ಬಾಲ್ಕನಿಯಿಂದ ಜಿಗಿಯಲು ರೆಡಿಯಾಗಿದ್ದ ಸಚಿನ್ ತೆಂಡುಲ್ಕರ್..! ನೀವೆಂದೂ ಕೇಳಿರದ ಇಂಟ್ರೆಸ್ಟಿಂಗ್ ಕಥೆಯಿದು
ಬೆಂಗಳೂರು: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸಚಿನ್ ತೆಂಡುಲ್ಕರ್ ಹಲವು ಯುವ ಕ್ರಿಕೆಟಿಗರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಒಂದು ಕಾಲದಲ್ಲಿ ಸಚಿನ್ ತೆಂಡುಲ್ಕರ್, ಬಾಲ್ಕನಿಯಿಂದ ಜಿಗಿಯಲು ಮುಂದಾದ ಸ್ವಾರಸ್ಯಕರ ಘಟನೆಯನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್‌ಗಳ ರಾಶಿಯನ್ನೇ ಗುಡ್ಡೆ ಹಾಕಿರುವ ಸಚಿನ್ ತೆಂಡುಲ್ಕರ್, ಹಲವು ಯುವ ಕ್ರಿಕೆಟಿಗರ ಪಾಲಿಗೆ ಈಗಲೂ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಮುಂಬೈಕರ್ ಹೆಸರಿನಲ್ಲಿ ಹಲವಾರು ವಿಶ್ವದಾಖಲೆಗಳಿವೆ.
24 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಆಗಾಗ ಸಮಯ ಸಿಕ್ಕಾಗಲೆಲ್ಲಾ, ತಮ್ಮ ಖಾಸಗಿ ಬದುಕಿನ ಕೆಲವು ಸಂಗತಿಗಳನ್ನು ಬಹಿರಂಗ ಪಡಿಸುವ ಮೂಲಕ, ಅಭಿಮಾನಿಗಳ ಜತೆ ಸದಾ ಒಂದಿಲ್ಲೊಂದು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ.
ಎರಡೂವರೆ ದಶಕಗಳ ಕಾಲ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದ ಸಚಿನ್ ತೆಂಡುಲ್ಕರ್ ತಮ್ಮ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ'ನಲ್ಲಿ ತಮ್ಮ ಹಲವಾರು ಖಾಸಗಿ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಈ ಪೈಕಿ ಸಚಿನ್, ಅನಾವರಣ ಮಾಡಿದ ಬೆದರಿಕೆ ಪ್ರಕರಣ ಬಹುತೇಕ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿಲ್ಲ.
ಹೌದು, ಸಚಿನ್ ತಾವು ಬಾಲ್ಯದಲ್ಲಿದ್ದಾಗ ಬಯಸ್ಸಿದ್ದನ್ನು ಪಡೆಯಲು, ಒಂದು ಹಂತದಲ್ಲಿ ಬಾಲ್ಕನಿಯಿಂದ ಹಾರಲು ತಯಾರಾಗಿದ್ದ ಕುತೂಹಲಕಾರಿ ಸಂಗತಿಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.
ಬಾಲ್ಯದಲ್ಲಿ ಸಚಿನ್ ತಮಗೆ ಬೇಕಾಗಿದ್ದನ್ನು ಪಡೆಯಲು ಸಾಕಷ್ಟು ಹಠ ಮಾಡುತ್ತಿದ್ದರಂತೆ. ಎಲ್ಲಾ ಮಕ್ಕಳಂತೆ ಸಚಿನ್ ಕೂಡಾ ಬೇಕಾಗಿದ್ದನ್ನು ಪಡೆಯಲು ಹಠ ಮಾಡುತ್ತಿದ್ದರಂತೆ. ಸಚಿನ್ ಅವರ ಬಹುತೇಕ ಡಿಮ್ಯಾಂಡ್ ಅನ್ನು ಅವರ ತಂದೆ ಪೂರೈಸುತ್ತಿದ್ದರಂತೆ.
ಬಾಲ್ಯದಲ್ಲಿದ್ದಾಗ ಸಚಿನ್, ಎಲ್ಲಾ ಮಕ್ಕಳಂತೆ ತಮಗೂ ಒಂದು ಹೊಸ ಸೈಕಲ್ ಬೇಕು ಎನ್ನುವ ಆಸೆ ಶುರುವಾಯಿತಂತೆ. ಆದರೆ ಅವರ ತಂದೆ ರಮೇಶ್ ತೆಂಡುಲ್ಕರ್, ಸಚಿನ್ ಅವರ ಡಿಮ್ಯಾಂಡ್ ನಿರಾಕರಿಸಿದರಂತೆ. ತಂದೆ ಪದೇ ಪದೇ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಸಚಿನ್, ಸೈಕಲ್ ಕೊಡಸಿಲ್ಲವೆಂದರೆ, ಬಾಲ್ಕನಿಯಿಂದ ಜಿಗಿಯುವುದಾಗಿ ಬೆದರಿಸಿದ್ದರಂತೆ.
ತಮ್ಮ ಆತ್ಮಕಥೆ 'ಪ್ಲೈಯಿಂಗ್ ಇಟ್ ಮೈ ವೇ'ದಲ್ಲಿ ಈ ವಿಚಾರದ ಬಗ್ಗೆ ಬರೆದಿರುವ ಸಚಿನ್, ತಮಗೆ ಸೈಕಲ್ ಕೊಡಿಸಿಲ್ಲವೆಂದರೆ ತಾವು ಆಟವಾಡಲು ಹೊರಗೆ ಹೋಗುವುದಿಲ್ಲ ಎಂದು ಹಠ ಹಿಡಿದರು. ಇನ್ನು ಬಾಲ್ಕನಿಯಿಂದಲೇ ನಿಂತು ಸಚಿನ್, ತಮ್ಮ ಗೆಳೆಯಲು ಸೈಕಲ್ ಓಡಿಸುವುದನ್ನು ನೋಡುತ್ತಿದ್ದರಂತೆ.
ಹೀಗಿರುವಾಗ ಸಚಿನ್ ತೆಂಡುಲ್ಕರ್ ಅವರ ತಲೆ ಬಾಲ್ಕನಿಯಲ್ಲಿ ಅಳವಡಿಸಲಾಗಿದ್ದ ಗ್ರಿಲ್‌ಗೆ ಸಿಕ್ಕಿಹಾಕಿಕೊಂಡಿತ್ತಂತೆ. ಆಗ ಸಚಿನ್ 4ನೇ ತರಗತಿ ಓದುತ್ತಿದ್ದರು. ಈ ಘಟನೆಯಿಂದ ಸಚಿನ್ ಬೆಚ್ಚಿ ಬಿದ್ದಿದ್ದರಂತೆ. ಸುಮಾರು ಅರ್ಧ ಗಂಟೆಗಳ ಪರಿಶ್ರಮದಿಂದ ಅವರ ಪೋಷಕರು ಸಚಿನ್ ಅವರನ್ನು ಗ್ರಿಲ್‌ನಿಂದ ಹೊರಗೆ ಬಿಡಿಸಿದ್ದರಂತೆ.
ಇದಾದ ಕೆಲ ದಿನಗಳ ಬಳಿಕ ಅವರ ಪೋಷಕರು ಹಣವನ್ನು ಜೋಡಿಸಿ, ಸಚಿನ್ ತೆಂಡುಲ್ಕರ್ ಅವರಿಗೆ ಹೊಸ ಸೈಕಲ್ ಕೊಡಸಿದ್ದರು. ಹೊಸ ಸೈಕಲ್ ಕಲಿಯುವ ಹೊಸ್ತಿಲಲ್ಲಿ ಒಮ್ಮೆ ಚಿಕ್ಕ ಅಪಘಾತವೂ ಆಗಿತ್ತು ಎನ್ನುವ ವಿಚಾರವನ್ನು ತಮ್ಮ ಆತ್ಮಕಥೆಯಲ್ಲಿ ಮುಂಬೈಕರ್ ಮೆಲುಕು ಹಾಕಿದ್ದಾರೆ.