Asianet Suvarna News Asianet Suvarna News

ಸಯ್ಯದ್ ಮುಷ್ತಾಕ್‌ ಅಲಿ ಟ್ರೋಫಿ: ಮುಂಬೈ ನಾಯಕನಾಗಿ ಅಜಿಂಕ್ಯ ರಹಾನೆ ಆಯ್ಕೆ

* ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಮುಂಬೈ ತಂಡ ಪ್ರಕಟ

* ಮುಂಬೈ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕ, ಪೃಥ್ವಿ ಶಾ ಉಪನಾಯಕ

* ಸೆಪ್ಟೆಂಬರ್ 04ರಿಂದ ಮುಷ್ತಾಕ್ ಅಲಿ ಟೂರ್ನಿ ಆರಂಭ

Syed Mushtaq Ali T20 Trophy Ajinkya Rahane to lead Mumbai Team kvn
Author
Bengaluru, First Published Oct 19, 2021, 4:49 PM IST
  • Facebook
  • Twitter
  • Whatsapp

ಮುಂಬೈ(ಅ.19): ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರಿಗೆ ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ (Syed Mushtaq Ali T20 Trophy) ಟೂರ್ನಿಗೆ ಮುಂಬೈ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇನ್ನು ಪೃಥ್ವಿ ಶಾ (Prithvi Shaw) ಉಪನಾಯಕರಾಗಿ ಮುಂಬೈ ತಂಡಕ್ಕೆ ನೆರವಾಗಲಿದ್ದಾರೆ.
 
13ನೇ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯು ಭಾರತದಲ್ಲಿ ನವೆಂಬರ್ 04ರಿಂದ ನವೆಂಬರ್ 22ರವರೆಗೆ ನಡೆಯಲಿದೆ. ಸಲೀಲ್‌ ಅಂಕೋಲ ನೇತೃತ್ವದ ಮುಂಬೈ ಕ್ರಿಕೆಟ್ ಆಯ್ಕೆ ಸಮಿತಿಯು 20 ಆಟಗಾರರನ್ನೊಳಗೊಂಡ ಬಲಿಷ್ಠ ಮುಂಬೈ ತಂಡವನ್ನು ಪ್ರಕಟಿಸಿದೆ. ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್‌ (Suryakumar Yadav) ತಂಡದಲ್ಲಿ ಅವಕಾಶ ಕಲ್ಪಿಸಿಲ್ಲ. ಕಾರಣ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಟೀಂ ಇಂಡಿಯಾ ಜತೆಗಿದ್ದಾರೆ.

IPL ಧೋನಿ ಇಲ್ಲದೇ ಸಿಎಸ್‌ಕೆ ತಂಡವೇ ಇಲ್ಲ: ಎನ್‌ ಶ್ರೀನಿವಾಸನ್‌

ಇನ್ನುಳಿದಂತೆ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಹಾಗೂ ಪೃಥ್ವಿ ಶಾ ಮುಂಬೈ ತಂಡದ ಪರ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ ಎನಿಸಿದೆ. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್‌, ಅನುಭವಿ ಆಟಗಾರ ಆದಿತ್ಯ ತಾರ ಕೂಡಾ ಮುಂಬೈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಲಿಷ್ಠ ಮುಂಬೈ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ. ಕಳೆದ ಆವೃತ್ತಿಯ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಮುಂಬೈ ತಂಡವು 5 ಪಂದ್ಯಗಳನ್ನಾಡಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ರುಚಿ ಕಂಡಿತ್ತು.  ಮುಂಬೈ ತಂಡವು ಎಲೈಟ್‌ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ನವೆಂಬರ್ 04ರಂದು ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

ಮುಷ್ತಾಕ್ ಅಲಿ ಟೂರ್ನಿ ಮಾದರಿ ಹೇಗೆ..?

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಒಟ್ಟು 38 ತಂಡಗಳು ಪಾಲ್ಗೊಳ್ಳುತ್ತವೆ. ಇವುಗಳನ್ನು 6 ತಂಡಗಳಂತೆ A, B, C, D ಹಾಗೂ E ಎಂದು 5 ಎಲೈಟ್‌ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇದರ ಜತೆಗೆ 8 ತಂಡಗಳನ್ನು ಒಂದು ಪ್ಲೇಟ್‌ ಗ್ರೂಪ್‌ ಆಗಿ ಟೂರ್ನಿ ನಡೆಸಲಾಗುತ್ತದೆ. ಪ್ರತಿ ತಂಡವು ಲೀಗ್ ಹಂತದಲ್ಲಿ 5 ಪಂದ್ಯಗಳನ್ನಾಡುತ್ತವೆ. ಈ ಪೈಕಿ ಪ್ರತಿ ಎಲೈಟ್‌ ಗ್ರೂಪ್‌ನಿಂದ ಅಗ್ರಸ್ಥಾನ ಪಡೆಯುವ 5 ತಂಡಗಳು ಹಾಗೂ ಪ್ಲೇಟ್ ಗ್ರೂಪ್‌ನ ಅಗ್ರಸ್ಥಾನ ಪಡೆಯುವ ಒಂದು ತಂಡ ನಾಕೌಟ್‌ ಹಂತಕ್ಕೆ ಪ್ರವೇಶ ಪಡೆಯಲಿದೆ. ಇದರ ಜತೆಗೆ ಲೀಗ್‌ ಹಂತದಲ್ಲಿ ಎರಡನೇ ಗರಿಷ್ಠ ಅಂಕ ಗಳಿಸುವ ಎರಡು ತಂಡಗಳು ಕೂಡಾ ನಾಕೌಟ್‌ ಹಂತ ಪ್ರವೇಶಿಸಲಿವೆ. ಒಟ್ಟಾರೆ 8 ತಂಡಗಳು ನಾಕೌಟ್‌ನಲ್ಲಿ ಹೋರಾಟ ನಡೆಸಲಿವೆ.

2022ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಮುಂಬೈ ತಂಡ ಹೀಗಿದೆ ನೋಡಿ:

ಅಜಿಂಕ್ಯ ರಹಾನೆ(ನಾಯಕ), ಪೃಥ್ವಿ ಶಾ (ಉಪನಾಯಕ), ಸರ್ಫರಾಜ್ ಖಾನ್‌, ಪ್ರಶಾಂತ್ ಸೋಲಂಕಿ, ಶಂಸ್‌ ಮುಲಾನಿ, ಅಥರ್ವ ಅಂಕೋಲ್ಕರ್, ಧವಳ್ ಕುಲಕರ್ಣಿ, ಆದಿತ್ಯ ತಾರೆ, ಶಿವಂ ದುಬೆ, ತುಷಾರ್ ದೇಶಪಾಂಡೆ, ಹಾರ್ದಿಕ್‌ ತಾಮೊರೆ, ಮೋಹಿತ್ ಅವಸ್ತಿ, ಸಿದ್ದೇಶ್ ಲಾಡ್‌, ಸಾಯಿರಾಜ್ ಪಾಟೀಲ್‌, ಅರ್ಮಾನ್ ಜಾಫರ್, ಅಮಾನ್‌ ಖಾನ್‌, ಯಶಸ್ವಿ ಜೈಸ್ವಾಲ್, ತನುಷ್ ಕೊಟ್ಯಾನ್‌, ದೀಪಕ್ ಶೆಟ್ಟಿ ಮತ್ತು ರಾಯ್ಸನ್‌ ಡಯಾಸ್.

Follow Us:
Download App:
  • android
  • ios