ಲಂಕಾಗೆ ಗಾಯದ ಮೇಲೆ ಬರೆ; ಏಷ್ಯಾಕಪ್ ಹೀರೋ ಮದುಶನಕ T20 World Cup ಟೂರ್ನಿಯಿಂದ ಔಟ್..!

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ದಿಲ್ಷ್ಯಾನ್‌ ಮದುಶನಕ
* ನಮೀಬಿಯಾ ಎದುರಿನ ಸೋಲಿಗೂ ಮುನ್ನವೇ ಲಂಕಾಗೆ ಶಾಕ್
* ದಿಲ್ಷ್ಯಾನ್ ಮದುಶನಕ ಬದಲಿಗೆ ತಂಡ ಕೂಡಿಕೊಂಡ ಬಿನುರಾ ಫರ್ನಾಂಡೋ

T20 World Cup 2022 Asia Cup sensation Dilshan Madushanka ruled out Binura Fernando named as replacement kvn

ಗೀಲಾಂಗ್(ಅ.16): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ತಂಡವು, ನಮೀಬಿಯಾ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ಇನ್ನು ಗಾಯದ ಮೇಲೆ ಬರೆ ಎನ್ನುವಂತೆ ಏಷ್ಯಾಕಪ್ ಚಾಂಪಿಯನ್‌ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ 22 ವರ್ಷದ ವರ್ಷದ ಯುವ ವೇಗಿ ದಿಲ್ಷ್ಯಾನ್‌ ಮದುಶನಕ ಗಾಯದ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.  

ಈ ಕುರಿತಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ದಿಲ್ಷ್ಯಾನ್‌ ಮದುಶನಕ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದು, ಬಿನುರಾ ಫರ್ನಾಂಡೋ ತಂಡ ಕೂಡಿಕೊಂಡಿದ್ದಾರೆ ಎಂದು ತಿಳಿಸಿದೆ. 'ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ತಾಂತ್ರಿಕ ಸಮಿತಿಯು ದಿಲ್ಷ್ಯಾನ್ ಮದುಶನಕ ಬದಲಿಗೆ ಬಿನುರಾ ಫರ್ನಾಂಡೋ ಅವರನ್ನು ತಂಡ ತಂಡಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬಿನುರಾ ಫರ್ನಾಂಡೋ, ಶ್ರೀಲಂಕಾ ಕ್ರಿಕೆಟ್ ತಂಡದ ಪರ 9 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದಾರೆ. ತೊಡೆಸಂದು ಸ್ನಾಯು ಸೆಳೆತಕ್ಕೆ ಒಳಗಾಗಿರುವ ಮದುಶನಕ ಅವರ ಬದಲಿಗೆ ಬಿನುರಾ ಫರ್ನಾಂಡೋ ಅವರಿಗೆ ತಂಡದೊಳಗೆ ಮಣೆಹಾಕಲಾಗಿದ್ದು, ಇದೀಗ ಶ್ರೀಲಂಕಾದಿಂದ ಬಿನುರಾ ಫರ್ನಾಂಡೋ, ಆಸ್ಟ್ರೇಲಿಯಾದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

T20 World Cup: ಏಷ್ಯಾಕಪ್ ಚಾಂಪಿಯನ್‌ ಲಂಕಾಗೆ ಮರ್ಮಾಘಾತ, ನಮೀಬಿಯಾಗೆ ಭರ್ಜರಿ ಜಯ

ಏಷ್ಯಾಕಪ್‌ ಟೂರ್ನಿಯಲ್ಲಿ ಏಷ್ಯಾದ ಬಲಿಷ್ಠ ತಂಡಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಬಗ್ಗುಬಡಿಯುವ ಮೂಲಕ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಶ್ರೀಲಂಕಾ ತಂಡವು, ಇದೀಗ ನಮೀಬಿಯಾಗೆ ಶರಣಾಗುವ ಮೂಲಕ ಮುಖಭಂಗ ಅನುಭವಿಸಿದೆ. 

ಟಿ20 ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಹೀಗಿದೆ ನೋಡಿ

ದಶುನ್ ಶನಕಾ(ನಾಯಕ), ಧನುಷ್ಕಾ ಗುಣತಿಲಕ, ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕಾ, ಭಾನುಕ ರಾಜಪಕ್ಸಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಮಹೀಶ ತೀಕ್ಷಣ, ಜೆಫ್ರಿ ವೆಂಡರ್‌ಸೆ, ಚಮಿಕಾ ಕರುಣಾರತ್ನೆ, ದುಸ್ಮಂತಾ ಚಮೀರಾ, ಲಹಿರು ಕುಮಾರ, ಬಿನುರಾ ಫರ್ನಾಂಡೋ, , ಪ್ರಮೋದ್ ಮದುಶನ್.

ಮೀಸಲು ಆಟಗಾರರು:  ಆಶೀನ್ ಬಂಡಾರ, ಪ್ರವೀಣ್ ಜಯವಿಕ್ರಮ, ದಿನೇಶ್ ಚಾಂಡಿಮಲ್, ನುವಾನಿದು ಫರ್ನಾಂಡೋ.

Latest Videos
Follow Us:
Download App:
  • android
  • ios