ಟಿ20 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಕರ್ನಾಟಕದ ಇಬ್ಬರಿಗೆ ಸ್ಥಾನ!
ಮುಂಬರುವ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇತಿಹಾಸ ರಚಿಸಲು ಭಾರತೀಯ ಮಹಿಳಾ ತಂಡ ಸಜ್ಜಾಗಿದೆ. ಫೆಬ್ರವರಿಯಲ್ಲಿ ಆರಂಭವಾಗಲಿರುವ ಮಹತ್ವದ ಟೂರ್ನಿಗೆ ಬಿಸಿಸಿಐ ಮಹಿಳಾ ತಂಡ ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ. ಇಲ್ಲಿದೆ ವಿವರ.
ಮುಂಬೈ(ಜ.12): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. 15 ಸದಸ್ಯರ ಬಲಿಷಅಠ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್‌ಗೆ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂದನಾ ಉಪನಾಯಕಿಯಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ಧೋನಿ, ರೋಹಿತ್ ಶರ್ಮಾ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!
ಟಿ20 ಮಹಿಳಾ ವಿಶ್ವಕಪ್ ತಂಡದಲ್ಲಿ ಇಬ್ಬರು ಕರ್ನಾಟಕ ಮಹಿಳಾ ಆಟಗಾರ್ತಿಯರಿಗೆ ಸ್ಥಾನ ನೀಡಲಾಗಿದೆ.ಕನ್ನಡತಿಯರಾದ ವೇದಾಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟಿ20 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ:
ಹರ್ಮನ್‌ಪ್ರೀತ್ ಕೌರ್(ನಾಯಕ)
ಸ್ಮೃತಿ ಮಂದನಾ(ಉಪನಾಯಕಿ)
ಶೆಫಾಲಿ ವರ್ಮಾ
ಜೇಮಿಯಾ ರೋಡ್ರಿಗಸ್
ಹರ್ಲೆನ್ ಡಿಯೋಲ್
ದೀಪ್ತಿ ಶರ್ಮಾ
ವೇದಾ ಕೃಷ್ಣಮೂರ್ತಿ
ರಿಚಾ ಘೋಷ್
ತಾನಿಯಾ ಭಾಟಿಯಾ
ಪೂನಮ್ ಯಾದವ್
ರಾಧಾ ಯಾದವ್
ರಾಜೇಶ್ವರ್ ಗಾಯಕ್ವಾಡ್
ಶಿಖಾ ಪಾಂಡೆ
ಪೂಜಾ ವಸ್ತ್ರಾಕರ್
ಅರುಂಧತಿ ರೆಡ್ಡಿ
ಫೆಬ್ರವರಿ 21 ರಿಂದ ಮಾರ್ಚ್ 8ರ ವರೆಗೆ ಟೂರ್ನಿ ನಡೆಯಲಿದೆ. ಈ ಬಾರಿ ಆಸ್ಟ್ರೇಲಿಯಾ ಆತಿಥ್ಯ ವಹಿಸಿದೆ. ಆದರೆ ಆಗಾಗಲೇ ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿನಿಂದ ನಲುಗಿದ್ದು, ವಿಶ್ವಕಪ್ ಟೂರ್ನಿ ಮೂಲಕ ಮತ್ತೆ ಮೈಕೊಡವಿ ನಿಲ್ಲುವ ಪ್ರಯತ್ನದಲ್ಲಿದೆ.
ಜನವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ