ಮೆಲ್ಬರ್ನ್‌(ಫೆ.13): ಮಹಿಳಾ ತ್ರಿಕೋನ ಏಕದಿನ ಟಿ20 ಸರಣಿ ಫೈನಲ್ ಪ್ರವೇಶಿಸಿದ್ದ ಭಾರತ, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 11 ರನ್ ಸೋಲು ಕಾಣೋ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. 

ಇದನ್ನೂ ಓದಿ: ಕೊಹ್ಲಿ ಬಾಯ್ಸ್‌ಗೆ ಸಿಗೋ ಆದಾಯ ನಿರೀಕ್ಷಿಸುವುದು ತಪ್ಪು; ಸ್ಮೃತಿ ಮಂಧನಾ

ಜೆಸ್ಸ್ ಜಾನ್ಸನ್‌ (5-12) ಹಾಗೂ ಟೈಲಾ ವ್ಲಾಮಿನಿಕ್‌ (2-32) ಮಾರಕ ದಾಳಿಗೆ ತತ್ತರಿಸಿದ ಭಾರತ, ಆಸ್ಪ್ರೇಲಿಯಾ ವಿರುದ್ಧದ ಮಹಿಳಾ ತ್ರಿಕೋನ 20 ಸರಣಿಯ ಫೈನಲ್‌ ಪಂದ್ಯದಲ್ಲಿ 11 ರನ್‌ಗಳ ಸೋಲು ಕಂಡಿದೆ. ಪ್ರಶಸ್ತಿ ಗೆದ್ದು ಟಿ20 ವಿಶ್ವಕಪ್‌ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದ್ದ ಹರ್ಮನ್‌ ಪಡೆಗೆ ಈ ಸೋಲು ನಿರಾಸೆ ತಂದಿದೆ. 

ಇದನ್ನೂ ಓದಿ: ಟಿ20 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಕರ್ನಾಟಕದ ಇಬ್ಬರಿಗೆ ಸ್ಥಾನ!

ಆಸ್ಪ್ರೇಲಿಯಾ ನೀಡಿದ 156 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ (66) ಹೋರಾಟದ ಹೊರತಾಗಿಯೂ ಸೋಲುಂಡಿತು. ಭಾರತ 15 ಓವರಲ್ಲಿ 3 ವಿಕೆಟ್‌ಗೆ 115 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ನಂತರ 29 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಆಲೌಟ್‌ ಆಯಿತು. ಇದಕ್ಕೂ ಮುನ್ನ ಆಸ್ಪ್ರೇಲಿಯಾ ಬೆಥ್‌ ಮೂನಿ (71*) ಅರ್ಧಶತಕದಿಂದ 20 ಓವರಲ್ಲಿ 6 ವಿಕೆಟ್‌ಗೆ 155 ರನ್‌ಗಳಿಸಿತು.

ಸ್ಕೋರ್‌: ಆಸ್ಪ್ರೇಲಿಯಾ 155/6, ಭಾರತ 144/10