Asianet Suvarna News Asianet Suvarna News

ಲಂಕಾದಲ್ಲಿ ಪಂದ್ಯ​ವೆಂದು ಮೊಹಾಲಿ ಟಿ20 ಪಂದ್ಯ ಪ್ರಸಾರ!

ಜೂನ್‌ 29ರಂದು ಚಂಡೀಗಢದಿಂದ 16 ಕಿ.ಮೀ ದೂರ​ದ​ಲ್ಲಿ​ರುವ ಸವಾ​ರ ಎನ್ನುವ ಗ್ರಾಮ​ದಲ್ಲಿ ನಡೆದ ಟಿ20 ಪಂದ್ಯ​ವನ್ನು ‘ಉವಾ ಟಿ20 ಲೀಗ್‌’ ಎನ್ನುವ ಹೆಸ​ರಲ್ಲಿ ಶ್ರೀಲಂಕಾದ ಬಾದುಲ್ಲಾ ನಗ​ರ​ದಲ್ಲಿ ನಡೆ​ಯು​ತ್ತಿದೆ ಎಂದು ಯುಟ್ಯೂಬ್‌ನಲ್ಲಿ ಪ್ರಸಾರ ಮಾಡ​ಲಾ​ಗಿದೆ. ಇದರ ಹಿಂದೆ ಭಾರೀ ಬೆಟ್ಟಿಂಗ್ ನಡೆದಿರುವ ಸಾಧ್ಯತೆಯಿದೆ ಎಂದು ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Punjab Police investigate tournament played in Mohali but promoted as Uva T20 league in  Lanka
Author
Mohali, First Published Jul 4, 2020, 2:46 PM IST
  • Facebook
  • Twitter
  • Whatsapp

ನವ​ದೆ​ಹ​ಲಿ(ಜು.04): ಚಂಡೀಗಢ ಬಳಿ ಆಯೋ​ಜಿ​ಸಿದ್ದ ಟಿ20 ಪಂದ್ಯವನ್ನು ಶ್ರೀಲಂಕಾದಲ್ಲಿ ನಡೆ​ಯುತ್ತಿದೆ ಎಂದು ಸುಳ್ಳು ಹೇಳಿ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ ಪ್ರಸಂಗ ಬಿಸಿ​ಸಿಐ ಗಮ​ನ​ವನ್ನೂ ಸೆಳೆದಿದೆ. 

ಜೂನ್‌ 29ರಂದು ಚಂಡೀಗಢದಿಂದ 16 ಕಿ.ಮೀ ದೂರ​ದ​ಲ್ಲಿ​ರುವ ಸವಾ​ರ ಎನ್ನುವ ಗ್ರಾಮ​ದಲ್ಲಿ ನಡೆದ ಟಿ20 ಪಂದ್ಯ​ವನ್ನು ‘ಉವಾ ಟಿ20 ಲೀಗ್‌’ ಎನ್ನುವ ಹೆಸ​ರಲ್ಲಿ ಶ್ರೀಲಂಕಾದ ಬಾದುಲ್ಲಾ ನಗ​ರ​ದಲ್ಲಿ ನಡೆ​ಯು​ತ್ತಿದೆ ಎಂದು ಯುಟ್ಯೂಬ್‌ನಲ್ಲಿ ಪ್ರಸಾರ ಮಾಡ​ಲಾ​ಗಿದೆ ಎಂದು ರಾಷ್ಟ್ರೀಯ ಮಾಧ್ಯ​ಮ​ವೊಂದು ವರದಿ ಪ್ರಕ​ಟಿ​ಸಿದೆ. 

ಈ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಯಾವೊಬ್ಬ ಕ್ರಿಕೆಟಿಗನೂ ಪಾಲ್ಗೊಂಡಿರಲಿಲ್ಲ, ಪಂಜಾಬಿನ ಕೆಲವು ಸ್ಥಳೀಯ ಕ್ರಿಕೆಟಿಗರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಲರ್‌ಫುಲ್ ಜೆರ್ಸಿ ತೊಟ್ಟು ಕ್ರಿಕೆಟ್ ಆಡಿದ್ದರು. ಶ್ರೀಲಂಕಾ ಮಾಜಿ ಆಲ್ರೌಂಡರ್ ಫರ್ವೇಜ್ ಮೊಹರೂಫ್ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತ್ತು. ಆದರೆ ಈ ವರದಿಯನ್ನು ಲಂಕಾ ಮಾಜಿ ವೇಗಿ ತಳ್ಳಿಹಾಕಿದ್ದಾರೆ. 

2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ; ಸತತ 10 ಗಂಟೆ ವಿಚಾರಣೆ ಎದುರಿಸಿದ ಸಂಗಕ್ಕಾರ !

ಇದರ ಬೆನ್ನಲ್ಲೇ ಪಂಬಾಬ್‌ ಪೊಲೀ​ಸರು ತನಿಖೆ ಆರಂಭಿ​ಸಿ​ದ್ದಾರೆ. ಪಂದ್ಯ​ದಲ್ಲಿ ದೊಡ್ಡ ಮಟ್ಟದ ಬೆಟ್ಟಿಂಗ್‌ ನಡೆ​ದಿ​ರುವ ಶಂಕೆ ಇದ್ದು, ಯಾರಾರ‍ಯರು ಭಾಗಿ​ಯಾ​ಗಿ​ದ್ದರು ಎನ್ನುವ ಮಾಹಿತಿ ಸಂಗ್ರ​ಹಿ​ಸಲು ಬಿಸಿ​ಸಿಐ ಕಾತ​ರಿ​ಸು​ತ್ತಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಹಾ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.

Follow Us:
Download App:
  • android
  • ios