Asianet Suvarna News Asianet Suvarna News

ಸಯ್ಯದ್ ಮುಷ್ತಾಕ್ ಅಲಿ: ವಿನಯ್-ಮಿಥುನ್ ಸಿಕ್ಸರ್ ಅಬ್ಬರ: ಕರ್ನಾಟಕಕ್ಕೆ ಜಯ!

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ ಕರ್ನಾಟಕ 4 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿ, ಸತತ 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸೂಪರ್ ಲೀಗ್‌ಗೆ ರಾಜ್ಯ ತಂಡದ ಪ್ರವೇಶ ಬಹುತೇಕ ಖಚಿತವಾಗಿದೆ.

Syed Mushtaq Ali Trophy Karnataka Cruise to Fifth Win
Author
Cuttack, First Published Feb 28, 2019, 10:30 AM IST

ಕಟಕ್[ಫೆ.28]: ವಿನಯ್ ಕುಮಾರ್, ಅಭಿಮನ್ಯು ಮಿಥುನ್ ತಮ್ಮ ಆಕರ್ಷಕ ಬೌಲಿಂಗ್ ಪ್ರದರ್ಶನದಿಂದ ಕರ್ನಾಟಕಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಈ ಇಬ್ಬರು ಬುಧವಾರ ತಮ್ಮ ಬ್ಯಾಟಿಂಗ್ ಪರಾಕ್ರಮದಿಂದ ರಾಜ್ಯಕ್ಕೆ ರೋಚಕ ಗೆಲುವು ತಂದುಕೊಟ್ಟರು. 

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ ಕರ್ನಾಟಕ 4 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿ, ಸತತ 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸೂಪರ್ ಲೀಗ್‌ಗೆ ರಾಜ್ಯ ತಂಡದ ಪ್ರವೇಶ ಬಹುತೇಕ ಖಚಿತವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಛತ್ತೀಸ್ ಗಢ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 171 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಸವಾಲಿನ ಗುರಿ ಬೆನ್ನತ್ತಿದ ಕರ್ನಾಟಕ ಕರುಣ್ ನಾಯರ್ (35) ಹೋರಾಟದ ಹೊರತಾಗಿಯೂ 15 ಓವರ್‌ಗಳಲ್ಲಿ 109 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೊನೆ 30 ಎಸೆತಗಳಲ್ಲಿ ತಂಡದ ಗೆಲುವಿಗೆ 63 ರನ್ ಬೇಕಿತ್ತು. 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ ಜೆ.ಸುಚಿತ್ 34 ರನ್ ಸಿಡಿಸಿ ಔಟಾದರು. 6ನೇ ವಿಕೆಟ್ ಪತನಗೊಂಡಾಗ ತಂಡದ ಮೊತ್ತ 122 ರನ್

ಕೊನೆ 21 ಎಸೆತಗಳಲ್ಲಿ ತಂಡಕ್ಕೆ 50 ರನ್‌ಗಳ ಅಗತ್ಯವಿತ್ತು. 13 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ ವಿನಯ್ 34 ರನ್ ಗಳಿಸಿ ಅಜೇಯರಾಗಿ ಉಳಿದರು. ಮಿಥುನ್ 7 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್‌ನೊಂದಿಗೆ 18 ರನ್ ಸಿಡಿಸಿದರು. ಇನ್ನೂ 4 ಎಸೆತ ಬಾಕಿ ಇರುವಂತೆಯೇ ಕರ್ನಾಟಕ ಜಯದ ನಗೆ ಬೀರಿತು

ಛತ್ತೀಸ್‌ಗಢ ನಾಯಕ ಹರ್ಪ್ರೀತ್ ಸಿಂಗ್ ಭಾಟಿಯಾ (79), ಅಮನ್‌ದೀಪ್ ಖಾರೆ (45), ರಿಷಭ್ ತಿವಾರಿ(33) ರನ್ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು.
 

Follow Us:
Download App:
  • android
  • ios