Asianet Suvarna News Asianet Suvarna News

Aus vs NZ ಕಿವೀಸ್‌ ವಿರುದ್ಧ ಆಸೀಸ್‌ 3-0 ಸರಣಿ ಕ್ಲೀನ್‌ ಸ್ವೀಪ್‌

ನ್ಯೂಜಿಲೆಂಡ್ ಎದುರು ಏಕದಿನ ಸರಣಿ ಕ್ಲೀನ್‌ ಸ್ವೀಪ್ ಮಾಡಿದ ಆಸ್ಟ್ರೇಲಿಯಾ
3 ಪಂದ್ಯಗಳ ಏಕದಿನ ಸರಣಿಯು 3-0 ಅಂತರದಲ್ಲಿ ಆಸೀಸ್‌ ಪಾಲು
ಕೊನೆಯ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ ಸ್ಟೀವ್ ಸ್ಮಿತ್

Steve Smith century power Australia complete ODI Series clean sweep against New Zealand kvn
Author
First Published Sep 12, 2022, 9:15 AM IST

ಕೈನ್ಸ್‌ರ್‍(ಸೆ.12): ಸ್ಟೀವ್‌ ಸ್ಮಿತ್‌(105)ರ ಶತಕ ಹಾಗೂ ವೇಗಿಗಳ ಉತ್ತಮ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಆಸ್ಪ್ರೇಲಿಯಾ 25 ರನ್‌ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯನ್ನು 3-9 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಮೊದಲು ಬ್ಯಾಟ್‌ ಮಾಡಿದ ಆಸ್ಪ್ರೇಲಿಯಾ 50 ಓವರಲ್ಲಿ 5 ವಿಕೆಟ್‌ಗೆ 267 ರನ್‌ ಕಲೆಹಾಕಿತು. ಲಬುಶೇನ್‌(52) ಅರ್ಧಶತಕ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 49.5 ಓವರಲ್ಲಿ 242 ರನ್‌ಗೆ ಆಲೌಟ್‌ ಆಯಿತು. ಮಿಚೆಲ್‌ ಸ್ಟಾರ್ಕ್ 3, ಕ್ಯಾಮರೂನ್‌ ಗ್ರೀನ್‌ ಹಾಗೂ ಶಾನ್‌ ಅಬ್ಟಾಟ್‌ ತಲಾ 2 ವಿಕೆಟ್‌ ಕಿತ್ತರು.

ಟೆಸ್ಟ್‌: ಇಂಗ್ಲೆಂಡ್‌ಗೆ ಗೆಲ್ಲಲು ಸುಲಭ ಗುರಿ

ಲಂಡನ್‌: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 130 ರನ್‌ ಗುರಿ ಸಿಕ್ಕಿದೆ. 2ನೇ ಇನ್ನಿಂಗ್ಸಲ್ಲಿ ದಕ್ಷಿಣ ಆಫ್ರಿಕಾ 169 ರನ್‌ಗೆ ಆಲೌಟ್‌ ಆಯಿತು. ಬ್ರಾಡ್‌ ಹಾಗೂ ಸ್ಟೋಕ್ಸ್‌ ತಲಾ 3 ವಿಕೆಟ್‌ ಕಬಳಿಸಿದರು. ಮೊದಲ ಇನ್ನಿಂಗ್ಸಲ್ಲಿ ದಕ್ಷಿಣ ಆಫ್ರಿಕಾ 118 ರನ್‌ಗೆ ಆಲೌಟ್‌ ಆಗಿತ್ತು. ಬಳಿಕ ಆತಿಥೇಯ ಇಂಗ್ಲೆಂಡ್‌ 158 ರನ್‌ ಗಳಿಸಿ 40 ರನ್‌ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್‌್ಸನಲ್ಲಿ ದೊಡ್ಡ ಮುನ್ನಡೆ ಗಳಿಸುವ ನಿರೀಕ್ಷೆಯಲ್ಲಿದ್ದ ದ.ಆಫ್ರಿಕಾ ಉತ್ತಮ ಆರಂಭದ ಹೊರತಾಗಿಯೂ ಕುಸಿಯಿತು. 86 ರನ್‌ಗೆ ಕೊನೆ 9 ವಿಕೆಟ್‌ ಪತನಗೊಂಡವು.

ದುಲೀಪ್‌ ಟ್ರೋಫಿ: ಪಶ್ಚಿಮ, ಉತ್ತರ ವಲಯ ಸೆಮೀಸ್‌ಗೆ

ಚೆನ್ನೈ/ಪುದುಚೇರಿ: ದುಲೀಪ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಪಶ್ಚಿಮ ಮತ್ತು ಉತ್ತರ ವಲಯಗಳು ಪ್ರವೇಶಿಸಿವೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಈಶಾನ್ಯ ವಲಯದ ವಿರುದ್ಧ ಪಶ್ಚಿಮ ವಲಯ ಮೊದಲ ಇನ್ನಿಂಗ್‌್ಸ 367 ರನ್‌ ಮುನ್ನಡೆ ಆಧಾರದಲ್ಲಿ ಸೆಮೀಸ್‌ಗೇರಿದರೆ, ಪುದುಚೇರಿಯಲ್ಲಿ ನಡೆದ ಪಂದ್ಯದಲ್ಲಿ ಪೂರ್ವ ವಲಯದ ವಿರುದ್ಧ ಉತ್ತರ ವಲಯ ಮೊದಲ ಇನ್ನಿಂಗ್‌್ಸನಲ್ಲಿ 397 ರನ್‌ ಮುನ್ನಡೆ ಪಡೆದು ಅಂತಿಮ 4ರ ಸುತ್ತಿಗೇರಿತು.

Asia Cup 2022: ಪಾಕಿಸ್ತಾನಕ್ಕೆ ಸ್ಪಿನ್‌ ಬಲೆ, ಏಷ್ಯಾಕಪ್‌ಗೆ ಶ್ರೀಲಂಕಾ ದೊರೆ!

ಭಾರತ ‘ಎ’-ಕಿವೀಸ್‌ ‘ಎ’ 2ನೇ ಟೆಸ್ಟ್‌ ಡ್ರಾ

ಹುಬ್ಬಳ್ಳಿ: ಇಲ್ಲಿ ನಡೆದ ಭಾರತ ‘ಎ’ ಹಾಗೂ ನ್ಯೂಜಿಲೆಂಡ್‌ ‘ಎ’ ನಡುವಿನ 2ನೇ ಅನಧಿಕೃತ ಟೆಸ್ಟ್‌ ಡ್ರಾನಲ್ಲಿ ಅಂತ್ಯಗೊಂಡಿದೆ. ಪಂದ್ಯದ ಬಹುತೇಕ ಸಮಯ ಮಳೆಗೆ ಬಲಿಯಾಯಿತು. ಭಾರತ ‘ಎ’ ಮೊದಲ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 229 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ನ್ಯೂಜಿಲೆಂಡ್‌ ‘ಎ’ ಮೊದಲ ಇನ್ನಿಂಗ್ಸಲ್ಲಿ 2 ವಿಕೆಟ್‌ಗೆ 39 ರನ್‌ ಗಳಿಸಿತು.

ಟಿ20: ಭಾರತ ಮಹಿಳಾ ತಂಡಕ್ಕೆ ಹೀನಾಯ ಸೋಲು

ಚೆಸ್ಟರ್‌-ಲೆ-ಸ್ಟ್ರೀಟ್‌: ಇಂಗ್ಲೆಂಡ್‌ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 9 ವಿಕೆಟ್‌ ಹೀನಾಯ ಸೋಲು ಅನುಭವಿಸಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರಲ್ಲಿ 7 ವಿಕೆಟ್‌ಗೆ 132 ರನ್‌ ಗಳಿಸಿತು. ದೀಪ್ತಿ 24 ರನ್‌ ಗಳಿಸಿದರು. ಸಾರಾ ಗ್ಲೆನ್‌ 23ಕ್ಕೆ 4 ವಿಕೆಟ್‌ ಕಿತ್ತರು. ಸೋಫಿಯಾ ಡಂಕ್ಲೆ ಔಟಾಗದೆ 61 ರನ್‌ ಸಿಡಿಸಿದ ಪರಿಣಾಮ ಇಂಗ್ಲೆಂಡ್‌ 13 ಓವರಲ್ಲಿ 1 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು.

Follow Us:
Download App:
  • android
  • ios