Asianet Suvarna News Asianet Suvarna News

ಐಸಿಸಿ ವರ್ಷದ ಟಿ20 ತಂಡದಲ್ಲಿ ಭಾರತದ ನಾಲ್ವರು ಕ್ರಿಕೆಟಿಗರು..! ಸೂರ್ಯನಿಗೆ ಒಲಿದ ನಾಯಕ ಪಟ್ಟ

ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಕಳೆದ ವರ್ಷ ಸೂರ್ಯಕುಮಾರ್ ಯಾದವ್ 18 ಟಿ20 ಪಂದ್ಯಗಳನ್ನಾಡಿ ಎರಡು ಶತಕ ಸಹಿತ 733 ರನ್ ಸಿಡಿಸಿದ್ದಾರೆ.

Suryakumar Yadav Named Captain As ICC Announces mens T20I team of the Year kvn
Author
First Published Jan 23, 2024, 1:26 PM IST

ದುಬೈ(ಜ.23): 2023ರಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ವಿಶ್ವದೆಲ್ಲೆಡೆಯ ಕ್ರಿಕೆಟಿಗರನ್ನು ಸೇರಿಸಿ ಐಸಿಸಿ 11 ಆಟಗಾರರ ವರ್ಷದ ಶ್ರೇಷ್ಠ ಟಿ20 ತಂಡವನ್ನು ಪ್ರಕಟಿಸಿದ್ದು, ಭಾರತದ ನಾಲ್ವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಶ್ವ ನಂ.1 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. 

ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಕಳೆದ ವರ್ಷ ಸೂರ್ಯಕುಮಾರ್ ಯಾದವ್ 18 ಟಿ20 ಪಂದ್ಯಗಳನ್ನಾಡಿ ಎರಡು ಶತಕ ಸಹಿತ 733 ರನ್ ಸಿಡಿಸಿದ್ದಾರೆ.

Ranji Trophy: ಕರ್ನಾಟಕ vs ಗೋವಾ ಪಂದ್ಯ ಡ್ರಾನಲ್ಲಿ ಅಂತ್ಯ

ಇನ್ನುಳಿದಂತೆ ಭಾರತದ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌, ಸ್ಪಿನ್ನರ್‌ ರವಿ ಬಿಷ್ಣೋಯ್‌, ವೇಗಿ ಅರ್ಶ್‌ದೀಪ್‌ ಸಿಂಗ್ ಕೂಡಾ ತಂಡದಲ್ಲಿದ್ದಾರೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ 15 ಪಂದ್ಯಗಳನ್ನಾಡಿ 430 ರನ್ ಸಿಡಿಸಿದ್ದಾರೆ. ಇನ್ನು ಎಡಗೈ ವೇಗಿ ಆರ್ಶದೀಪ್ ಸಿಂಗ್ 21 ಪಂದ್ಯಗಳನ್ನಾಡಿ 26 ವಿಕೆಟ್ ಕಬಳಿಸಿದ್ದಾರೆ. 

ಪುರುಷರ ತಂಡ: ಯಶಸ್ವಿ ಜೈಸ್ವಾಲ್, ಫಿಲ್‌ ಸಾಲ್ಟ್‌, ನಿಕೋಲಸ್ ಪೂರನ್‌, ಸೂರ್ಯಕುಮಾರ್ ಯಾದವ್(ನಾಯಕ), ಮಾರ್ಕ್‌ ಚಾಪ್ಮನ್‌, ಸಿಕಂದರ್‌ ರಾಜಾ, ಅಲ್ಪೇಶ್‌ ರಮ್ಜಾನಿ, ಮಾರ್ಕ್‌ ಅಡೈರ್‌, ರವಿ ಬಿಷ್ಣೋಯ್‌, ರಿಚರ್ಡ್‌ ಎನ್‌ಗರಾವ, ಅರ್ಶ್‌ದೀಪ್‌ ಸಿಂಗ್.

ರವಿಶಾಸ್ತ್ರಿ, ಶುಭ್‌ಮನ್ ಗಿಲ್‌ಗೆ ಬಿಸಿಸಿಐ ಪ್ರಶಸ್ತಿ: ಇಂದು ಪ್ರದಾನ

ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಬಿಸಿಸಿಐ ಜೀವಮಾನ ಸಾಧನೆ ಪುರಸ್ಕಾರಕ್ಕೆ ಪಾತ್ರರಾಗಿದ್ದು, ಶುಭ್‌ಮನ್ ಗಿಲ್ ವರ್ಷದ ಕ್ರಿಕೆಟ್ ಆಟಗಾರನಾಗಿ ಆಯ್ಕೆಯಾಗಿದ್ದಾರೆ. 2019ರ ನಂತರ ಮೊದಲ ಬಾರಿಗೆ ಬಿಸಿಸಿಐ ಪ್ರಶಸ್ತಿ ಘೋಷಿಸಿದ್ದು, ಮಂಗಳವಾರವಾದ ಇಂದು ಹೈದರಾಬಾದ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಶೋಯೆಬ್‌ ಮಲೀಕ್‌ಗೆ 'ಖುಲಾ' ನೀಡಿದ ಸಾನಿಯಾ, ಮುಸ್ಲಿಂ ಹೆಣ್ಣುಮಕ್ಕಳಿಗಿದೆ ಇಂಥದ್ದೊಂದು ಅಧಿಕಾರ!

ಭಾರತ ಹಾಗೂ ಇಂಗ್ಲೆಂಡ್ ಆಟಗಾರರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತ ಪರ 80 ಟೆಸ್ಟ್ ಹಾಗೂ 150 ಏಕದಿನ ಪಂದ್ಯಗಳನ್ನಾಡಿರುವ ರವಿಶಾಸ್ತ್ರಿ ನಿವೃತ್ತಿಯ ನಂತರ 2014ರಿಂದ 2016ರ ವರೆಗೆ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಇನ್ನು ಪ್ರತಿಭಾನ್ವಿತ ಬ್ಯಾಟರ್ ಶುಭ್‌ಮನ್ ಗಿಲ್ 2023ರಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ್ದು, ಟೀಂ ಇಂಡಿಯಾ ಪರ 5 ಶತಕ ಸಿಡಿಸಿದ್ದಾರೆ.
 

Follow Us:
Download App:
  • android
  • ios