸೂರ್ಯಕುಮಾರ್ ಯಾದವ್
ಇತ್ತೀಚೆಗಷ್ಟೇ ಭಾರತ ತಂಡ ಮುಂಬೈನಲ್ಲಿ ಬೃಹತ್ ವಿಜಯೋತ್ಸವ ನಡೆಸಿತ್ತು. ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಸದ್ಯ ವಿಶ್ವಕಪ್ ತಂಡದಲ್ಲಿದ್ದ ಬಹುತೇಕ ಆಟಗಾರರು ವಿಶ್ರಾಂತಿಯಲ್ಲಿದ್ದಾರ
ಬಿಸಿಸಿಐನ ₹125 ಕೋಟಿ ಹಣದಲ್ಲಿ ಆಟಗಾರರಿಗೆ ತಲಾ ₹5 ಕೋಟಿ: ವರದಿ
ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಬಹುಮಾನವಾಗಿ ನೀಡಿದ್ದ 125 ಕೋಟಿ ರುಪಾಯಿ ಹಣದಲ್ಲಿ ತಂಡದ ಎಲ್ಲಾ ಆಟಗಾರರಿಗೆ ₹5 ಕೋಟಿ ಸಿಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟೂರ್ನಿಯಲ್ಲಿ ಒಂದೂ ಪಂದ್ಯ ಆಡದಿರುವ ಸಂಜು ಸ್ಯಾಮ್ಸನ್, ಯಜುವೇಂದ್ರ ಚಹಲ್, ಯಶಸ್ವಿ ಜೈಸ್ವಾಲ್ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಕೂಡಾ ತಲಾ 5 ಕೋಟಿ ರು. ಸಿಗಲಿದೆ ಎನ್ನಲಾಗುತ್ತಿದೆ.
ಇದೇ ವೇಳೆ ಮೀಸಲು ಆಟಗಾರರಾಗಿ ತಂಡದ ಜೊತೆ ಪ್ರಯಾಣಿಸಿದ್ದ ರಿಂಕು ಸಿಂಗ್, ಶುಭ್‌ಮನ್ ಗಿಲ್, ಆವೇಶ್ ಖಾನ್, ಖಲೀಲ್ ಆಹ್ಮದ್‌ಗೆ ತಲಾ ₹1 ಕೋಟಿ, ಸಹಾಯಕ ಕೋಚ್ ಗಳಿಗೆ ತಲಾ ₹2.5 ಕೋಟಿ ಸಿಗಲಿದೆ. ಕರ್ನಾಟಕದ ರಘು ಸೇರಿ ಇಬ್ಬರು ಥ್ರೋಡೌನ್ ತಜ್ಞರು, 3 ಫಿಸಿಯೋ ಥೆರಪಿಸ್ಟ್‌ಗಳು ತಲಾ ₹2 ಕೋಟಿ, ಅಜಿತ್ ಅಗರ್ಕರ್ ಸೇರಿದಂತೆ ಆಯ್ಕೆ ಸಮಿತಿ ಅಧಿಕಾರಿಗಳು ತಲಾ ₹1 ಕೋಟಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಜೊತೆ ಪ್ರಯಾಣಿಸಿದ್ದ ಮಾಧ್ಯಮ, ತಾಂತ್ರಿಕ ಅಧಿಕಾರಿಗಳಿಗೂ ಪಾಲು ಸಿಗಲಿದೆ ಎಂದು ಗೊತ್ತಾಗಿದೆ.
ಭಾರತ ತಂಡಕ್ಕೆ ಸಿಕ್ಕ ಹೊಸ ಸೂಪರ್ ಸ್ಟಾರ್ ಅಭಿಷೇಕ್ ಶರ್ಮಾ! ಯುವಿ ಮನೆಯಲ್ಲೇ ಪ್ರಾಕ್ಟೀಸ್ ಮಾಡಿದ ಶರ್ಮಾ
ಲಂಕಾ ವಿರುದ್ಧ ಏಕದಿನ: ರೋಹಿತ್, ವಿರಾಟ್, ಬುಮ್ರಾಗೆ ವಿಶ್ರಾಂತಿ?
ನವದೆಹಲಿ: ಭಾರತದ ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾಗೆ ಬಿಸಿಸಿಐ ಜುಲೈ 27ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸೆಪ್ಟೆಂಬರ್‌ನಿಂದ 2025ರ ಜನವರಿ ವರೆಗೆ ಭಾರತ ತಂಡ ಬಾಂಗ್ಲಾದೇಶ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಒಟ್ಟು 10 ಟೆಸ್ಟ್ ಪಂದ್ಯಗಳನ್ನಾಡಲಿವೆ. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಕೂಡಾ ನಿಗದಿಯಾಗಿದೆ. ಹೀಗಾಗಿ ಕಳೆದ ಡಿಸೆಂಬರ್‌ನಿಂದ ನಿರಂತರವಾಗಿ ಆಡುತ್ತಿರುವ ರೋಹಿತ್, ಕೊಹ್ಲಿಗೆ ಲಂಕಾ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
ಒಂದು ವೇಳೆ ರೋಹಿತ್ ಅಲಭ್ಯರಾದರೆ, ಹಾರ್ದಿಕ್ ಪಾಂಡ್ಯ ಅಥವಾ ಕೆ.ಎಲ್.ರಾಹುಲ್ ಲಂಕಾ ವಿರುದ್ಧ ಏಕದಿನ ಸರಣಿಗೆ ನಾಯಕತ್ವ ವಹಿಸುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.