ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಸಿಡ್ನಿ ಟೆಸ್ಟ್ ಡ್ರಾನಲ್ಲಿ ಅಂತ್ಯಆಫ್ರಿಕಾ ಎದುರಿನ 3 ಪಂದ್ಯಗಳ ಟೆಸ್ಟ್ ಸರಣಿ 2-0 ಅಂತರದಲ್ಲಿ ಆಸೀಸ್ ಪಾಲುಭಾರತದ ಫೈನಲ್‌ಗೇರುವ ಕನಸಿಗೆ ಮತ್ತಷ್ಟು ಬಲ
ಸಿಡ್ನಿ(ಜ.09): ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟೆಸ್ಟ್ ಪಂದ್ಯ ಡ್ರಾಗೊಂಡರೂ ಆಸ್ಪ್ರೇಲಿಯಾ 2022-23ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಹೋರಾಡಿ ಪಂದ್ಯ ಡ್ರಾ ಮಾಡಿದ ದಕ್ಷಿಣ ಆಫ್ರಿಕಾ ಕೂಡಾ ಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದ್ದು, ಭಾರತ ಹಾಗೂ ಶ್ರೀಲಂಕಾ ಜೊತೆ ಪೈಪೋಟಿ ನಡೆಸಲಿದೆ.
ಸದ್ಯ ಆಸೀಸ್ ಶೇ.75.56 ಗೆಲುವಿನ ಪ್ರತಿಶತದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕಳೆದ ಬಾರಿ ರನ್ನರ್-ಅಪ್ ಭಾರತ ಶೇ.58.93 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಹೀಗಾಗಿ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧ 4 ಪಂದ್ಯಗಳ ಸರಣಿಯಲ್ಲಿ 0-4 ಅಂತರದಲ್ಲಿ ಸೋತರೂ ಆಸೀಸ್ ಮೊದಲೆರಡು ಸ್ಥಾನಗಳಲ್ಲಿರಲಿದ್ದು, ಭಾರತದ ಜೊತೆ ಫೈನಲ್ ಆಡಲಿದೆ. ಒಂದು ವೇಳೆ ಭಾರತ ಈ ಸರಣಿಯಲ್ಲಿ ಸೋತರೆ ಆಗ ನ್ಯೂಜಿಲೆಂಡ್-ಶ್ರೀಲಂಕಾ(2 ಟೆಸ್ಟ್), ವೆಸ್ಟ್‌ಇಂಡೀಸ್-ದ.ಆಫ್ರಿಕಾ(2 ಟೆಸ್ಟ್) ಸರಣಿಗಳು ಫೈನಲ್ ಆಡುವ ತಂಡಗಳನ್ನು ನಿರ್ಧರಿಸಲಿವೆ. ಶ್ರೀಲಂಕಾ(ಶೇ.53.33), ದ.ಆಫ್ರಿಕಾ(ಶೇ.48.72) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದೆ.
ಇವರೇ ನನ್ನ ಬದುಕನ್ನು ಬದಲಿಸಿದವರು ಎಂದ ಹಾರ್ದಿಕ್ ಪಾಂಡ್ಯ..! ಆದ್ರೆ ಅದು ಧೋನಿ/ಕೊಹ್ಲಿಯಲ್ಲ..!
ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಸೌಥಾಂಪ್ಟನ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಟೆಸ್ಟ್ ವಿಶ್ವಕಪ್ ಗೆದ್ದು ಬೀಗಿತ್ತು. ಇನ್ನು ಎರಡನೇ ಅವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ನ್ಯೂಜಿಲೆಂಡ್ ತಂಡವು ಈಗಾಗಲೇ ಹೊರಬಿದ್ದಿದೆ. ಇನ್ನು ಮತ್ತೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ತವರಿನಲ್ಲಿ ಆಸ್ಟ್ರೇಲಿಯಾ ಎದುರು ಪ್ರಾಬಲ್ಯ ಮೆರೆಯುವ ಮೂಲಕ ಸತತ ಎರಡನೇ ಬಾರಿಗೆ ಟೆಸ್ಟ್ ವಿಶ್ವಕಪ್ ಫೈನಲ್ ಆಡಲು ಎದುರು ನೋಡುತ್ತಿದೆ. 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಸೋಲದೇ ಹೋದರೆ ಅನಾಯಾಸವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆಯಿಡಲಿದೆ.
ಹೋರಾಡಿ ಡ್ರಾ ಸಾಧಿಸಿದ ದ.ಆಫ್ರಿಕಾ
ಸಿಡ್ನಿ: ಅಂತಿಮ ದಿನ 14 ವಿಕೆಟ್ ಕಿತ್ತು ಪಂದ್ಯವನ್ನು ಗೆಲ್ಲುವ ತವಕದಲ್ಲಿದ್ದ ಆಸ್ಪ್ರೇಲಿಯಾ ಕನಸಿಗೆ ದ.ಆಫ್ರಿಕಾ ಬ್ಯಾಟರ್‌ಗಳು ತಣ್ಣೀರೆರಚಿದರು. ಇದರೊಂದಿಗೆ 150ಕ್ಕೂ ಹೆಚ್ಚು ಓವರ್‌ಗಳು ಮಳೆಗೆ ಆಹುತಿಯಾಗಿದ್ದ 3ನೇ ಹಾಗೂ ಕೊನೆ ಟೆಸ್ಟ್ ಪಂದ್ಯ ಡ್ರಾಗೊಂಡಿದ್ದು, ಆಸೀಸ್ 2-0 ಅಂತರದಲ್ಲಿ ಸರಣಿ ಜಯಿಸಿತು.
4ನೇ ದಿನ 6 ವಿಕೆಟ್‌ಗೆ 149 ರನ್ ಗಳಿಸಿ ಸಂಕಷ್ಟದಲ್ಲಿದ್ದ ದ.ಆಫ್ರಿಕಾಕ್ಕೆ ಮೊದಲ ಇನ್ನಿಂಗ್ಸಲ್ಲಿ ಕೆಳ ಕ್ರಮಾಂಕ, 2ನೇ ಇನ್ನಿಂಗ್ಸಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಆಸರೆಯಾದರು. ಮೊದಲ ಇನ್ನಿಂಗ್‌್ಸನಲ್ಲಿ 8ನೇ ವಿಕೆಟ್‌ಗೆ ಹಾರ್ಮರ್(47), ಮಹಾರಾಜ್(53) ನಡುವೆ 85 ರನ್ ಜೊತೆಯಾಟ ಮೂಡಿಬಂದ ಪರಿಣಾಮ ದ.ಆಫ್ರಿಕಾ 255 ರನ್ ಗಳಿಸಿತು. ಆದರೂ 220 ರನ್ ಹಿನ್ನಡೆಯೊಂದಿಗೆ ಫಾಲೋ-ಆನ್‌ಗೆ ತುತ್ತಾದ ದ.ಆಫ್ರಿಕಾ ಬಳಿಕ ಎಚ್ಚರಿಕೆಯ ಆಟವಾಡಿತು. 41.5 ಓವರ್ ಬ್ಯಾಟ್ ಮಾಡಿ 2 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿತು.
ಲಂಕಾ ಏಕದಿನ: ಗುವಾಹಟಿ ತಲುಪಿದ ರೋಹಿತ್, ಕೊಹ್ಲಿ
ಗುವಾಹಟಿ: ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ವಿಶ್ರಾಂತಿ ಪಡೆದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಂಗಳವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಮೊದಲ ಪಂದ್ಯವನ್ನಾಡಲು ಈ ಇಬ್ಬರು ಭಾನುವಾರ ಗುವಾಹಟಿ ತಲುಪಿದರು. ಶನಿವಾದ 3ನೇ ಟಿ20 ಪಂದ್ಯದ ಬಳಿಕ ಭಾರತ, ಲಂಕಾ ತಂಡದ ಆಟಗಾರರು ರಾಜ್‌ಕೋಟ್‌ನಿಂದ ಅಸ್ಸಾಂ ರಾಜಧಾನಿಗೆ ಪ್ರಯಾಣಿಸಿದರು. ಕೊಹ್ಲಿ ಭಾನುವಾರ ಸಂಜೆ ಇಲ್ಲಿನ ಬರ್ಸಾಪರ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.
