ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂದುವರೆದ ಕರ್ನಾಟಕ ಜಯದ ನಾಗಾಲೋಟಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದ ಕರ್ನಾಟಕಕಳೆದ ಬಾರಿ ರನ್ನರ್ ಅಪ್ ಗೆ ತೃಪ್ತಿಪಟ್ಟುಕೊಂಡಿದ್ದ ರಾಜ್ಯ ತಂಡ
ಮೊಹಾಲಿ(ಅ.17): ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕಳೆದ ಬಾರಿ ರನ್ನರ್-ಅಪ್ ಕರ್ನಾಟಕ 3ನೇ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ಎಲೈಟ್ ‘ಸಿ’ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ, ಜಮ್ಮು-ಕಾಶ್ಮೀರ ವಿರುದ್ಧ 34 ರನ್ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ 20 ಓವರಲ್ಲಿ 7 ವಿಕೆಟ್‌ಗೆ 147 ರನ್ ಕಲೆಹಾಕಿತು. ವಿಕೆಟ್ ನಷ್ಟವಿಲ್ಲದೇ 26 ರನ್ ಗಳಿಸಿದ್ದ ಕರ್ನಾಟಕ ಬಳಿಕ 7 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. ನಾಯಕ ಮಯಾಂಕ್(05), ಮನೀಶ್ ಪಾಂಡೆ(01) ವಿಫಲರಾದರು. 59 ರನ್‌ಗೆ ಕರ್ನಾಟಕ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇಂಪ್ಯಾಕ್ಟ್ ಆಟಗಾರನಾಗಿ ಮೈದಾನಕ್ಕಿಳಿದ ಶ್ರೇಯಸ್ ಗೋಪಾಲ್ 38 ಎಸೆತದಲ್ಲಿ ಔಟಾಗದೆ 48 ಗಳಿಸಿದರು. ಮನೋಜ್ ಭಾಂಡ್ಗೆ 23 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್‌ನೊಂದಿಗೆ 41 ರನ್ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ಶ್ರೇಯಸ್ ಹಾಗೂ ಮನೋಜ್ ನಡುವೆ 6ನೇ ವಿಕೆಟ್‌ಗೆ 62 ರನ್ ಜೊತೆಯಾಟ ಮೂಡಿಬಂತು.
ಲಂಕಾಗೆ ಗಾಯದ ಮೇಲೆ ಬರೆ; ಏಷ್ಯಾಕಪ್ ಹೀರೋ ಮದುಶನಕ T20 World Cup ಟೂರ್ನಿಯಿಂದ ಔಟ್..!
ಯಶಸ್ವಿಯಾಗಿ ಗುರಿ ಬೆನ್ನತ್ತುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಜಮ್ಮು-ಕಾಶ್ಮೀರ 18.2 ಓವರಲ್ಲಿ 113ಕ್ಕೆ ಸರ್ವಪತನ ಕಂಡಿತು. ವಿವ್ರಾಂಶ್ ಶರ್ಮಾ(63), ಆಬಿದ್ ಮುಷ್ತಾಕ್(32) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಮಾರಕ ಬೌಲಿಂಗ್ ದಾಳಿ ನಡೆಸಿದ ವಿದ್ವತ್ ಕಾವೇರಪ್ಪ 3.2 ಓವರಲ್ಲಿ 11 ರನ್‌ಗೆ 5 ವಿಕೆಟ್ ಕಬಳಿಸಿ ರಾಜ್ಯಕ್ಕೆ ದೊಡ್ಡ ಗೆಲುವು ತಂದುಕೊಟ್ಟರು.
ಕರ್ನಾಟಕ ಅ.18ರಂದು ತನ್ನ ಮುಂದಿನ ಪಂದ್ಯವನ್ನು ಅರುಣಾಚಲ ಪ್ರದೇಶ ವಿರುದ್ಧ ಆಡಲಿದ್ದು, ಮತ್ತೊಂದು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ.
ಸ್ಕೋರ್: ಕರ್ನಾಟಕ 20 ಓವರಲ್ಲಿ 147/7(ಶ್ರೇಯಸ್ 48*, ಮನೋಜ್ 41, ರಿತಿಕ್ 2-16), ಜಮ್ಮು-ಕಾಶ್ಮೀರ 18.2 ಓವರಲ್ಲಿ 113/10(ವಿವ್ರಾಂತ್ 63, ವಿದ್ವತ್ 5-11)
ಡಿಸೆಂಬರ್ 16ಕ್ಕೆ ಬೆಂಗಳೂರಿನಲ್ಲಿ ಐಪಿಎಲ್ ಮಿನಿ ಹರಾಜು?
ಬೆಂಗಳೂರು: 2023ರ ಆವೃತ್ತಿಯ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿ.16ರಂದು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ. 2022ರ ಐಪಿಎಲ್‌ಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗೆ ತಲಾ 90 ಕೋಟಿ ರು. ಬಳಸಲು ಅವಕಾಶವಿತ್ತು.
ಹರಾಜಿನ ಬಳಿಕ ಲಖನೌ ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಸ್ವಲ್ಪ ಪ್ರಮಾಣದಲ್ಲಿ ಹಣ ಉಳಿತಾಯ ಮಾಡಿದ್ದವು. ಈ ಬಾರಿ ಆ ಮೊತ್ತದ ಜೊತೆ ಹೆಚ್ಚುವರಿ 5 ಕೋಟಿ ರುಪಾಯಿ ಬಳಸಿಕೊಂಡು ಆಟಗಾರರನ್ನು ಖರೀದಿಸಬಹುದಾಗಿದೆ. ಟೂರ್ನಿ ಮಾಚ್‌ರ್ ಕೊನೆ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.
