ನವದೆಹಲಿ[ನ.25]: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಡೆಲ್ಲಿ ತಂಡವನ್ನು ಪ್ರತಿನಿಧಿಸುತ್ತಿರುವ ಪಂತ್ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು, ಆದರೆ ತಂಡದ ನಂಬಿಕೆಯನ್ನು ಪಂತ್ ಹುಸಿಗೊಳಿಸಿದ್ದಾರೆ.

ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಜಯ

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೀಸಲು ಆಟಗಾರನಾಗಿ ಸ್ಥಾನಗಿಟ್ಟಿಸಿಕೊಂಡಿದ್ದ ಪಂತ್, ಮಧ್ಯದಲ್ಲಿಯೇ ಸೂಪರ್ ಲೀಗ್ ಪಂದ್ಯವನ್ನಾಡಲು ಬಿಸಿಸಿಐ ಅನುಮತಿ ಪಡೆದು ಡೆಲ್ಲಿ ತಂಡ ಕೂಡಿಕೊಂಡಿದ್ದರು. ಹರಿಯಾಣ ವಿರುದ್ಧ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ ಪಂತ್ ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.

ನಿರ್ಣಾಯಕ ಟಿ20: ತಂಡದ ಆಯ್ಕೆ ವಿರುದ್ದ ಫ್ಯಾನ್ಸ್ ಗರಂ!

ಹರಿಯಾಣ ನೀಡಿದ್ದ 182 ರನ್’ಗಳ ಗುರಿ ಬೆನ್ನತ್ತಲು ಡೆಲ್ಲಿ ತಂಡ ಪಂತ್ ಅವರಿಂದ ಸ್ಫೋಟಕ ಇನಿಂಗ್ಸ್ ನಿರೀಕ್ಷೆ ಮಾಡಿತ್ತು. 22 ವರ್ಷದ ರಿಷಭ್ ಪಂತ್ ಇನಿಂಗ್ಸ್ ಆರಂಭಿಸಿದಾಗ, ಲಾಲ್ ಬಾಯಿ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಜೋರಾದ ಚಪ್ಪಾಳೆಯ ಮೂಲಕ ಹುರಿದುಂಬಿಸಿದರು. ಇವೆಲ್ಲದರ ಹೊರತಾಗಿಯೂ ಎಡಗೈ ಬ್ಯಾಟ್ಸ್’ಮನ್ ಪಂತ್ 32 ಎಸೆತಗಳನ್ನು ಎದುರಿಸಿ ಕೇವಲ 28 ರನ್ ಗಳಿಸಲಷ್ಟೇ ಶಕ್ತರಾದರು. ಉತ್ತಮ ಆರಂಭ ಪಡೆಯಲು ವಿಫಲವಾದ ಡೆಲ್ಲಿ ಅಂತಿಮವಾಗಿ 30 ರನ್’ಗಳಿಂದ ಹರಿಯಾಣ ತಂಡದೆದುರು ಸೋಲು ಅನುಭವಿಸಿತು. 11 ಓವರ್’ವರೆಗೂ ಕ್ರೀಸ್’ನಲ್ಲಿದ್ದರೂ ಪಂತ್ ಬಾರಿಸಿದ್ದು ಕೇವಲ 1 ಬೌಂಡರಿ ಹಾಗೂ 1 ಸಿಕ್ಸರ್ ಮಾತ್ರ.

’ನೀವೆಲ್ಲ ಸಂಜು ಬ್ಯಾಟಿಂಗ್ ಪರೀಕ್ಷಿಸುತ್ತಿದ್ದಿರೋ ಇಲ್ಲಾ ಹೃದಯವನ್ನೋ..?’

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಪದೇ ಪದೇ ವಿಫಲರಾಗುತ್ತಿದ್ದರೂ ರಿಷಭ್ ಪಂತ್’ಗೆ ಮತ್ತೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವಕಾಶ ನೀಡಲಾಗಿದೆ. ಪಂತ್ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ಪಂತ್ ಫೇಲ್ ಆಗಿದ್ದರು. ಪಂತ್ ಬದಲಿಗೆ ಕೇರಳ ಕ್ರಿಕೆಟಿಗ ಸಂಜು ಸ್ಯಾಮ್ಸನ್’ಗೆ ಅವಕಾಶ ನೀಡಿ ಎನ್ನುವ ಆಗ್ರಹ ಕ್ರಿಕೆಟ್ ವಲಯದಿಂದ ಕೇಳಿ ಬರುತ್ತಿದೆ. ಇದರ ಹೊರತಾಗಿಯೂ ಪಂತ್ ಅವರನ್ನು ವಿಂಡೀಸ್ ಸರಣಿಯಿಂದ ಕೈಬಿಡಲಾಗಿದೆ.