ಕೇರಳ[ನ.22]: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಿದ ಬೆನ್ನಲ್ಲೇ ಅಸಮಾನದ ಬೇಗುದಿ ಹೊರಬಿದ್ದಿದ್ದು, ಎಂ.ಎಸ್.ಕೆ ಪ್ರಸಾದ್ ನೇತೃತ್ವ ಆಯ್ಕೆ ಸಮಿತಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿದೆ.

ವಿಂಡೀಸ್ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಚಾನ್ಸ್!

ತಿರುವನಂತಪುರಂ ಸಂಸದ ಶಶಿ ತರೂರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಒಂದೇ ಒಂದು ಅವಕಾಶವನ್ನೂ ನೀಡದೇ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ನಿರಾಸೆ ಮೂಡಿಸಿದೆ. ಆತ ಮೂರು ಟಿ20 ಪಂದ್ಯದಲ್ಲಿ ಡ್ರಿಂಕ್ಸ್ ಬಾಯ್ ಆಗಿದ್ದ ಇದೀಗ ಆತನನ್ನು ತಕ್ಷಣ ತಂಡದಿಂದ ಕೈಬಿಡಲಾಗಿದೆ. ನೀವು ಆತನನ್ನು ಪರೀಕ್ಷಿಸುತ್ತಿರುವುದು ಬ್ಯಾಟಿಂಗ್ ಅನ್ನೋ ಇಲ್ಲವೇ ಹೃದಯವನ್ನೋ ಎಂದು ಪ್ರಶ್ನಿಸಿದ್ದಾರೆ.

2015ರ ನಂತರ ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು. ರಿಷಭ್ ಪಂತ್ ಪದೇ ಪದೇ ವಿಫಲವಾದರೂ ಸ್ಯಾಮ್ಸನ್’ಗೆ ಅವಕಾಶ ಸಿಕ್ಕಿರಲಿಲ್ಲ. ಐಪಿಎಲ್ ಹಾಗೂ ದೇಶಿ ಕ್ರಿಕೆಟ್’ನಲ್ಲಿ ಸಂಜು ಸ್ಯಾಮ್ಸನ್ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದರೂ, ಟೀಂ ಇಂಡಿಯಾದಲ್ಲಿ ಮಾತ್ರ ಸ್ಯಾಮ್ಸನ್ ಕಡೆಗಣನೆ ಮುಂದುರೆದಿದೆ. ಇತ್ತೀಚೆಗಷ್ಠೇ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಸ್ಯಾಮ್ಸನ್ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದರು. 

ನಿರ್ಣಾಯಕ ಟಿ20: ತಂಡದ ಆಯ್ಕೆ ವಿರುದ್ದ ಫ್ಯಾನ್ಸ್ ಗರಂ!

ರಿಷಭ್ ಪಂತ್ ದುರ್ಬಲ ಬಾಂಗ್ಲಾದೇಶ ಎದುರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಬ್ಯಾಟಿಂಗ್ ಹಾಗೂ ಕೀಪಿಂಗ್’ನಲ್ಲಿ ಎಡವುತ್ತಿರುವ ಪಂತ್’ಗೆ ಇನ್ನೆಷ್ಟು ಅವಕಾಶ ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.