ಕೊಲೊಂಬೊ(ಜು.05): ಶ್ರೀಲಂಕಾ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗ ಕುಸಾಲ್ ಮೆಂಡೀಸ್‌ನನ್ನು ಲಂಕಾ ಪೊಲೀಸರು ಬಂಧಿಸಿದ್ದಾರೆ. ಕೊಲೊಂಬೊ ನಗರದ ಹೊರಭಾಗದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಕುಸಾಲ್ ಮೆಂಡೀಸ್ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ ಲಂಕಾ ಪೊಲೀಸರು ಬಂಧಿಸಿದ್ದಾರೆ.

ಲಂಕಾದಲ್ಲಿ ಪಂದ್ಯ​ವೆಂದು ಮೊಹಾಲಿ ಟಿ20 ಪಂದ್ಯ ಪ್ರಸಾರ!..

ಕುಸಾಲ್ ಮೆಂಡೀಸ್ ತುರ್ತು ಕೆಲಸದ ನಿಮಿತ್ತ ಕಾರು ಡ್ರೈವ್ ಮಾಡುತ್ತಾ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ಭೀಕರ ಅಪಘಾತದಿಂದ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಮುಖ ಆರೋಪಿ ಕುಸಾಲ್ ಮೆಂಡೀಸ್‌ನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಐಪಿಎಲ್‌ನಲ್ಲಿ ಈ ಮೂರು ತಂಡಗಳ ಪರ ಆಡಲು ಬಯಸಿದ ವೇಗಿ ಶ್ರೀಶಾಂತ್

ಶ್ರೀಲಂಕಾದಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಲ್ಲಿ ಸೆಲೆಬ್ರೆಟಿಗಳು, ಕ್ರಿಕೆಟಿಗರೂ ಕಾಣಿಸಿಕೊಳ್ಳುತ್ತಿರುವುದು ಆತಂಕಾರಿಯಾಗಿದೆ. ಅಭಿಮಾನಿಗಳಿಗೆ ಮಾದರಿಯಾಗಬೇಕಿದ್ದ ಸೆಲೆಬ್ರೆಟಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.