ಭಾರತ ತಂಡಕ್ಕೆ ಸಿಕ್ಕ ಹೊಸ ಸೂಪರ್ ಸ್ಟಾರ್ ಅಭಿಷೇಕ್ ಶರ್ಮಾ! ಯುವಿ ಮನೆಯಲ್ಲೇ ಪ್ರಾಕ್ಟೀಸ್ ಮಾಡಿದ ಶರ್ಮಾ
ಟೀಂ ಇಂಡಿಯಾ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ತಾವಾಡಿದ ಎರಡನೇ ಟಿ20 ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ತಾವೊಬ್ಬ ಭವಿಷ್ಯದ ಸೂಪರ್‌ಸ್ಟಾರ್ ಆಗಬಲ್ಲೆ ಎನ್ನುವುದನ್ನು ಸಾಬೀತುಪಡಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ನವದೆಹಲಿ: ಐಪಿಎಲ್ ಬಳಿಕ ಭಾರತ ತಂಡದಲ್ಲೂ ಅಬ್ಬರಿಸಲು ಶುರುವಿಟ್ಟಿರುವ ಯುವ ಬ್ಯಾಟರ್ ಅಭಿಷೇಕ್ ಶರ್ಮಾ, ಭವಿಷ್ಯದ ಸೂಪರ್ ಸ್ಟಾರ್ ಆಗ್ತಾರಾ ಎಂಬ ಕುತೂಹಲ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ರೋಹಿತ್ ಶರ್ಮಾ ಅವರಿಂದ ತೆರವಾಗಿರುವ ಟಿ20 ತಂಡದ ಆರಂಭಿಕ ಆಟಗಾರನ ಸ್ಥಾನವನ್ನು ಅಭಿಷೇಕ್ ತುಂಬಲಿದ್ದಾರೆ ಎಂಬ ಅಭಿಪ್ರಾಯವೂ ಕ್ರೀಡಾ ತಜ್ಞರು, ಮಾಜಿ ಆಟಗಾರರಿಂದ ವ್ಯಕ್ತವಾಗುತ್ತಿದೆ.
ಐಪಿಎಲ್‌ನಲ್ಲಿ ತಮ್ಮ ಸ್ಫೋಟಕ ಆಟದಿಂದಲೇ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದ ಅಭಿಷೇಕ್ ಭಾರತ ಪರ ತಾವಾಡಿದ 2ನೇ ಪಂದ್ಯದಲ್ಲೇ ಸೆಂಚುರಿ ಸಿಡಿಸಿದ್ದಾರೆ. 23 ವರ್ಷದ ಪಂಜಾಬ್ ಬ್ಯಾಟರ್ ಅಭಿಷೇಕ್, ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದವರು. ಕೋವಿಡ್ ಸಮಯದಲ್ಲಿ ಯುವರಾಜ್‌ರ ಮನೆಯಲ್ಲೇ ತರಬೇತಿ ಪಡೆದಿದ್ದರು.
ಗಂಡ ದುಡಿಯೋದೆಲ್ಲಾ ನಿಮ್ಮ ಬಟ್ಟೆ-ಬ್ಯಾಗ್‌ಗೆ ಸಾಲಲ್ಲ; ರೋಹಿಟ್ ಶರ್ಮಾ ಪತ್ನಿ ಟ್ರೋಲ್
ಅಭಿಷೇಕ್ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಿದ್ದ ಯುವಿ, ಅವರ ಆಟದ ಹಿಂದಿರುವ ಶಕ್ತಿ. ಇನ್ನು ಅಭಿಷೇಕ್ ಕೂಡಾ ಯುವರಾಜ್ ಅವರಂತೆಯೇ ಆಲ್ರೌಂಡರ್. ಸ್ಪಿನ್ನರ್ ಆಗಿರುವ ಅಭಿಷೇಕ್‌ರನ್ನು ಐಪಿಎಲ್‌ನಲ್ಲಿ ಸನ್ ರೈಸರ್ಸ್ ತಂಡ ಬೌಲಿಂಗ್‌ನಲ್ಲೂ ಬಳಸಿಕೊಂಡಿತ್ತು. ಭಾರತ ತಂಡ ಕೂಡಾ ಅಭಿಷೇಕ್‌ರನ್ನು ಆಲ್ರೌಂಡರ್ ಆಗಿ ಸಮರ್ಥವಾಗಿ ಬಳಸುವ ನಿರೀಕ್ಷೆಯಿದೆ.
ಟಿ20ಯಲ್ಲಿ ಶತಕ ಬಾರಿಸಿದ ಭಾರತದ 4ನೇ ಅತಿ ಕಿರಿಯ
ಅಭಿಷೇಕ್ ಭಾರತ ಪರ ಟಿ20 ಶತಕ ಸಿಡಿಸಿದ 4ನೇ ಅತಿ ಕಿರಿಯ. ಅವರಿಗೆ ಈಗ 23 ವರ್ಷ 307 ದಿನ. ಕಳೆದ ವರ್ಷ ಯಶಸ್ವಿ ಜೈಸ್ವಾಲ್ ತಮಗೆ 21 ವರ್ಷ 279 ದಿನಗಳಾಗಿದ್ದಾಗ ನೇಪಾಳ ವಿರುದ್ಧ ಶತಕ ಬಾರಿಸಿದ್ದರು.
ಬಾಲಿವುಡ್ ನಟಿ ಜತೆ ಮದುವೆ? ಸದ್ಯದಲ್ಲೇ ಗುಡ್ ನ್ಯೂಸ್ ಇದೆ ಎಂದ ಟಿ20 ಕ್ರಿಕೆಟ್ ವಿಶ್ವಕಪ್ ಹೀರೋ
2ನೇ ಪಂದ್ಯದಲ್ಲೇ ಸೆಂಚುರಿ: ಅಭಿಷೇಕ್ ಶರ್ಮಾ ದಾಖಲೆ
ಅಭಿಷೇಕ್ ಶರ್ಮಾ ತಾವಾಡಿದ 2ನೇ ಅಂ.ರಾ. ಟಿ20 ಪಂದ್ಯದಲ್ಲೇ ಶತಕ ಬಾರಿಸಿದರು. ಈ ಮೂಲಕ ಕಡಿಮೆ ಪಂದ್ಯಗಳಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಈ ಮೊದಲು ದೀಪಕ್ ಹೂಡಾ 3ನೇ, ಕೆ.ಎಲ್.ರಾಹುಲ್ 4ನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದರು.
01ನೇ ಬ್ಯಾಟರ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟರ್ ಅಭಿಷೇಕ್.